ಕೇಂದ್ರ ಲೋಕಸೇವಾ ಆಯೋಗವು 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಪರೀಕ್ಷೆಯಲ್ಲಿ ರಾಜ್ಯದಿಂದ ಒಟ್ಟು 26 ಮಂದಿ ತೇರ್ಗಡೆಯಾಗಿದ್ದಾರೆ.
2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಬೀದರ್ ನಗರದ ನಿವಾಸಿ ಮೊಹ್ಮದ್ ಅಸೀಮ್ ಮುಜ್ತಬಾ ಅವರು 481ನೇ ರ‍್ಯಾಂಕ್ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಎಮ್.ಡಿ.ಅಸೀಮ್ 2022ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ರೈಲ್ವೆ ಸರ್ವಿಸ್‌ಗೆ ಆಯ್ಕೆಯಾಗಿದ್ದರು. ಈಗ ಐದನೇ ಪ್ರಯತ್ನದಲ್ಲಿ 481ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಅಸೀಮ್ ಅವರ ತಂದೆ ಎಮ್.ಡಿ.ಎಜಾಜ್ ಬ್ರೀಮ್ಸ್ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?
“ನನ್ನ ಮಗ 2022ನೇ ಸಾಲಿನ ಯುಪಿಎಸ್ಸಿ ಪರೀಕ್ಷೇಯಲ್ಲಿ ಪಾಸಾಗಿದ್ದನು. ಈಗ ಮತ್ತೊಂದು ಪ್ರಯತ್ನದಲ್ಲಿ 481ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ. ಅವನ ಪ್ರಯತ್ನಕ್ಕೆ ಯಶಸ್ಸು ದೊರಕಿದೆ. ಈಗ ಐಪಿಎಸ್ ಸಿಗುವ ಸಾಧ್ಯತೆಯಿದೆ” ಎಂದು ಅಸೀಮ್ ತಂದೆ ಎಮ್.ಡಿ.ಎಜಾಜ್ ಈದಿನ.ಕಾಮ್ ಜೊತೆಗೆ ಮಾತನಾಡಿ ತಿಳಿಸಿದ್ದಾರೆ.