ಮೈಸೂರು | ಉತ್ತಮ ಆರೋಗ್ಯಕ್ಕೆ ಉಳಿದಿರುವ ದಾರಿ ಒಂದೇ; ಅದುವೇ ರಾಸಾಯನಿಕ ಮುಕ್ತ ಕೃಷಿ

Date:

Advertisements

ಒತ್ತಡದ ಜೀವನದಲ್ಲಿ ಆರೋಗ್ಯದ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಯಾವುದೇ ವಸ್ತು ಖರೀದಿಸಿದರೂ ರಾಸಾಯನಿಕ ಉತ್ಪಾದನೆಯೇ. ಉತ್ತಮವಾದ ಆರೋಗ್ಯ ಕಂಡುಕೊಳ್ಳಲು ಶ್ರಮ ಪಡಬೇಕಾದ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ. ಚಿಕ್ಕ ಪುಟ್ಟ ವಯಸ್ಸಿನ ಮಕ್ಕಳಲ್ಲಿ ಮಧುಮೇಹ, ಅಧಿಕ ರಕ್ತದ ಒತ್ತಡ (ಬಿಪಿ), ಕಾರ್ಬೋಹೈಡ್ರೆಟ್, ಯೂರಿಕ್ ಆಸಿಡ್, ಫ್ಯಾಟ್ಟಿ ಲಿವರ್, ಅಯೋಡಿನ್ ಕೊರತೆ, ಹೃದಯಾಘಾತ ಹೀಗೆ ಒಂದಲ್ಲ ಒಂದು ಸಮಸ್ಯೆ ಯುವ ಸಂಕುಲವನ್ನೇ ಹಿಂಡುತ್ತಿದೆ.

ಇನ್ನು, ವಯಸ್ಸಾದವರಲ್ಲಿ ಉಬ್ಬಸ, ಅಸ್ತಮಾ, ಮಂಡಿ ನೋವು, ಜ್ವರ, ಕ್ಯಾನ್ಸರ್, ಪಾರ್ಶ್ವ ವಾಯು, ಸಂಧಿವಾತ, ಬೊಜ್ಜು ಇನ್ನಿತರ ಗುಣಪಡಿಸಲಾರದ ಖಾಯಿಲೆಗಳು ವಯೋ ಸಹಜವಾಗಿ ಕಾಡುತ್ತಿವೆ. ಇದಕ್ಕೆಲ್ಲ ಮೂಲ ಆಹಾರ ಪದ್ಧತಿ. ವಯಸ್ಸು ಯಾವುದೇ ಇರಲಿ ಅನಾರೋಗ್ಯ ಎಲ್ಲರನ್ನೂ ಕಾಡಿಸುತ್ತಿದೆ.

ಇವತ್ತು ಯಾವುದೇ ಹಣ್ಣು, ತರಕಾರಿ ಆಗಲಿ ರಸಗೊಬ್ಬರ, ಯೂರಿಯಾ , ಪೊಟ್ಯಾಷ್, ಕ್ರಿಮಿನಾಶಕ, ಕಳೆನಾಶಕ ಸಿಂಪಡಿಸಿಯೇ ಕೃಷಿ ಮಾಡಿರುತ್ತಾರೆ. ಅದರಲ್ಲಿನ ಅಂಶ ಇನ್ನೆಲ್ಲಿಗೆ ಹೋಗಬೇಕು. ಒಂದು ಕಡೆ ಭೂಮಿ, ಇನ್ನೊಂದು ಕಡೆ ಅಂತರ್ಜಲ, ಕಡೆಗೆ ಮನುಷ್ಯನ ದೇಹಕ್ಕೆ ಆಹಾರ ರೂಪದಲ್ಲಿ ಸೇರುತ್ತದೆ. ಹಾಗಾಗಿ, ಇವತ್ತಿನ ಕಾಲಘಟ್ಟದಲ್ಲಿ ಉತ್ತಮವಾದ ಆಹಾರ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಾವಯವ ಕೃಷಿಯ ಮಹತ್ವ ಅರಿಯಬೇಕಿದೆ.

