ಮಂಡ್ಯ | ಬಾಡೂಟ, ಬಾಡಿಲ್ಲದೂಟ ಎರಡೂ ಇರಲಿ

Date:

Advertisements

ಬಾಡೂಟ, ಬಾಡಿಲ್ಲದ ಊಟ ಎರಡೂ ಇರಲಿ. ಮಂಡ್ಯದಲ್ಲಿ ನಡೆಯುವ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವು ದೊರೆಯುಂತಾಗಬೇಕು, ಆ ಮೂಲಕ ಮಂಡ್ಯ ನೆಲ ಆಹಾರ ಸಂಸ್ಕೃತಿಯನ್ನು ಗೌರವಿಸುವ ಕೆಲಸವನ್ನು ಮಂಡ್ಯ ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸಬೇಕೆಂದು ವಿವಿಧ ಪ್ರಗತಿಪರ ಸಂಘಟನೆಗಳು ಒಕ್ಕೊರಲ ತೀರ್ಮಾನಕ್ಕೆ ಬಂದಿವೆ.

IMG 20241208 WA0049 1
ಪ್ರಗತಿಪರ ಸಂಘಟನೆಗಳ ಸಭೆ

ಭಾನುವಾರ ಸಂಜೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನವನದಲ್ಲಿ ಸಭೆ ಸೇರಿದ ಹಲವು ಸಂಘಟನೆಗಳ ಮುಖಂಡರು ಮಾಂಸಾಹಾರ ಬೇಕು ಎಂಬುದು ಕೇವಲ ಆಹಾರಕ್ಕಾಗಿಯಲ್ಲ, ಬಹುಜನರ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುದಕ್ಕಾಗಿ ಎಂಬುದನ್ನು ಸಾಹಿತ್ಯ ಸಮ್ಮೇಳನದ ಸಂಘಟಕರು ಅರ್ಥ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.

ಇದನ್ನು ನೋಡಿದ್ದೀರಾ? ಬಾಡೂಟದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದೇನು?

Advertisements

ಇದುವರೆಗೆ ನಡೆದ 86 ಸಮ್ಮೇಳನಗಳಲ್ಲಿ ಮಾಂಸಾಹಾರವನ್ನು ನೀಡದೇ ಬಹುಜನರ ಆಹಾರ ಸಂಸ್ಕೃತಿಯನ್ನು ಅವಮಾನಿಸಲಾಗಿದೆ, ಹಾಗಾಗಿ ಮಾಂಸಾಹಾರ ನಿಷೇಧವನ್ನು ವಾಪಸ್ ಪಡೆದು, ಮಾಂಸಾಹಾರ  ಆಹಾರ ಸಂಸ್ಕೃತಿಯನ್ನು ಗೌರವಿಸಬೇಕೆಂದು ಒತ್ತಾಯಿಸಿದರು.

ಬಾಡೂಟ, ಬಾಡಿಲ್ಲದ ಊಟ ಎರಡೂ ಇರಲಿ

ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬಾಡಿಲ್ಲದ ಊಟ ಎರಡೂ ಇರಲಿ. ಯಾವುನ್ನು ತಿನ್ನಬೇಕು ಎಂಬುದನ್ನು ಜನರ ವಿವೇಚನೆ ಬಿಡಬೇಕು. ಸಸ್ಯಹಾರವೇ ಶ್ರೇಷ್ಠ ಎಂಬ ಹಲವು ದಶಕಗಳ ಹೇರಿಕೆಯನ್ನು ಮಂಡ್ಯ ಸಮ್ಮೇಳನದಲ್ಲಿ ಸುಳ್ಳಾಗಿಸುವ ಮೂಲಕ ಮಾಂಸಾಹಾರಕ್ಕೂ ಅವಕಾಶ ನೀಡಬೇಕೆಂಬ ಅಭಿಪ್ರಾಯ ಕೇಳಿ ಬಂತು.

ನಾಳೆ ಜಿಲ್ಲಾಧಿಕಾರಿಗೆ ಮನವಿ

ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ನಾಳೆ (ಡಿ.9)ರಂದು ಮಂಡ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಸಭೆಯು ತೀರ್ಮಾನ ಕೈಗೊಂಡಿತು.

