ಕೋಲಾರ ಕ್ಲಾಕ್ ಟವರ್ ವಿವಾದ: ಜಿಲ್ಲಾಡಳಿತದ ನಿರ್ಧಾರದತ್ತ ಜನರ ಚಿತ್ತ

Date:

ಕೋಲಾರ ನಗರದ ಇತಿಹಾಸ ಪ್ರಸಿದ್ಧ ಕ್ಲಾಕ್‌ ಟವರ್‌ನಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾಗುತ್ತಿರುವ ಎಚ್‌ಎಂಟಿ ಗಡಿಯಾರದಲ್ಲಿ ಸಂಸದ ಮಲ್ಲೇಶ್‌ ಬಾಬು ಹೆಸರಿರಬೇಕೋ, ಬೇಡವೋ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಚರ್ಚೆ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ಧಾರಕ್ಕೆ ಪ್ರತಿಯೊಬ್ಬರೂ ಕಾಯುತ್ತಿದ್ದಾರೆ.

- Advertisement -

ಶನಿವಾರ ರಾತ್ರಿ ಟ್ರಯಲ್‌ ರನ್‌ಗಾಗಿ ಗಡಿಯಾರ ಅಳವಡಿಸುತ್ತಿದ್ದ ಸಂದರ್ಭದಲ್ಲಿ ಸಂಸದ ಮಲ್ಲೇಶ್‌ ಬಾಬು ಹೆಸರಿರುವುಕ್ಕೆ ಆಕ್ಷೇಪ ವ್ಯಕ್ತಪಡಿಸಲಾಯಿತು. ಗಡಿಯಾರದೊಳಗಿರುವ ಸಂಸದರ ಹೆಸರು ತೆಗೆದು ಅಳವಡಿಸುವಂತೆ ಅಂಜುಮಾನ್‌ ಸಂಸ್ಥೆಯ ಜಮೀರ್‌ ಅಹ್ಮದ್‌ ಸೇರಿದಂತೆ ಹಲವು ಮುಸ್ಲಿಮರು ಪಟ್ಟು ಹಿಡಿದ ಬಳಿಕ ಗಡಿಯಾರವನ್ನು ತೆಗೆಯಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

“ಕ್ಲಾಕ್ ಟವರ್‌ಗೆ ಗಡಿಯಾರ ಅಳವಡಿಸುವ ಟ್ರಯಲ್ ರನ್‌ ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ಎಲ್ಲಾ ಪಕ್ಷದವರು ಹಾಗೂ ಅಧಿಕಾರಿಗಳನ್ನು ಸೇರಿಸಿ ಉದ್ಘಾಟನೆ ಹಮ್ಮಿಕೊಳ್ಳಬೇಕಿತ್ತು. ಆದರೆ, ಅದಕ್ಕೂ ಮುನ್ನ ಇಷ್ಟೆಲ್ಲಾ ಗೊಂದಲ ಆಗಿದ್ದು ಜಿಲ್ಲಾಡಳಿತ ಯಾವ ರೀತಿ ತೀರ್ಮಾನ ಮಾಡುತ್ತಾರೆ. ಅವರ ಜವಾಬ್ದಾರಿಗೆ ಬಿಟ್ಟ ವಿಚಾರ” ಎಂದರು.

“ಸುಮಾರು ವರ್ಷಗಳಿಂದ ಕ್ಲಾಕ್ ಟವರ್, ಹಳೆ ಬಸ್ ನಿಲ್ದಾಣದ ಗೋಪುರದಲ್ಲಿ ಗಡಿಯಾರ ಕೆಲಸ ಮಾಡುತ್ತಿರಲಿಲ್ಲ. ಕ್ಲಾಕ್‌ ಟವರ್‌ಗೆ ನನ್ನ ಎಂಪಿ ಅನುದಾನದಲ್ಲಿ ಗಡಿಯಾರ ಅಳವಡಿಸಿ ಟ್ರಯಲ್ ರನ್‌ ಮಾಡಲಾಗಿದೆ. ನನ್ನ ಹೆಸರಿರುವ ಕಾರಣ ಕೆಲವರು ವಿರೋಧ ಮಾಡುತ್ತಿದ್ದಾರೆ. ಅದು ನಗರಸಭೆ ಆಸ್ತಿ ಆಗಿರುವುದರಿಂದ ನಾನು ಗಡಿಯಾರ ಮಾಡಿಸಿದೆ. ಎಚ್ಎಂಟಿ ಕಂಪನಿಯ ಅಧಿಕಾರಿಗಳು ಬಂದು ನೋಡಿ ಯಾರ ಅನುದಾನ, ಯಾರ ಅವಧಿ ಎಂಬುದನ್ನು ಹಾಕಿದ್ದಾರೆ ಅಷ್ಟೆ. ಕೆಲಸ ಮಾಡಿದ ಸಂದರ್ಭದಲ್ಲಿ ಜನಪ್ರತಿನಿಧಿಗಳ ನಾಮಫಲಕ ಹಾಕುವುದು ಸಹಜ. ಆದರೆ, ಸಂಸದ ಹೆಸರು ಬೇಕಾಗಿಲ್ಲ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ” ಎಂದು ಕೋಲಾರ ಸಂಸದ ಮಲ್ಲೇಶ್ ಬಾಬು ಪ್ರತಿಕ್ರಿಯಿಸಿದ್ದಾರೆ.

