ಚನ್ನಪಟ್ಟಣ : ಸೋತ ಬಳಿಕ ಮತ್ತೆ ಮುಸ್ಲಿಮರ ಮೇಲೆ ಗೂಬೆ ಕೂರಿಸಿದ ನಿಖಿಲ್ ಕುಮಾರಸ್ವಾಮಿ

Date:

Advertisements

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ವಿರುದ್ಧ ಎನ್‌ಡಿಎ ಅಭ್ಯರ್ಥಿ, ಮಾಜಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ 25,413 ಮತಗಳ ಅಂತರದಿಂದ ಸೋತಿದ್ದಾರೆ. ಆ ಮೂಲಕ ಮಂಡ್ಯ ಲೋಕಸಭೆಯ ಸೋಲು, ರಾಮನಗರ ವಿಧಾನಸಭಾ ಕ್ಷೇತ್ರದ ಸೋಲಿನೊಂದಿಗೆ ಮೂರನೇ ಬಾರಿಗೆ ಚುನಾವಣೆಯಲ್ಲಿ ಸೋತಿದ್ದಾರೆ.

ತಮ್ಮ ಸೋಲಿನ ಬಳಿಕ ಬಿಡದಿ ತೋಟದ ಮನೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, ತನ್ನ ಸೋಲಿನ ಹೊಣೆಯನ್ನು ಮತ್ತೆ ‘ಒಂದು ಸಮುದಾಯ’ ಎಂದು ಮತ್ತೊಮ್ಮೆ ಉಚ್ಛರಿಸುವ ಮೂಲಕ ಮುಸ್ಲಿಮರ ಮೇಲೆ ಗೂಬೆ ಕೂರಿಸಿದ್ದಾರೆ.

ಜೆಡಿಎಸ್‌ ಮುಖಂಡರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿಯವರ ಪುತ್ರ, “ಚನ್ನಪಟ್ಟಣ ಚುನಾವಣೆಯ ಫಲಿತಾಂಶ ನನಗೆ ಆಘಾತ ತಂದುಕೊಟ್ಟಿರುವುದರಲ್ಲಿ ಯಾವುದೇ ಸಂಶಯವಿಲ್ಲ. ನನ್ನ ಸೋಲಿಗೆ ಆ ಒಂದು ಸಮುದಾಯದ ಮತ ಒಂದೆಡೆ ಕ್ರೋಢೀಕರಣವಾದದ್ದು ಕೂಡ ಕಾರಣ. ಆ ಸಮುದಾಯಕ್ಕೆ ಎಷ್ಟೇ ಉಪಕಾರ ಮಾಡಿದ್ರೂ, ಆ ಸಮುದಾಯ ನನಗೆ ಮತ ಹಾಕಿಲ್ಲ” ಎಂದು ಹೇಳಿಕೆ ನೀಡುವ ಮೂಲಕ ಮತ್ತೆ ಮುಸ್ಲಿಮರ ಮೇಲೆ ಗೂಬೆ ಕೂರಿಸಿದ್ದಾರೆ. ರಾಮನಗರದ ಸೋಲಿನ ಸಂದರ್ಭದಲ್ಲೂ ನಿಖಿಲ್ ಕುಮಾರಸ್ವಾಮಿ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು.

Advertisements
ನಿಖಿಲ್

“ಬಹುಷಃ ಒಂದು ಸಮುದಾಯದ ಮತಗಳು ಕಾಂಗ್ರೆಸ್‌ನ ಪರ ದೊಡ್ಡಮಟ್ಟದಲ್ಲಿ ಕ್ರೋಢೀಕರಿಸಿದ್ದರು. ಇಂದಿನ ಸೋಲಿನ ಅಂತರವನ್ನು ನೋಡುವಾಗ ಅದು ಗೊತ್ತಾಗುತ್ತದೆ. ಜೆಡಿಎಸ್ ಪಕ್ಷ ಸ್ಥಾಪನೆಯಾದಾಗಿನಿಂದ ಆ ಒಂದು ಸಮುದಾಯದ ಪರವಾಗಿ ನಾವು ಅನೇಕ ಸಂದರ್ಭದಲ್ಲಿ ಜೊತೆ ನಿಂತಿದ್ದೇವೆ. ಮೀಸಲಾತಿ ಕೊಟ್ಟಿರುವಂತಹ ಸಾಕಷ್ಟು ಉದಾಹರಣೆಗಳಿವೆ. ಎಲ್ಲವನ್ನೂ ಈಗ ಬದಿಗಿಟ್ಟು ಈ ಉಪಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಸ್ಪಂದನೆಯನ್ನು ನೀಡಿಲ್ಲ. ಹಳ್ಳಿಯ ಕಡೆ ಇರುವ ಜನ ನನ್ನನ್ನು ಕೈ ಬಿಟ್ಟಿಲ್ಲ. ಅವರು ನನಗೆ ಮತ ಹಾಕಿದ್ದರಿಂದಲೇ 87 ಸಾವಿರದಷ್ಟು ಮತ ನನಗೆ ದೊರಕಿದೆ” ಎಂದು ತಿಳಿಸಿದರು.

“ಜನರ ಪ್ರೀತಿ, ವಾತ್ಸಲ್ಯ ಸಿಕ್ಕಿದೆ. ನಾನು ಈ ಜಿಲ್ಲೆಯ ಮಗ ಅಂತ ಭಾವಿಸುತ್ತೇನೆ. ಚನ್ನಪಟ್ಟಣ ಫಲಿತಾಂಶ ಆಘಾತ ತಂದಿದೆ. ಒಬ್ಬ ಯುವಕನಿಗೆ 87 ಸಾವಿರ ಮತ ಬಂದಿದೆ. ಇದು ಬಯಸದೇ ಬಂದ ಚುನಾವಣೆ. ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲರಿಗೂ ಧ್ವನಿಯಾಗಿ ಇರುತ್ತೇನೆ. ಎಲ್ಲಿ ನಾವು ಎಡವಿದ್ದೇವೆ. ಎಲ್ಲಿ ಸರಿಪಡಿಸಿಕೊಳ್ಳವಬೇಕು ಅಂತ ಕೂತು ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿಯಿಂದ ಪಕ್ಷ ಅಲ್ಲ. ಈ ಸೋಲಿನಿಂದ ನಾನು ಎದೆಗುಂದಲ್ಲ. ಯುವ ಸಮುದಾಯಗಳಿಗೆ ಧ್ವನಿಯಾಗುವ ಕೆಲಸ ಮಾಡುತ್ತೇನೆ” ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

“ಇಲ್ಲಿಯವರೆಗೂ ನಾನು ಗೆಲುವು ನೋಡಿಲ್ಲ. ಇದು ನನ್ನ ಮೂರನೇ ಸೋಲು. ಸೋಲನ್ನು ಒಪ್ಪಿಕೊಳ್ಳುತ್ತೇನೆ. ಸೋತ್ವಿ ಅಂತ ಮೂಲೆಯಲ್ಲಿ ಕುಳಿತುಕೊಳ್ಳಲ್ಲ. ಸಾಮಾನ್ಯ ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ನಾನು ಋಣಿಯಾಗಿರುತ್ತೇನೆ. ಮತದಾರರು ಯಾವುದೇ ರೀತಿಯ ನಿರ್ಣಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಅವರಿಗಿದೆ” ಎಂದು ನಿಖಿಲ್‌ ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆಲುವು: ನಿಂದನೆಗಳಿಂದ ಬಚಾವಾದ ಸಚಿವ ಜಮೀರ್

2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಭದ್ರಕೋಟೆ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಜನ್ಮ ನೀಡಿದ್ದ ಕ್ಷೇತ್ರವಾಗಿದ್ದ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಅನಿತಾ ಕುಮಾರಸ್ವಾಮಿ ಅವರು ಮಗನಿಗಾಗಿ ಪಕ್ಷ ಬಿಟ್ಟುಕೊಟ್ಟರೆ, ಮೊಮ್ಮಗನನ್ನು ಗೆಲ್ಲಿಸಲು ಸ್ವತಃ ಹೆಚ್​ಡಿ ದೇವೇಗೌಡರೇ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕ್ಷೇತ್ರ ಸಂಚಾರ ನಡೆಸಿ ಮತ ಯಾಚಿಸಿದ್ದರು. ಆದರೆ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್‌ ಅವರ ವಿರುದ್ಧ ಸೋಲು ಕಂಡಿದ್ದರು. ಆ ವೇಳೆಯಲ್ಲಿ ಕೂಡ ನನ್ನ ಸೋಲಿಗೆ ಮುಸ್ಲಿಮರು ಕಾರಣ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಅದನ್ನೇ, ಚನ್ನಪಟ್ಟಣ ಸೋಲಿನ ನಂತರ ಉಲ್ಲೇಖ ಮಾಡಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