Advertisements

ಮೈಸೂರಿನ ಕುವೆಂಪುನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠದ ಹತ್ತಿರದ ಅರಳಿಕಟ್ಟೆಯಲ್ಲಿ, ರಾಸಾಯನಿಕ ಮುಕ್ತ ಕೃಷಿಯಲ್ಲಿ ಬೆಳೆಯಲಾದ ಮಾವಿನ ಹಣ್ಣಿನ ಸಂತೆಗೆ ಚಾಲನೆ ದೊರೆಯಿತು. ಮಲ್ಲಿಕ ಮಾವಿನ ಹಣ್ಣಿನ ಖರೀದಿಗೆ ಜನ ಮುಂದಾದರು. ಇದು ನಗರ, ಪಟ್ಟಣಗಳಿಗೆ ತೀರಾ ಹೊಸದಾಗಿ ಕಾಣುವ ನೋಟ. ಮಾಲ್, ಫುಡ್ ಕೋರ್ಟ್, ಫ್ಯಾಮಿಲಿ ಫುಡ್ ಸೆಂಟರ್ ತೆರಳಿ ಕೇಳಿದ ಬೆಲೆಗೆ ಖರೀದಿ ಮಾಡುವ ಕಾಲ. ಅಂತಹದರಲ್ಲಿ ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಸೃಷ್ಟಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸುವುದು ವಿರಳ.

ಅಂತಹದರಲ್ಲಿ, ಕಳೆದ 30 ವರ್ಷಗಳಿಂದ ಯಾವುದೇ ರಾಸಾಯನಿಕ, ಕೀಟನಾಶಕ, ಯೂರಿಯಾ ,ಪೊಟ್ಯಾಷ್, ಕಳೆನಾಶಕ ಇತ್ಯಾದಿ ಯಾವುದನ್ನು ಬಳಸದೆ, ಬೆಳಕಿನ ಬೇಸಾಯದ ಮೂಲಕ ಬೆಳೆಯಲಾದ ಮಲ್ಲಿಕ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಿದ್ದು ಜನರು ಖರೀದಿಗೆ ಮುಂದಾಗಿದ್ದರು. ಇಂದಿನ ಕೃಷಿಯಲ್ಲಿ ರಸಗೊಬ್ಬರ, ರಾಸಾಯನಿಕ ಬಳಕೆ ಹೆಚ್ಚಿದ್ದು ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ದಿನನಿತ್ಯ ಮಾತ್ರೆ ಸೇವಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲವಾದಲ್ಲಿ ಆಸ್ಪತ್ರೆ ಕದ ತಟ್ಟಲೇಬೇಕು.

ಇಂತಹ ಸಂದರ್ಭದಲ್ಲಿ ಬನವಾಸಿ ತೋಟದಲ್ಲಿ ಯಾವುದೇ ರಾಸಾಯನಿಕ ಬಳಸದೆ ಸಹಜ ಬೇಸಾಯದ ಮೂಲಕ ಮಾವು, ತೆಂಗು, ಅಡಿಕೆ, ಬಾಳೆ, ಸಪೋಟ, ಕಿತ್ತಳೆ, ಮೋಸಂಬಿ ಹಾಗೂ ತರಕಾರಿಗಳನ್ನು ಬೆಳೆಯಲಾಗಿದ್ದು ಮಾದರಿ ಕೃಷಿಗೆ ಮುಂದಾಗಿದ್ದಾರೆ. ಈ ಮೂಲಕ ಸಾರ್ವಜನಿಕರು ಯಾವುದೇ ಹಿಂಜರಿಕೆ ಇರದೇ ಬೆಳಕಿನ ಬೇಸಾಯದ ಹಣ್ಣು, ತರಕಾರಿ ಕೊಳ್ಳಲು ಬೆಳಗ್ಗೆಯಿಂದಲೇ ಮುಂದಾಗಿದ್ದು, ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಲ್ಲಿ ವಿಶೇಷ ಅಂದರೆ ಜನರಿಗೆ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು, ಆರೋಗ್ಯ ಉಳಿಸಿಕೊಳ್ಳಬೇಕು, ಸಾವಯವ ಕೃಷಿ ಉತ್ಪನ್ನಗಳ ಬಳಕೆ ಮಾಡಬೇಕು ಎನ್ನುವ ಕಾತುರವಿತ್ತು.

ಕರ್ನಾಟಕ ರಾಜ್ಯ ನೈಸರ್ಗಿಕ ಕೃಷಿ ಆಂದೋಲನ ವೇದಿಕೆ ಸಂಚಾಲಕರಾದ ಸ್ವಾಮಿ ಆನಂದ್ ಈದಿನ.ಕಾಮ್ ಜೊತೆ ಮಾತನಾಡಿ ” ಸಾಹಿತಿ ದೇವನೂರು ಮಹದೇವ ಅವರ ಬನವಾಸಿ ತೋಟದ ನೈಸರ್ಗಿಕ ಉತ್ಪನ್ನಗಳ ಸಂತೆ ನಡೆಯುತ್ತಿದೆ. ಇದರಲ್ಲಿ ಯಾವುದೇ ತರಹದ ವಿಷಕಾರಿ ಅಂಶವಿರುವ ರಾಸಾಯನಿಕ, ರಸ ಗೊಬ್ಬರ, ಯೂರಿಯಾ ಇತ್ಯಾದಿ ಯಾವುದನ್ನೂ ಬಳಸದೆ ನೈಸರ್ಗಿಕವಾಗಿ ಬೆಳೆದ ಹಣ್ಣುಗಳು, ತರಕಾರಿ ಮಾರಾಟ ಜನರಿಗೆ ತಲುಪುವಂತೆ ಮಾಡಿದ್ದಾರೆ. ರೈತನೇ ನೇರವಾಗಿ ತಾನು ಬೆಳೆದಂತಹ ಬೆಳೆಯನ್ನು ವಿನೂತನವಾಗಿ ಗ್ರಾಹಕರಿಗೆ ನೀಡುವ ವ್ಯವಸ್ಥೆ ಕಲ್ಪಿಸಿರುವುದು ಒಂದೊಳ್ಳೆಯ ಪ್ರಯತ್ನ” ಎಂದು ಹೇಳಿದರು.

” ಸಂತೆಯಲ್ಲಿ ವಿಶೇಷ ಎಂದರೆ ಮಲ್ಲಿಕ ಮಾವಿನ ಹಣ್ಣು.1970 ರಲ್ಲಿ ಈ ತಳಿಯ ಉತ್ಪಾದನೆ ಈ ದೇಶದಲ್ಲಿ ಕಂಡಿದ್ದು. ತಮಿಳುನಾಡು ಮೂಲದ ನೀಲಮ್ ತಳಿ ತಾಯಿಯಂತೆ. ಉತ್ತರ ಪ್ರದೇಶದ ಲಕ್ನೌ ಬಳಿಯ ದಸೇರಿ ಹಳ್ಳಿಯ ತಳಿ ತಂದೆಯಿದ್ದಂತೆ. ಲಖನೌನಲ್ಲಿ ಮ್ಯಾಂಗೋ ರಿಸರ್ಚ್ ಸ್ಟೇಷನ್ ನಿರ್ದೇಶಕರಾಗಿದ್ದ ಡಾ. ರಮಾನಾಥ ಸಿಂಗ್ ಈ ಎರಡು ತಳಿಗಳನ್ನು ಕಸಿ (ಬ್ಲೆಂಡ್) ಮಾಡಿ ಸೃಷ್ಟಿಸಿದಂತಹ ಉತ್ತಮವಾದ ‘ಮಲ್ಲಿಕ’ ಮಾವು’ ಎಂದು ವಿವರಣೆ ನೀಡಿದರು.

ಇತ್ತೀಚೆಗೆ ಮಲ್ಲಿಕ ಮಾವಿನ ಹಣ್ಣು ಪ್ರಸಿದ್ಧಿಗೆ ಬರ್ತಾ ಇದೆ. ಇದನ್ನ ಬೆಳೆಯುವವರ ಸಂಖ್ಯೆ ತೀರ ಕಡಿಮೆ. ಅದರಲ್ಲೂ, ‘ ಮೈಸೂರಿಗೆ ಮೂವತ್ತು ವರ್ಷಗಳ ಹಿಂದೆ ಪರಿಚಯ ಆಗಿರಬಹುದು. ಈ ಹಣ್ಣನ್ನು ಪ್ರಥಮವಾಗಿ ಸಾಹಿತಿ ದೇವನೂರು ಮಹದೇವ ಅವರೇ ಬನವಾಸಿ ತೋಟದಲ್ಲಿ ಬೆಳೆದಿದ್ದು ‘. ಮಲ್ಲಿಕ ಮಾವಿನ ಹಣ್ಣಿನ ವೈಶಿಷ್ಟ್ಯ ಎಂದರೆ, ಮಾವಿನ ಹಣ್ಣಿನ ಸೀಸನ್ ಸಮಯಕ್ಕೆ ಬರುವುದಿಲ್ಲ. ಸ್ವಲ್ಪ ತಡವಾಗಿಯೇ ಸಿಗುವ ಮಾವು. ಬಾದಾಮಿ, ರಸಪುರಿ, ಮಲಗೋಬ ಮಾವಿನ ಹಣ್ಣುಗಳ ಸೀಸನ್ ಮುಗಿಯುವ ಹೊತ್ತಿಗೆ ಸಿಗಲು ಆರಂಭವಾಗುತ್ತೆ.

ಇದು ಕನಿಷ್ಠ ಅಂದರೆ 200 ಗ್ರಾಂನಿಂದ ಗರಿಷ್ಠ ಒಂದು ಕೆಜಿ ತೂಗುವಷ್ಟು ಗಾತ್ರದಲ್ಲಿ ಇದರ ಬೆಳವಣಿಗೆ ಇದೆ. ಇದರ ಗುಣ ಕಿತ್ತ ನಂತರ ಅಡೆಯಾಕುವ ಯಾವುದೇ ಅಗತ್ಯತೆ ಇಲ್ಲ. ಕೊಠಡಿಯಲ್ಲಿ ಇಟ್ಟರೆ ಸಾಕು, ಅಲ್ಲಿನ ಶಾಖಕ್ಕೆ ಹಣ್ಣಾಗುವ ಗುಣವಿದೆ. ಈ ಹಣ್ಣಿಗೆ ಕೀಟಗಳ ಹಾವಳಿ ತೀರ ಕಡಿಮೆ. ಯಾಕಂದ್ರೆ ಮಲ್ಲಿಕ ಮಾವಿನ ಹಣ್ಣಿನ ಸಿಪ್ಪೆ ದಪ್ಪವಿರುವುದರಿಂದ ಹಾನಿ ಮಾಡಲು ಸಾಧ್ಯವಿಲ್ಲ.
ಜೂನ್ ಕೊನೆ ವಾರದಲ್ಲಿ ಪ್ರಾರಂಭವಾಗಿ ಆಗಸ್ಟ್ ತಿಂಗಳ ಎರಡನೇ ವಾರದವರೆಗೂ ಲಭ್ಯವಾಗುತ್ತದೆ. ರಾಸಾಯನಿಕ ಮುಕ್ತವಾಗಿ ಬೆಳೆಯುವ ಇಂತಹ ಸಂತೆಯಲ್ಲಿ ಗ್ರಾಹಕರು ಖರೀದಿ ಮಾಡಿ ಹಣ್ಣಿನ ಸವಿಯನ್ನ ಸವಿಯಬೇಕು. ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಉಪಯೋಗಕಾರಿ. ಮೈಸೂರಿನ ಜನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೃಷಿ ವಿಜ್ಞಾನಿ ಹೆಚ್. ಎಲ್. ವಸಂತ ಕುಮಾರ್ ಈದಿನ.ಕಾಮ್ ಜೊತೆ ಮಾತನಾಡಿ ” ಬೆಂಗಳೂರಿನ, ನಾಗನಹಳ್ಳಿಯ ಕೃಷಿ ವಿಶ್ವವಿದ್ಯಾಲಯ ಅಂದಿಗೆ ಸಂಶೋಧನಾ ಕೇಂದ್ರವಾಗಿತ್ತು. 2005 ರಲ್ಲಿ’ ಕೃಷಿ ಸಂಶೋಧನಾ ಕೇಂದ್ರ ‘ ಅಂತಿದ್ದಿದನ್ನು’ ಸಾವಯವ ಕೃಷಿ ಕೇಂದ್ರ’ ವನ್ನಾಗಿ ಮಾಡಿದೆ. ನಾನು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ, ಇತ್ತೀಚೆಗಿನ ವರ್ಷಗಳಲ್ಲಿ ಮಾನವನ ಆರೋಗ್ಯದ ಮೇಲೆ ಸಾಕಷ್ಟು ಹಾನಿಯಾಗಿದೆ. ಇದಕ್ಕೆ ಕಾರಣ ನಾವು ಸೇವಿಸುವ ಆಹಾರ ಕಲ್ಮಶವಾಗಿರುವುದು. ಯಾಕೆ ಕಲ್ಮಶವಾಗಿದೆ. ನಾವು ಬೆಳೆಯುವ ವಿಧಾನ ನಿಧಾನವಾಗಿ ಹಾಳಾಗಿದೆ ಎಂದರೆ ತಪ್ಪಾಗಲಾರದು. ” ಎಂದರು.

