ಟೆಸ್ಟ್ ಕ್ರಿಕೆಟ್ | ದ್ವಿಶತಕ ಬಾರಿಸಿ ಹೊಸ ದಾಖಲೆ ಬರೆದ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್

Date:

ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನವಾದ ಗುರುವಾರ, ಟೀಂ ಇಂಡಿಯಾದ ನೂತನ ನಾಯಕ ಶುಭಮನ್ ಗಿಲ್ ದ್ವಿಶತಕ ಬಾರಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

- Advertisement -

ಇಂಗ್ಲೆಂಡ್‌ನ ನೆಲದಲ್ಲಿ ದ್ವಿಶತಕ ದಾಖಲಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. ಅಲ್ಲದೇ, ಈ ಸಾಧನೆ ಮಾಡಿದ ಮೊದಲ ಏಷ್ಯಾದ ನಾಯಕ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಪ್ಲಾಟ್‌ಫಾರ್ಮ್‌ ಮೇಲೆ ಹರಿವ ಚರಂಡಿ ನೀರು;...

"ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…" ಇದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಪ್ರಯಾಣಿಕರ ಅಳಲು. ಪ್ಲಾಟ್‌ಫಾರ್ಮ್‌-1ರಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ...

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವೈಯಕ್ತಿಕ...

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಿಂಚದೆ ಹಿನ್ನಡೆ ಅನುಭವಿಸಿವೆ. ಕಳೆದ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಈ ಎರಡು ವಿಭಾಗಗಳಿಂದ ಬರೋಬ್ಬರಿ 51...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ 25 ವರ್ಷದ ಗಿಲ್‌, ಮೊದಲ ದ್ವಿಶತಕ ಬಾರಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. 311 ಎಸೆತಗಳನ್ನು ಎದುರಿಸಿದ ನಾಯಕ, 21 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಈ ಸಾಧನೆ ಮಾಡಿದ್ದಾರೆ.

ಲೀಡ್ಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿತ್ತಾದರೂ ಈ ಪಂದ್ಯದಲ್ಲಿ ಗಿಲ್‌ ಶತಕ ಬಾರಿಸಿ, ಮಿಂಚಿದ್ದರು.

ಇದನ್ನು ಓದಿದ್ದೀರಾ? ಟ್ರಂಪ್ ಪತ್ನಿ ಮೆಲಾನಿಯಾ ಗಡಿಪಾರಿಗೆ ಆಗ್ರಹ: ಅರ್ಜಿಗೆ ಸಾವಿರಾರು ಮಂದಿ ಸಹಿ

ಬೃಹತ್‌ ಮೊತ್ತದತ್ತ ಟೀಮ್ ಇಂಡಿಯಾ

ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನವಾದ ಇಂದು ಟೀಂ ಇಂಡಿಯಾ ಬೃಹತ್‌ ಮೊತ್ತದತ್ತ ದಾಪುಗಾಲಿಡುತ್ತಿದೆ. ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರು ನಾಯಕ ಶುಭ್‌ಮನ್‌ ಗಿಲ್‌ಗೆ ಅವರೊಂದಿಗಿನ ಜೊತೆಯಾಟದಲ್ಲಿ ಅರ್ಧ ಶತಕ ಪೂರೈಸಿ ಶತಕದ ಆಸುಪಾಸಿನಲ್ಲಿ ಎಡವಿ ಔಟಾದರು. ಶುಭಮನ್ ಗಿಲ್ ದ್ವಿಶತಕ ಬಾರಿಸಿ ಮುಂದುವರಿಯುತ್ತಿದ್ದರೆ, ವಾಷಿಂಗ್ಟನ್ ಸುಂದರ್ ಇವರಿಗೆ ಸಾಥ್ ನೀಡುತ್ತಿದ್ದಾರೆ. ಸದ್ಯ ಟೀಂ ಇಂಡಿಯಾ 125 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 496 ರನ್‌ ಪೇರಿಸಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್ : ಕ್ರೀಡಾಭಿಮಾನಿಗಳಿಗೆ ರೋಮಾಂಚನ, ಭಾರತದ ಮುಡಿಗೇರಿದ 13 ಚಿನ್ನದ ಪದಕಗಳು!

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ 13ನೇ ದಿನ ಭಾರತಕ್ಕೆ...

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...