7 COMMENTS

  1. ಸತ್ಯವನ್ನೇ ಹೇಳಿದ್ದರಲ್ಲವೇ. ಅದೇನೇ ಬಂದರೂ ಮುಸ್ಲಿಂ ಸಮುದಾಯ ಕಾಂಗ್ರೆಸ್ ಬಿಟ್ಟು ಮತ ಹಾಕುವುದಿಲ್ಲ.

  2. ಗೂಬೆ ಕೂರಿಸುವುದು ಅನ್ನಲ್ಲ ಅದನ್ನ, ಸತ್ಯ ಹೇಳೋದು ಅಂತ್ತಾರೆ. ಯಾಕಂದ್ರೆ ಆ ಸಮುದಾಯ ಅವರು ಇಟ್ಟ ನಂಬಿಕೆ ಉಲ್ಸ್ಕೊಂಡಿಲ್ಲ. ಹೋಗ್ಲಿ ಬಿಡಿ, ಸರ್ಕಾರ ಅವರದ್ದೇ ಇದೆ ಅದೇನ್ ಅಬಿವೃದ್ಧಿ ಮಾಡ್ತಾರೋ ನೋಡೋಣ, 10% ಕಮಿಷನ್ ವಸೂಲಿ ಮಾಡ್ಕೊಂಡು ಕಾಲ ಹರಣ ಮಾಡದಿದ್ರೆ ಸಾಕು.

  3. ಮುಸ್ಲಿಂ ಅವರು ತಿಕ ಹೊಡೆಯೋದು ಈಗಲಾದರೂ ಗೊತ್ತಾಯಿತಲ್ಲ ಇನ್ನು ಮುಂದೆ ಆದರೂ ಬುದ್ಧಿ ಕಲಿರಿ…

  4. ಈಗಲಾದರೂ ಬುದ್ಧಿ ಕಲಿಯಿರಿ. ಮುಸ್ಲಿಮರ ಓಲೈಕೆ ಮಾಡುವುದರಿಂದ ನಿಮಗೆ ಏನೂ ಲಾಭ ಇಲ್ಲ ಅಂತ. ಇನ್ನಾದರೂ ಹಿಂದೂ ಮತ ಕ್ರೋಢೀಕರಿಸುವತ್ತ ಯೋಚಿಸಿ. ಮಹಾರಾಷ್ಟ್ರ ದಲ್ಲಿ ಹೇಗೆ ಹಿಂದೂ ಮತ ಗಳ ಕ್ರೋಢೀಕರಣ ಆಗಿದೆ ನೋಡಿ. ನಿಮ್ಮ ತಂದೆ, ಅಜ್ಜ ಎಲ್ಲರೂ ಅಷ್ಟೆ, ಕಲಿಯಬೇಕಾದ ಪಾಠ ಇದೆ. ಪುತ್ರ ವ್ಯಾಮೋಹ ಬಿಟ್ಟು ಗೆಲ್ಲುವವರಿಗೆ ಟಿಕೆಟ್ ಕೊಡಬೇಕು ಎಂದು. ನೀವು ಹೇಳಿದ ಮಾತು- ಒಟ್ಟಿನಲ್ಲಿ NDA ಅಭ್ಯರ್ಥಿ ಗೆಲ್ಲಬೇಕು ಅಂತ. ಆದರೂ ಕೊನೆಗೆ ಟಿಕೆಟ್ ಕೊಡುವಾಗ ಪುತ್ರ ವ್ಯಾಮೋಹ ಬಂದೆ ಬಿಟ್ಟಿತು. ಇದುವೇ ನಿಮ್ಮ ಸೋಲಿಗೆ ಕಾರಣ ಎಂಬುದನ್ನು ಈಗಲಾದರೂ ಅರ್ಥ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X