ಜನರ ಸೇವೆಗೆ ಜನಸೇವಾ ಕೇಂದ್ರ ತೆರೆಯಲಾಗಿದೆ. ಜನಸೇವಾ ಕೇಂದ್ರ ಆರೋಗ್ಯ ಮತ್ತು ಶಿಕ್ಷಣ ಸಾರ್ವಜನಿಕ, ಆಸಕ್ತ ಸಮುದಾಯದ ಒಳಿತಿಗೆ ಬೇಕಿರುವ ಹಾಗೂ ಪ್ರತಿಯೊಬ್ಬರಿಗೂ ಸೇವೆ ದೊರಕಿಸುವ ನಿಟ್ಟಿನಲ್ಲಿ ಕೇಂದ್ರವನ್ನು ತೆರೆಯಲಾಗಿದೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ ಹೇಳಿದರು.
ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರ ಆಪ್ತ ಸಹಾಯಕ ಸ್ನೇಹಜೀವಿ ಗೋಪಾಲ್ ಹೂರೆಯಲ ಅವರ ಬಳಗದವರು ಜನಸೇವಾ ಕೇಂದ್ರ ತೆರೆದಿದ್ದು, ನೂತನ ಜನಸ್ನೇಹಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
“ಆದಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಇತರೆ ಸಮಸ್ಯೆಗಳು ಮತ್ತು ಪ್ರಮಾಣ ಪತ್ರ ಪಡೆಯಲು ಅನೇಕ ಅವಿದ್ಯಾವಂತರು ದಿನಂಪ್ರತಿ ತಾಲೂಕು ಕಚೇರಿಯ ಬಳಿ ಅಲೆದಾಡುತ್ತಿರುವುದನ್ನು ಕಾಣಬಹುದು. ಹಾಗಾಗಿ ಇಂತಹ ಸಾರ್ವಜನಿಕರಿಗೆ ಜನಸೇವಾ ಕೇಂದ್ರ ಮುಖಾಂತರ ಅವರ ಸಮಸ್ಯೆಗಳನ್ನು ಬಗೆಹರಿಸಲು ಸ್ನೇಹಜೀವಿ ಗೋಪಾಲ್ ಅವರ ಗೆಳೆಯರ ಬಳಗ ಬದ್ಧವಾಗಿದೆ” ಎಂದರು.
ಸಾಹಿತಿ ಕಾಳಿಂಗ ಸ್ವಾಮಿ ಸಿದ್ದಾರ್ಥ್ ಮಾತನಾಡಿ, “ಸಚಿವ ಮಹದೇವಪ್ಪ ಅವರ ಆಪ್ತ ಸಹಾಯಕ ಗೋಪಾಲ್ ಹೂರೆಯಲ ಗೆಳೆಯರ ಬಳಗದ ಸೇವೆ ಉತ್ತಮವಾಗಿದ್ದು, ತಾಲೂಕಿನ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿ, ಬಸವರಾಜ್ ಹಾಗೂ ಸಿದ್ದು ಸ್ನೇಹಿತರ ಶ್ರಮವನ್ನು ಶ್ಲಾಘಿಸಿದರು.
ಮಾನವ ಬಂದುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಡ್ರಳ್ಳಿ ಮಾತನಾಡಿ, “ಗೋಪಾಲ್ ಗೆಳೆಯರ ಬಳಗ ಈ ಹಿಂದೆ ತೆರೆಮರೆಯಲ್ಲಿ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿತ್ತು. ಕೊರೊನಾ ಸಂದರ್ಭದಲ್ಲಿ ಗೆಳೆಯರ ಬಳಗ ಹಲವಾರು ಜನರ ಉಪಯೋಗಿ ಕೆಲಸಗಳನ್ನು ಮಾಡಿದ್ದರು. ಹಾಗೆ ಜನಸೇವಾ ಕೇಂದ್ರಕ್ಕೆ ಜೊತೆಯಾಗಿರುವ ಚಿಂತಕ ಕಾಳಿಂಗ ಸ್ವಾಮಿ ಸಿದ್ದಾರ್ಥ್ ಅವರ ಕೆಲಸಗಳು ಬಹಳ ಸ್ಪೂರ್ತಿದಾಯಕ ಹಾಗೂ ಸಮಾಜಸೇವೆಗೆ ಬಹಳ ಶ್ರಮವಹಿಸಿ ಕೆಲಸ ಮಾಡುತ್ತಾರೆ” ಎಂದು ತಿಳಿಸಿದರು.
ಈ ಸಿದ್ದಿ ಓದಿದ್ದೀರಾ? ರಾಯಚೂರು | ಮಾವಿನಕೆರೆ ಸಂರಕ್ಷಣೆಗೆ ಆದೇಶ
ಕಾರ್ಯಕ್ರಮದಲ್ಲಿ ಡಾ. ಕೃಷ್ಣಮೂರ್ತಿ ಚಮರಂ, ಸಾಹಿತಿ ರಾಘವೇಂದ್ರ ಅಪುರ, ಜನಜಾಗೃತಿ ಅಧ್ಯಕ್ಷ ಮಹೇಶ್ ರಾಘವಾಪುರ, ನಾಗರಾಜ್, ಬಸವರಾಜ್, ಸುಬ್ರಹ್ಮಣ್ಯ ಸ್ವಾಮಿ, ಸಿದ್ದರಾಜ್ ಸೇರಿದಂತೆ ಇತರರು ಇದ್ದರು.