” 1960 ರಲ್ಲಿ ನಾವೇನು ಹಸಿರು ಕ್ರಾಂತಿ ಹೆಸರಿನಲ್ಲಿ ಕೃಷಿಯನ್ನ ಶುರು ಮಾಡಿದ್ವಿ ಅವತ್ತಿಗೆ ಅದರ ಅಗತ್ಯತೆ ಇತ್ತು. ಆಹಾರ ಉತ್ಪಾದನೆ ಕಡಿಮೆ ಇತ್ತು. ದೇಶದ ಜನರಿಗೆ ಕೃಷಿಯ ಮೂಲಕ ಆಹಾರ ಭದ್ರತೆ ಒದಗಿಸಬೇಕಾದ ಸಂದರ್ಭ ಅದಾಗಿತ್ತು. ಆ ಸಂದರ್ಭದಲ್ಲೇ ರಾಸಾಯನಿಕ ಗೊಬ್ಬರ, ಯೂರಿಯಾ ಬಳಕೆ ಮಾಡುವ ಪರಿಪಾಟಲು ಆರಂಭವಾಗಿದ್ದು. ಅದು ಅನಿವಾರ್ಯತೆಯಿಂದ ಆರಂಭವಾಗಿ ಸಂಪೂರ್ಣವಾಗಿ ಕೃಷಿಯನ್ನು ಆವರಿಸಿಕೊಂಡಿದೆ. ಹೊಸದರಲ್ಲಿ ರೈತರಿಗೆ ಲಾಭ ಕಂಡಿತ್ತು. ಅದರ ಜೊತೆ ಜೊತೆಗೆ ಆಹಾರದ ಸಮಸ್ಯೆ ನೀಗ ತೊಡಗಿದ್ದು ನಿಜ. ಕಾಲಕ್ರಮೇಣ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರಲು ಆರಂಭಗೊಂಡಿತು. ರಾಸಾಯನಿಕ ಬಳಕೆ ಬರು ಬರುತ್ತಾ ಜನರ ಬದುಕಿಗೆ ಮಾರಕವಾಗಿ ಮಾರ್ಪಟ್ಟಿದೆ. “

