ತಮ್ಮ ಕೃಷಿ ಜಮೀನಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಮುರುಗಮಲ ಹೋಬಳಿಯ ಎರಮಂಟಪಲ್ಲಿ ಗ್ರಾಮದ ನಿವಾಸಿಗಳಾದ ನಸರೀನ್‌ತಾಜ್ ಮತ್ತು ಬಸರೀನ್‌ತಾಜ್ ಅವರು ಚಿಂತಾಮಣಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಯರಮಂಟಪಲ್ಲಿ ಗ್ರಾಮದ ಹೊಸ ಸರ್ವೆ ನಂಬರ್ 18/9 ಹಾಗೂ 18/10ರಲ್ಲಿರುವ ಹಳೆ ಸರ್ವೆ ನಂಬರ್ 18/2 ಹಾಗೂ 6/1) ಒಟ್ಟು ಒಂದು ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೇವೆ.ಆದರೆ ಈ ಜಮೀನಿಗೆ ತಲುಪಲು ಯಾವುದೇ ಸೂಕ್ತ ರಸ್ತೆ ಇಲ್ಲದೆ ಬೆಳೆ ಬೆಳೆಯಲು ಹಾಗೂ ದಿನನಿತ್ಯ ಓಡಾಡಲು ತೀವ್ರ ತೊಂದರೆಯಾಗುತ್ತಿದೆ ಎಂದು ಬಾಧಿತರು ತಿಳಿಸಿದ್ದಾರೆ.
ನಂದಿಗಾನಹಳ್ಳಿ ಮುಖ್ಯ ರಸ್ತೆಯ ಭಾಗದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಸ್ತೆಗೆ ಅಡ್ಡಲಾಗಿ ರೇಪಿನ ಶೆಡ್‌ಗಳನ್ನು ನಿರ್ಮಿಸಿ ಒತ್ತುವರಿ ಮಾಡಿಕೊಳ್ಳಲಾಗಿದೆ.ಸರ್ಕಾರಿ ಕರಾಬು ಜಮೀನಿನಲ್ಲಿ ಪಂಚಾಯಿತಿಯಿಂದ ಮೋರಿ ಮಂಜೂರಾಗಿದ್ದರೂ,ನಿಯಮ ಉಲ್ಲಂಘಿಸಿ ಶೆಡ್‌ಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಲಾಗುತ್ತಿದೆ.ಜೊತೆಗೆ ಜಮೀನಿಗೆ ತೆರಳಲು ದಾರಿ ನೀಡದೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಇದನ್ನು ಓದಿದ್ದೀರಾ..? ಕೋಲಾರ | ಬೆಸ್ಕಾಂ ವಿರುದ್ಧ ರೈತರ ಆಕ್ರೋಶ: 10 ತಾಸು ಗುಣಮಟ್ಟದ ವಿದ್ಯುತ್‌ಗೆ ಆಗ್ರಹ
ತಹಸೀಲ್ದಾರ್ ಅವರ ಪರವಾಗಿ ಮನವಿ ಪತ್ರ ಸ್ವೀಕರಿಸಿದ ಶಿರಸ್ತೇದಾರ್ ಶೋಭಾ ಅವರು,ಈ ಕುರಿತು ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿಕೊಟ್ಟು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ





