ಜಿಲ್ಲೆಯ ಕಬ್ಬು ಬೆಳೆಗಾರರು ಗೌರಿ ಸಕ್ಕರೆ ಕಾರಖಾನೆಗೆ ಕಬ್ಬು ಸಾಗಿಸಿ ನಾಲ್ಕು ತಿಂಗಳು ಪೂರ್ಣಗೊಂಡಿವೆ. ಆದರೆ ಕಬ್ಬು ಪೂರೈಸಿದ ರೈತರ ಖಾತೆಗೆ ಇದು ವರೆಗೂ ಬಾಕಿ ಹಣ ಪಾವತಿಸಿಲ್ಲ, ಶೀಘ್ರವೇ ಹಣ ನೀಡದಿದ್ದರೇ ರೈತರೊಂದಿಗೆ ಸೇರಿ ಕಾರಖಾನೆಗೆ ಬೀಗ ಜಡಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಭಾಲ್ಕಿ ತಾಲೂಕಿನ ಬಾಜೋಳಗಾ ಕ್ರಾಸ್ ಸಮೀಪದ ಗೌರಿ ಸಕ್ಕರೆ ಕಾರಖಾನೆಗೆ ರೈತರೊಂದಿಗೆ ಶನಿವಾರ ಭೇಟಿ ನೀಡಿ ಸಾಂಕೇತಿಕ ಧರಣಿ ನಡೆಸಿ ಅವರು ಮಾತನಾಡಿ, ʼಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಅವರು ಕಬ್ಬು ಸಾಗಿಸಿದ ರೈತರಿಗೆ ಇದುವರೆಗೂ ಬಾಕಿ ಹಣ ನೀಡಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ನಿಗದಿ ಪಡಿಸಿದ ಬಾಕಿ ಹಣ ನೀಡಬೇಕುʼ ಎಂದರು.
ʼಸದ್ಯದಲ್ಲೇ ಕಬ್ಬು ಬೆಳಗಾರರ ಖಾತೆಗೆ ಬಾಕಿ ಉಳಿದಿರುವ ಹಣ ಜಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಕೈಬಿಡುತ್ತಿದ್ದೇವೆ. ವಿಳಂಬ ಮಾಡಿದರೇ ಮುಂದಿನ ವಾರ ಉಗ್ರ ಹೋರಾಟ ಮಾಡಲಾಗುವುದುʼ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | 371(ಜೆ) ಜಾರಿಯಾದರೂ ಕಲ್ಯಾಣ ಕರ್ನಾಟಕ ʼಚಹರೆʼ ಬದಲಾಗಲಿಲ್ಲ
ಈ ಸಂದರ್ಭದಲ್ಲಿ ರೈತ ಸಂಘದ ಪ್ರಮುಖರಾದ ಖಾಸೀಂ ಅಲಿ, ಮಲ್ಲಿಕಾರ್ಜುನ ಬಿರಾದಾರ್, ನಾಗಶೆಟ್ಟೆಪ್ಪ ಲಂಜವಾಡೆ, ರುದ್ರಯ್ಯ ಸ್ವಾಮಿ, ಕಾಶಿನಾಥ ಬಿರಾದಾರ್, ವಿಶ್ವನಾಥ ಧನ್ನೂರೆ, ಸುರೇಶ ಅಲ್ಲೂರೆ, ಶರಣಯ್ಯ ಸ್ವಾಮಿ, ಸುಭಾಷ, ಬಸವರಾಜ ಪಾಟೀಲ್, ಖಾಸೀಂ ಖಾನ್, ರಾಜಕುಮಾರ ಬಾಲಕುಂದೆ, ಹಣಮಂತಪ್ಪ ಘಾಲೆ, ದಿಲೀಪ ಬಿರಾದಾರ್, ಸಿದ್ರಾಮ ಶೆಟಕಾರ್, ವೀರಾರೆಡ್ಡಿ ಪಾಟೀಲ್, ಶಿವಶಂಕರ ಬಿರಾದಾರ್, ಸನ್ಮುಖಪ್ಪ ಆಣದೂರ, ಕೆ.ಎಸ್.ಖಾನಸಾಬ್, ರವೀಂದ್ರ ಬಿರಾದಾರ್, ಸೋಮನಾಥ ಕೋಣಗುತ್ತೆ, ಧೂಳಪ್ಪ ಸೋರಳ್ಳೆ, ವಿಠಲ ರೆಡ್ಡಿ ಆಣದೂರ, ರಾಜಕುಮಾರ, ರೇವಣಸಿದ್ದ, ವೀರಶೆಟ್ಟಿ ಕಲಾ, ದತ್ತುರಾವ ಬಿರಾದಾರ್, ನಾಗಶೆಟ್ಟಿ ಖಂದಾರೆ, ಬಾಬುರಾವ ಸೇರಿದಂತೆ ಹಲವರು ಇದ್ದರು.





