ಹುಲಸೂರ ತಾಲ್ಲೂಕಿನ ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ಜರುಗುವ ಶರಣ ಉರಿಲಿಂಗಪೆದ್ದಿ ಉತ್ಸವ, ಶಿವಲಿಂಗೇಶ್ವರ ಶಿವಯೋಗಿಗಳ 56ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಜರುಗುವ ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನಕ್ಕೆ ಡಾ.ಚನ್ನವೀರ ಶಿವಾಚಾರ್ಯ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಫೆಬ್ರುವರಿ 22 ಮತ್ತು 23ರಂದು ಜರುಗಲಿರುವ ಸಮ್ಮೇಳನ ಕುರಿತು ಬೇಲೂರಿನ ಮಠದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಹಿತ್ಯ, ಧರ್ಮ ಜೊತೆಗೆ ಸಮಾಜವು ಸಾಮರಸ್ಯಕ್ಕೆ ಒತ್ತು ನೀಡಲು ಹಾಗೂ ಯುವಕರಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ ಎಂದು ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ ಹಾಗೂ ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಜಕಾರಣಿಗಳು ಹೇಳಿದಂತೆ ಮಠಾಧೀಶರು ಕೇಳುವ ಸ್ಥಿತಿಯಿದೆ : ಸಾಣೇಹಳ್ಳಿ ಶ್ರೀ
ಸಭೆಯಲ್ಲಿ ಹುಲಸೂರ ತಹಸೀಲ್ದಾರ ಶಿವಾನಂದ ಮೇತ್ರೆ, ಮುಖಂಡರಾದ ಜಗನ್ನಾಥ ಚಿಲ್ಲಾಬಟ್ಟಿ, ಸುರೇಶ ಕಾನೇಕರ್, ಡಾ.ರಾಜಕುಮಾರ ಮಾಳಗೆ, ಡಾ.ಸಂಜುಕು ಮಾರ ನಡುಕರ್ ಸೇರಿದಂತೆ ಪ್ರಮುಖರಾದ ಸಂಗಮೇಶ ಜವಾದಿ, ರಾಜಕುಮಾರ ಮೋರೆ, ರಾಜಕುಮಾರ ಮಾಳಗೆ, ಸಂಜುಕುಮಾರ ಖೇಲೆ, ಭೀಮಶಾ ವಾಘಮಾರೆ, ನಿತ್ಯಾನಂದ ಮಂಠಾಳಕರ್, ಮಹಾಲಿಂಗ ದೇವರು, ನವನಾಥ ಬೆಳ್ಳೆ, ಪ್ರಕಾಶ ಸಿಂಗೆ, ಬಸವಸಾಗರ ತುತಾರೆ, ನಾಗಪ್ಪ ನಿಣ್ಣೆ, ಗುರುನಾಥ, ಗೌತಮ ವಾಘಮಾರೆ, ಯೋಗೇಶ ರಾಜಗುರು, ನಿಖೀಲ್ ಬೆಳ್ಳೆ, ಮಚಿಂದ್ರ ಕದಮ್, ರಾಜಪ್ಪ ನಂದುಡೆ, ಸಿದ್ರಾಮ ವಾಘಮಾರೆ, ದಶರಥ ರಾಜಗುರು,ಮಸ್ತಾನ ಪಟೇಲ್, ದತ್ತಾತ್ರೇಯ ಸುಭಾನೆ,ಸಂಜೀವ ತಾಂಬುಳೆ, ಅಶೋಕ್ ಗುಪ್ತಾ, ಅವಿನಾಶ್ ಪಂಚಾಳ, ಚೇತನ್ ರಾಧು, ಗಣೇಶ, ಸನ್ಮುಖ, ಶ್ರಾವಣ,ರವಿ
ನಾಗನಾಥ ಬನಸುಡೆ, ಶೇಖ ಮಿರಾನ ಸಾಬ್, ಜಗನ್ನಾಥ ಮೆಟಾರೆ ಇದ್ದರು.