ದುರ್ಗಾ ಉತ್ಸವ ನಡುವೆ ಸಿಪಿಎಂ ಪುಸ್ತಕ ಮಳಿಗೆಗಳ ನೆಲಸಮಕ್ಕೆ ಮುಂದಾದ ಸುವೇಂದು ಸರ್ಕಾರ; ಬಿಜೆಪಿ ಆಡಳಿತದ ವಿರುದ್ಧ ಜನರ ಪ್ರತಿಭಟನೆ

Date:

ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರದ ಪ್ರಮುಖ ಸಾಂಸ್ಕೃತಿಕ ಮತ್ತು ರಾಜಕೀಯ ಕೇಂದ್ರವಾದ ಜಾಧವಪುರ 8B ಬಸ್ ಸ್ಟ್ಯಾಂಡ್ ಬಳಿ ದಶಕಗಳಿಂದ ದುರ್ಗಾ ಪೂಜಾ ಸಂದರ್ಭದಲ್ಲಿ ಪುಸ್ತಕ ಮಳಿಗೆಗಳನ್ನು ಇಡಲಾಗುತ್ತದೆ. ಆದರೆ ಈ ಬಾರಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಹಬ್ಬದ ಸಂದರ್ಭದಲ್ಲಿ ಸಿಪಿಎಂನ ಪುಸ್ತಕ ಮಳಿಗೆಗಳ ನೆಲಸಮಕ್ಕೆ ಬುಲ್ಡೋಜರ್ ಕಳುಹಿಸಿದೆ. ಆದರೆ ಸ್ಥಳೀಯರು ಬಿಜೆಪಿ ಸರ್ಕಾರದ ದಬ್ಬಾಳಿಕೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಬುಲ್ಡೋಜರ್ ವಾಪಸ್ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

- Advertisement -

ಶನಿವಾರ ಸಂಜೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (KMC) ಅಧಿಕಾರಿಗಳು ಮತ್ತು ಪೊಲೀಸ್ ಪಡೆಯು ಜಾಧವಪುರದ ಪ್ರಮುಖ ಪ್ರದೇಶವಾದ 8B ಬಸ್ ನಿಲ್ದಾಣದ ಬಳಿ ಇದ್ದ ಸಿಪಿಎಂ ಪುಸ್ತಕ ಮಳಿಗೆಯ ಬಳಿಗೆ ಬುಲ್ಡೋಜರ್ ಹಾಗೂ ಕಸದ ಲಾರಿಯೊಂದಿಗೆ ಆಗಮಿಸಿತು. ಮಳಿಗೆಯ ಸಂಘಟಕರು ತಾವು ಅಗತ್ಯವಿರುವ ಎಲ್ಲ ಕಾನೂನುಬದ್ಧ ಅನುಮತಿಗಳನ್ನು ಪಡೆದಿರುವುದಾಗಿ ದಾಖಲೆಗಳನ್ನು ತೋರಿಸಿದರೂ, ಅಧಿಕಾರಿಗಳು ಮಳಿಗೆ ತೆರವುಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ರಾಯಚೂರು | ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಇದನ್ನೂ ಓದಿ: ಬಂಗಾಳದ ನವರಾತ್ರಿ- ತಾಯಿ ದುರ್ಗೆಯ ಕೇಶ ತಯಾರಕರು ಮುಸ್ಲಿಮರು- ಕೋಮು ಸೌಹಾರ್ದಕ್ಕೊಂದು ನಿದರ್ಶನ

ಈ ದಬ್ಬಾಳಿಕೆಯ ಸುದ್ದಿ ತಿಳಿಯುತ್ತಿದ್ದಂತೆ, ಜಾಧವಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಎಡಪಂಥೀಯ ಕಾರ್ಯಕರ್ತರು ಮತ್ತು ನೂರಾರು ಸಂಖ್ಯೆಯಲ್ಲಿ ಸ್ಥಳೀಯ ನಾಗರಿಕರು ಮುಗಿಬಿದ್ದು ಬುಲ್ಡೋಜರ್ ಮುಂದೆ ಮರುಚರ್ಚೆಗೆ ಅವಕಾಶವಿಲ್ಲದಂತೆ ಪ್ರತಿಭಟನೆ ಆರಂಭಿಸಿದರು.