ಸಾಂಕೇತಿಕ ಬಾಡೂಟ

ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ  ಮಂಡ್ಯದ ನೆಲದಲ್ಲಿ ಬಾಡೂಟ ಇಲ್ಲದ ಮೇಲೆ! ಎಂತಹಾ ಅತಿಥಿ ಸತ್ಕಾರವಾದೀತು.ಮಾಂಸಾಹಾರದ ಆಯ್ಕೆ ಇರದಿದ್ದರೆ ಪರ್ಯಾಯವಾಗಿ ಬಾಡೂಟ ಪ್ರಿಯಯರಿಗೆ ಮಂಡ್ಯ ಶೈಲಿಯ ನಾಟಿ ಕೋಳಿ, ಬೋಟಿ ಗೊಜ್ಜು, ಮುದ್ದೆ ಊಟ ಆಯೋಜಿಸುವ ಕುರಿತು ವಿವಿಧ ಸಂಘಟನೆಗಳು ಚಿಂತನೆ ನಡೆಸಿವೆ.

ಇದನ್ನು ಓದಿದ್ದೀರಾ? ಕನಕಪುರ | ಉಪಮುಖ್ಯಮಂತ್ರಿಯ ಹಳ್ಳಿಯಲ್ಲಿಯೂ ಜನರು ತಿರುಗಾಡಲು ಬಸ್ ಸೌಲಭ್ಯವಿಲ್ಲ!

ಸಭೆಯಲ್ಲಿ ಸಿಪಿಐಎಂ ನ ಟಿ.ಎಲ್.ಕೃಷ್ಣೇಗೌಡ, ಸಿಐಟಿಯು ಕುಮಾರಿ, ದೇವರಾಜ ಅರಸು ಹಿಂದುಳಿದ ವೇದಿಕೆಯ ಎಲ್.ಸಂದೇಶ್, ಕರ್ನಾಟಕ ಜನಶಕ್ತಿಯ ಪೂರ್ಣಿಮ, ಗ್ರಾ.ಪಂ.ಸದಸ್ಯರ ಒಕ್ಕೂಟದ ನಾಗೇಶ್, ಕರುನಾಡ ಸೇವಕರು ಸಂಘಟನೆಯ ನಾಗಣ್ಣಗೌಡ, ಕ್ಷೀರಸಾಗರ ಮಿತ್ರಕೂಟದ ಕೀಲಾರ ಕೃಷ್ಣೇಗೌಡ, ಸುರೇಶ್, ಚಿತ್ರಕೂಟದ ಅರವಿಂದ ಪ್ರಭು, ಜಾಗೃತ ಕರ್ನಾಟಕದ ಸಂತೋಷ್, ನಗರಕೆರೆ ಜಗದೀಶ್, ನೆಲದನಿ ಬಳಗದ ಲಂಕೇಶ್, ಕರವೇ ಮುಖಂಡ ಹೆಚ್.ಡಿ.ಜಯರಾಂ, ಕರುನಾಡ ಸೇವಕರು ಸಂಘಟನೆಯ ನಾಗಣ್ಣಗೌಡ, ಸಮಾನ ಮನಸ್ಕರ ವೇದಿಕೆ ನರಸಿಂಹಮೂರ್ತಿ, ಟಿ.ಡಿ.ನಾಗರಾಜು, ಶೋಷಿತರ ಒಕ್ಕೂಟದ ಸುಂಡಹಳ್ಳಿ ಮಂಜುನಾಥ್, ಮುಖಂಡರಾದ ಚಿನಕುರಳಿ ರಮೇಶ್, ಸಿ.ಎಂ.ದ್ಯಾವಪ್ಪ, ತಿರುಮಲಾಪುರ ನಾರಾಯಣ್, ವಕೀಲ ಚೀರನಹಳ್ಳಿ ಲಕ್ಷ್ಮಣ್, ಜಿ.ಎನ್.ಕೆಂಪರಾಜು, ಸಬ್ಬನಹಳ್ಳಿ ಶಶಿಧರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X