ಮೈಸೂರಿನಿಂದ ಉದಯಪುರಕ್ಕೆ ಹೊರಟಿದ್ದ ಹಮ್ಸಫರ್ ಎಕ್ಸ್ಪ್ರೆಸ್ ರೈಲಿನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ನಡೆದಿಲ್ಲ.
ಗುರುವಾರ ಬೆಳಗ್ಗೆ 11:45ಕ್ಕೆ ಹೊರಟಿದ್ದ ರೈಲು ಚನ್ನಪಟ್ಟಣ ಬಳಿಯ ವಂದಾರಗುಪ್ಪೆ ಬಳಿ ಚಲಿಸುವಾಗ ರೈಲಿನ ಎಂಜಿನ್ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಎಚ್ಚೆತ್ತುಕೊಂಡ ಲೋಕೊಪೈಲಟ್, ರೈಲ್ವೇ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದು, ರೈಲು ನಿಲ್ಲಿಸಿದ್ದಾರೆ.
ಕೂಡಲೇ, ಅಗ್ನಿಶಾಮಕ ದಳ, ರೈಲ್ವೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಿದ್ದಾರೆ. ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಕೆಲ ರೈಲುಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದೆ.
good info