“ಪುಸ್ತಕಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕರು ಒಗ್ಗೂಡಿದ ಪರಿಣಾಮ, ಆಡಳಿತಾಧಿಕಾರಿಗಳು ಮತ್ತು ಬುಲ್ಡೋಜರ್ ಚಾಲಕ ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಿ ಸ್ಥಳದಿಂದ ತೆರಳಬೇಕಾಯಿತು. ವಿಶೇಷವೆಂದರೆ, ಕೇವಲ 20 ಅಡಿ ದೂರದಲ್ಲೇ ಇದ್ದ ಸಂಘ ಪರಿವಾರ ಅಥವಾ ಬಲಪಂಥೀಯರ ಮತ್ತೊಂದು ಮಳಿಗೆಯನ್ನು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಹಾಗೇ ಬಿಡಲಾಗಿತ್ತು.

ಈ ಘಟನೆಗೆ ಕೆಲ ದಿನಗಳ ಹಿಂದೆ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ದುರ್ಗಾ ಪೂಜಾ ಸಮಿತಿಗಳಿಗೆ ಬಹಿರಂಗ ಎಚ್ಚರಿಕೆ ನೀಡುತ್ತಾ, ಕಮ್ಯುನಿಸ್ಟ್ ಪಕ್ಷಗಳು ತಮ್ಮ ಮಳಿಗೆಗಳಲ್ಲಿ ‘ದುರ್ಗಾ ಪೂಜಾ’ ಎಂದು ನಮೂದಿಸುವ ಬದಲು ‘ಶಾರದೋತ್ಸವ’ ಎಂದು ಬಳಸಿದರೆ ಅಂತಹವರಿಗೆ ಪೂಜಾ ಮಂಟಪಗಳ ಬಳಿ ಮಳಿಗೆ ಹಾಕಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳ | ದುರ್ಗಾ ಪೂಜೆ ಪಂಡಾಲ್‌ನಲ್ಲಿ ಮಮತಾ ಮೇಲೆ ದಾಳಿ; ಟಿಎಂಸಿ ಮುಖಂಡರೇ ಗುರಿಯೆ?

ಅಲ್ಲದೆ, ಬೊಂಗಾಂ ಪ್ರದೇಶದ ಒಂದು ನಿರ್ದಿಷ್ಟ ಪುಸ್ತಕ ಮಳಿಗೆಯ ಕುರಿತು ಬಂದಿದ್ದ ಹೈಕೋರ್ಟ್‌ನ ಅತ್ಯಂತ ಸೀಮಿತ ವ್ಯಾಪ್ತಿಯ ತೀರ್ಪನ್ನು ನೆಪವಾಗಿಟ್ಟುಕೊಂಡು, ರಾಜ್ಯದ ಇತರೆಡೆಗಳಲ್ಲಿಯೂ ಸಿಪಿಎಂ ಪುಸ್ತಕ ಮಳಿಗೆಗಳನ್ನು ಟಾರ್ಗೆಟ್ ಮಾಡಿ ತೆರವುಗೊಳಿಸಲು ಪೊಲೀಸ್ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ವಕೀಲರು ಹಾಗೂ ವಿಪಕ್ಷಗಳು ತೀವ್ರವಾಗಿ ಖಂಡಿಸಿವೆ.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹೆಚ್ಚಾದ ದಾಳಿ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ, ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷಗಳಾದ ಸಿಪಿಎಂ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಇತರ ಎಡಪಕ್ಷಗಳ ಕಾರ್ಯಕರ್ತರ ಮೇಲೆ ವ್ಯವಸ್ಥಿತವಾದ ರಾಜಕೀಯ ಹಾಗೂ ಸಾಂಸ್ಕೃತಿಕ ದಾಳಿಗಳು ಹೆಚ್ಚಾಗಿವೆ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿವೆ.