” ಭೂಮಿಗೆ ಬಳಸುವ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕದಂತಹ ವಿಷಕಾರಿ ಅಂಶ ಆಹಾರದಲ್ಲಿ ಸೇರಿ ಶರೀರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಆರಂಭವಾಯಿತು. ಅದರಿಂದಾಗಿ, ಅನೇಕ ರೋಗಗಳಿಗೆ ತುತ್ತಾಗುವಂತೆ ಆಗಿದೆ. ಅದರಲ್ಲೂ, ಇತ್ತೀಚೆಗೆ ಕ್ಯಾನ್ಸರ್ ನಂತಹ ಮಾರಕ ರೋಗ ಸರ್ವೇ ಸಾಮಾನ್ಯ ಅನ್ನುವಂತೆ ಆಗಿದೆ. ಇಂತಹ ಕಠಿಣವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದನ್ನೆಲ್ಲ ಮೆಟ್ಟಿ ನಮ್ಮ ಆರೋಗ್ಯ ಉಳಿಸಿಕೊಳ್ಳಬೇಕು ಅಂದರೆ ಅದಕ್ಕೆ ಇರುವ ಮಾರ್ಗೋಪಾಯ ‘ ಸಾವಯವ ಕೃಷಿ ‘.”

ಸಾವಯವ ಕೃಷಿ ಎಂದರೆ ಉತ್ಪಾದನಾ ಪದ್ಧತಿಯಲ್ಲಿ ನೈಸರ್ಗಿಕವಾಗಿ ದೊರೆಯುವಂತಹ ಸಾವಯವ ತ್ಯಾಜ್ಯಗಳನ್ನ ವೈಜ್ಞಾನಿಕವಾಗಿ ಬಳಸಿ ಬೆಳೆಯನ್ನ ಬೆಳೆಯುವಂತದ್ದು. ಪರಿಸರ ಸ್ನೇಹಿ ಕೃಷಿ ಪದ್ಧತಿಯನ್ನು ಅನುಸರಿಸಿ ಬೆಳೆ ಬೆಳೆಯುವುದು ಬಹು ಉಪಯುಕ್ತ. ಇದರಿಂದ ಕೃಷಿಯಲ್ಲಿ ಸುಸ್ಥಿರತೆ ಕಾಣಬಹುದು. ಕೊಟ್ಟಿಗೆ ಗೊಬ್ಬರ ( ಕಾಂಪೋಸ್ಟ್) ಬಳಕೆಯಿಂದ ಯಾವುದೇ ಕಾರಣಕ್ಕೂ ದೇಹಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದರಲ್ಲಿ ವಿಷಕಾರಿ ಅಂಶಗಳು ಇರೋದಿಲ್ಲ.

” ಸಾವಯವ ಬೇಸಾಯದಲ್ಲಿ ಬಳಸುವ ಕೊಟ್ಟಿಗೆ ಗೊಬ್ಬರ ಒಂದೇ ವರ್ಷದಲ್ಲಿ ಖರ್ಚಾಗದೆ, ವರ್ಷಕ್ಕೆ ಶೇ% 35 ಕರಗಿದರೆ ಮತ್ತೊಂದು ವರ್ಷ ಶೇ% 30, ಮಗದೊಂದು ವರ್ಷ ಶೇ % 25. ಹೀಗೆ, ವ್ಯಯಿಸುತ್ತ ಹೋಗುತ್ತದೆ. ಒಂದು ಸಲ ಹಾಕಿದ ಗೊಬ್ಬರ ಮುಂದಿನ ಬೆಳೆಗಳಿಗೂ ಲಭ್ಯವಾಗುತ್ತೆ. ಇದರಿಂದಾಗಿ ಭೂಮಿಯಲ್ಲಿ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ. ವರ್ಷ ವರ್ಷಕ್ಕೆ ಸದ್ಬಳಕೆ ಆಗುತ್ತದೆ. ಅದಾಗಿಯೇ ನಿರ್ವಹಣೆ ಕಾಣುವುದರಿಂದ ಸಾವಯವ ಕೃಷಿಯಲ್ಲಿ ಉತ್ತಮವಾದ ಬೆಳೆ, ಆದಾಯ ಕಾಣಬಹುದು. ಇದರಿಂದ ಮನುಷ್ಯನ ಆರೋಗ್ಯ ಕೂಡ ಸುಧಾರಣೆಗೊಳ್ಳುತ್ತೆ. ಈ ನಿಟ್ಟಿನಲ್ಲಿ ರೈತರು ಯೋಚಿಸಬೇಕು. ಗ್ರಾಹಕರು ಅರಿತುಕೊಳ್ಳಬೇಕು. ಸಾವಯವ ಕೃಷಿಗೆ ಒತ್ತು ನೀಡಬೇಕು ” ಎಂದು ಮನವಿ ಮಾಡಿದರು.

ಕೃಷಿ ತಜ್ಞರಾದ ಅವಿನಾಶ್ ಮಾತನಾಡಿ ” ರೈತನಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಇದೊಂದು ಉತ್ತಮವಾದ ಅವಕಾಶ. ರೈತ ಬೆಳೆದ ಬೆಳೆ ದಲ್ಲಾಳಿ ಮೂಲಕ ಮಾರುಕಟ್ಟೆ ಪ್ರವೇಶ ಮಾಡಿದರೆ ಅದರಿಂದ ಲಾಭ ಖಂಡಿತ ಇಲ್ಲ. ಮಧ್ಯವರ್ತಿಗಳಿಂದಾಗಿ ಆದಾಯ ಗಣನೀಯವಾಗಿ ಕುಸಿತ ಕಾಣುತ್ತೆ. ಆದರೆ, ತಾನೇ ತಾನು ಬೆಳೆದ ಬೆಳೆ ಮಾರಾಟಕ್ಕೆ ಸಂತೆ(ಮಾರುಕಟ್ಟೆ) ನಡೆಸಿದರೆ ಗ್ರಾಹಕರನ್ನು ಸೆಳೆಯಬಹುದು. ಜೊತೆಗೆ ಆದಾಯ ಕೂಡ ಕಾಣಬಹುದು.”

” ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳಿಗೆ ಬಹು ಬೇಡಿಕೆಯಿದೆ. ಇದನ್ನ ಮನಗಾಣಬೇಕು. ಕೃಷಿಯಲ್ಲಿ ಬದಲಾವಣೆ ಕಂಡರೆ ಲಾಭದಾಯಕ ಕೃಷಿಗೆ ಹೊರಳಲು ಸಾಧ್ಯವಿದೆ. ರಾಸಾಯನಿಕ ಆಹಾರ ಪದಾರ್ಥಗಳಿಂದ ನೊಂದಿರುವ ಜನ ಸಹಜವಾಗಿ ಸಾವಯವ ಕೃಷಿಯ ಆಹಾರ ಪದಾರ್ಥಕ್ಕೆ ಮುಗಿ ಬೀಳುತ್ತಾರೆ. ಅವರಿಗೆ ನೇರವಾಗಿ ಮಾರುಕಟ್ಟೆ ಲಭಿಸುವಂತೆ ಆಗಬೇಕು. ಬೆಳೆದದ್ದು ರೈತರಿಂದ ನೇರವಾಗಿ ಗ್ರಾಹಕರ ಕೈ ಸೇರಬೇಕು. ಅಂದರೆ, ರೈತನ ಉಳಿವಿಗೆ, ಗ್ರಾಹಕರ ಆರೋಗ್ಯಕ್ಕೆ ಪೂರಕವಾದದ್ದು. “

ರೈತರು ಸ್ವಲ್ಪ ಪ್ರಜ್ಞಾ ಪೂರ್ವಕವಾಗಿ ಸಮಯ ಕೊಟ್ಟು ಕೆಲಸ ಮಾಡಿದರೆ ಆದಾಯ ಪಡೆಯಲು ಸಾಧ್ಯವಿದೆ. ಈಗ ಮಾವಿನ ಹಣ್ಣಿನ ಕಾಲ. ಇದರ ಜೊತೆ ಜೊತೆಗೆ ಇತರೆ ಉತ್ಪನ್ನಗಳನ್ನು ಕ್ರೋಡೀಕರಿಸಿ ಮಾರಾಟ ಮಾಡುವುದು ಸೂಕ್ತ. ಅಂದರೆ, ಮಾವಿನ ಹಣ್ಣಿನ ಜೊತೆಯಲ್ಲಿ ತೆಂಗು, ತೆಂಗಿನ ಉಪ ಉತ್ಪನ್ನ ಕೊಬ್ಬರಿ ಎಣ್ಣೆ, ಕೊಬ್ಬರಿ ಹೀಗೆ. ಇನ್ನ ತರಕಾರಿಗಳು, ಸೊಪ್ಪು, ಬಾಳೆ ದಿಂಡು, ನೇರಳೆ, ನಲ್ಲಿಕಾಯಿ ಇಂತಹದನ್ನೆಲ ಒಂದೆಡೆ ಸಿಗುವಂತೆ ಆದರೆ ಗ್ರಾಹಕರಿಗೂ ಅದರ ಅಗತ್ಯತೆ ಇರುತ್ತದೆ ಅವರು ಕೊಳ್ಳುತ್ತಾರೆ. ಆಗ ರೈತನಿಗೆ ನೇರ ಆದಾಯ. ಮಧ್ಯವರ್ತಿ ಹಾವಳಿ ತಪ್ಪುತ್ತದೆ. ಗ್ರಾಹಕರನ್ನು ಸೆಳೆಯಬಹುದು. ವರ್ಷ ವರ್ಷ ಬೆಳೆಯುವ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು.

ಅದಕ್ಕಾಗಿ, ರಾಸಾಯನಿಕ ಮುಕ್ತ ಕೃಷಿ ಕಡೆಗೆ ಒತ್ತು ಕೊಟ್ಟು ಕೆಲಸ ಮಾಡಬೇಕು. ಇದರಿಂದ ಭವಿಷ್ಯದಲ್ಲಿ ಆದಾಯವಷ್ಟೇ ಅಲ್ಲ. ಜನರ ಆರೋಗ್ಯದ ಸುಧಾರಿಕೆಯಲ್ಲಿ ಕೊಡುಗೆ ಕೊಟ್ಟ ಸಾರ್ಥಕತೆಯು ನಮ್ಮದಾಗಿರುತ್ತದೆ. ಸಾವಯವ ಕೃಷಿಯನ್ನು ಉತ್ತೇಜನ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಜುಲೈ 3 ರಿಂದ 4 ರ ವರೆಗೆ ಮಾವಿನ ಹಣ್ಣುಗಳ ಸಂತೆ

ನಾಳೆ ( ಜುಲೈ.4) ಯು ಸಹ ಬೆಳಗ್ಗೆ 10-30 ರಿಂದ ಸಂಜೆ 7 ರ ತನಕ ಮಾವಿನ ಹಣ್ಣಿನ ಸಂತೆ ನಡೆಯಲಿದೆ. ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

WhatsApp Image 2025 02 05 at 18.09.20
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಕ್ಕಳನ್ನು ಡ್ರಗ್ಸ್‌ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್‌ ಎಂ ವಿಶ್ವನಾಥ್

ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ....

ಹಾವೇರಿ | ಮಾದಕ ವಸ್ತು ಮಾರಾಟ; ನಾಲ್ವರು ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ...

ಶಿವಮೊಗ್ಗ | ಕಾಂಗ್ರೆಸ್ ಕಚೇರಿಯಲ್ಲಿ ಅರಸು ಮತ್ತು ರಾಜೀವ್‍ಗಾಂಧಿಯವರ ಜನ್ಮದಿನಾಚರಣೆ

ಶಿವಮೊಗ್ಗ, ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ನಾಯಕ ಹಾಗೂ...

ಶಿವಮೊಗ್ಗ | ಆರು ಜಿಲ್ಲೆಯ ಮುಖಂಡರಿಂದ ಅಹಿಂದ ಸಮಾವೇಶದ ಪೂರ್ವಭಾವಿ ಸಭೆ : ತೀ.ನ. ಶ್ರೀನಿವಾಸ್

ಶಿವಮೊಗ್ಗ, ಮಲೆನಾಡು ರೈತರ ಸಮಸ್ಯೆ ಹಾಗೂ ಕಾಂತ್‌ರಾಜ್ ವರದಿಯ ಜಾರಿಗೆ ಆಗ್ರಹಿಸಿ...

Download Eedina App Android / iOS

X