ಬಂಗಾಳದ ದೀರ್ಘಕಾಲದ ಹಬ್ಬಗಳ ಸಂಪ್ರದಾಯದಲ್ಲಿ ಪುಸ್ತಕ ಮಳಿಗೆಗಳು ಜ್ಞಾನ ಮತ್ತು ವಿಚಾರ ವಿನಿಮಯದ ಪ್ರತೀಕವಾಗಿವೆ. ಆದರೆ ಹೊಸ ರಾಜಕೀಯ ಬದಲಾವಣೆಗಳ ನಂತರ ಬೌದ್ಧಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನಗಳು ನಡೆಯುತ್ತಿವೆ ಎಂದು ಎಡಪಕ್ಷಗಳ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇವಲ ಜಾಧವಪುರ ಮಾತ್ರವಲ್ಲದೆ, ಹೌರಾದ ಶಿಬ್‌ಪುರ ಸೇರಿದಂತೆ ರಾಜ್ಯದ ವಿವಿಧಡೆ ಎಡಪಂಥೀಯರ ಪುಸ್ತಕ ಮಳಿಗೆಗಳನ್ನು ಧ್ವಂಸಗೊಳಿಸುವುದು, ಬೆಂಕಿ ಹಚ್ಚುವುದು ಮತ್ತು ಪುಸ್ತಕಗಳನ್ನು ರಸ್ತೆಗೆಸೆದು ಅವಮಾನಿಸುವಂತಹ ಘಟನೆಗಳು ವರದಿಯಾಗಿವೆ. ಬಿಜೆಪಿ ಸರ್ಕಾರದ ಸೂಚನೆಯ ಮೇರೆಗೆ ಪೊಲೀಸರು ಮತ್ತು ಸ್ಥಳೀಯ ಆಡಳಿತವು ವಿರೋಧ ಪಕ್ಷಗಳ ಸಾರ್ವಜನಿಕ ಪ್ರಚಾರದ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಮಳಿಗೆಗಳನ್ನು ಮುಚ್ಚಿಸಲು ಅಥವಾ ಬುಲ್ಡೋಜರ್ ಬಳಸಿ ತೆರವುಗೊಳಿಸಲು ಎಷ್ಟೇ ಯತ್ನಿಸಿದರೂ, ಬಂಗಾಳದ ಜನತೆ ಮತ್ತು ಎಡಪಕ್ಷಗಳು ರಸ್ತೆಬದಿಯಲ್ಲೇ ಬಟ್ಟೆಗಳನ್ನು ಹಾಸಿ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ವಿರೋಧವನ್ನು, ಸಾಂಸ್ಕೃತಿಕ ಗಟ್ಟಿತನವನ್ನು ಪ್ರದರ್ಶಿಸುತ್ತಿರುವುದು ಪ್ರಸ್ತುತ ಬಂಗಾಳದ ರಾಜಕೀಯ ಅಂಕಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಶ್ವಕಪ್ ಸಿದ್ಧತೆಗೆ ಕಿವೀಸ್ ಸರಣಿ ಪರೀಕ್ಷೆ: ಗಿಲ್– ಶ್ರೇಯಸ್ ನಾಯಕತ್ವದಲ್ಲಿ ಟೀಂ ಇಂಡಿಯಾ ಸಜ್ಜು

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬಹುನಿರೀಕ್ಷಿತ ಕ್ರಿಕೆಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ....

ʼಸುಪ್ರೀಂ ಕೋರ್ಟ್‌ ವಶಕ್ಕೂ ಮೋದಿ ಸರ್ಕಾರ ಯತ್ನʼ; ಕಪಿಲ್‌ ಸಿಬಲ್‌ ಮಾತಿನ ಹಿಂದಿನ ಮರ್ಮವೇನು?

ಕೇಂದ್ರ ಸರ್ಕಾರವು ಮಾಧ್ಯಮ ಸೇರಿದಂತೆ ಹಲವು ಸಾಂವಿಧಾನಿಕ ಹಾಗೂ ಸಾಂಸ್ಥಿಕ ವ್ಯವಸ್ಥೆಗಳನ್ನು...