34e2f3e7 802f 4539 8291 4ebad824a3ff

ಕೋಲಾರ ಅಂಜುಮನ್ ಸಂಸ್ಥೆ ಅಧ್ಯಕ್ಷರಾದ ಜಮೀರ್ ಅಹಮದ್ ರವರು ಪ್ರತಿಕ್ರಿಯೆ ನೀಡಿ, “ಕೋಲಾರ ನಗರದ ಟವರ್ ಸ್ಥಾಪನೆ ಮಾಡಿದ್ದು ನಮ್ಮ ತಾತ ಮುಸ್ತಫಾ ಸಾಹೇಬರು 1938ರಲ್ಲಿ. ಐತಿಹಾಸಿಕ ಟವರ್‌ಗೆ ನಾವು ಗೌರವ ಕೊಡುತ್ತ ಬಂದಿದ್ದೇವೆ, ನಮ್ಮ ಕೋಲಾರ ಸಂಸದರು ಕ್ಲಾಕ್ ಟವರ್‌ಗೆ ಗಡಿಯಾರ ಹಾಕಲು ಮುಂದಾಗಿದ್ದಾಗ ನಾವು ಸಂತೋಷ ವ್ಯಕ್ತಪಡಿಸುತ್ತೇವೆ ಆದರೆ ವಾಚ್ ಮೇಲೆ ತಮ್ಮ ಹೆಸರು ಬರೆದು ಹಾಕಿದ್ದಾರೆ ಅದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ” ಎಂದರು.

ಕೋಲಾರ ಸಂಸದ ಮಲ್ಲೇಶ್ ಬಾಬು ನನಗೆ ಮೊದಲಿನಿಂದಲೂ ಪರಿಚಯ, ದಯವಿಟ್ಟು ಹೆಸರು ತೆಗೆದು ಗಡಿಯಾರ ಹಾಕಿ ಇಲ್ಲದಿದ್ದರೆ ಗೊಂದಲವಾಗುತ್ತೆ ತುಂಬಾ ಜನರು ಹೆಸರು ಬೇಡ ಎಂದು ಹೇಳುತ್ತಿದ್ದಾರೆ ಎಂದು ನಾನು ಮನವಿ ಮಾಡಿದ್ದೆ. ತಕ್ಷಣ ಮಲ್ಲೇಶ್ ಬಾಬು ಅವರು ಅವರು ಬೇಡ ಅಂದ್ರೆ ತೆಗೆದುಬಿಡೋಣ ನನಗೆ ಏನು ಅಭ್ಯಂತರವಿಲ್ಲ ಎಂದರು, ಸಂಸದರು ಟವರ್ ಬಳಿ ಇದ್ದ ಸಮಯದಲ್ಲೇ ಅವರ ಮುಂದೆಯೇ ಫಿಕ್ಸ್ ಮಾಡಿರುವ ಎರಡು ಗಡಿಯಾರಗಳನ್ನು ತೆಗೆಯಲಾಯಿತು” ಎಂದರು.

“ನಮ್ಮ ತಾತ ಮುಸ್ತಫಾ ಸಾಹೇಬರು ನಗರಸಭೆಗೆ ರಿಜಿಸ್ಟ್ರಾರ್ ಮಾಡಿ ಕೊಟ್ಟಿರುವ ದಾಖಲೆ ಇದ್ರೆ ತೋರ್ಸಿ, ನಾನು ಆರ್ ಟಿ ಐ ಮೂಲಕ ಫೀಸ್ ಕಟ್ಟಿ ಅಪ್ಲಿಕೇಶನ್ ಹಾಕಿ ಒಂದು ವರ್ಷ ಆಗಿದ್ರು ನಗರಸಭೆ ಅವರು ನಮಗೆ ದಾಖಲೆ ಕೊಟ್ಟಿಲ್ಲಾ, ನಮ್ಮ ತಾತ ಮುಸ್ತಫಾ ಸಾಹೇಬರು ನಗರಸಭೆಗೆ ಮೈಂಟನೆನ್ಸ್‌ಗೆ ಕೊಟ್ಟಿದ್ದಾರೆ, ಆದರೆ ನಗರಸಭೆಯವರು ತಮ್ಮದೇ ಆಸ್ತಿ ಎಂದು ಹೇಳುವುದು ತಪ್ಪು, ಸತ್ಯ ಯಾವತಿದ್ರು ಆಚೆ ಬಂದೆ ಬರುತ್ತೆ” ಎಂದರು.

ಜಿಲ್ಲಾಧಿಕಾರಿಗಳು ಸಮಾಧಾನವಾಗಿ ಇರಿ ನಿಮ್ಮನ್ನು ಮತ್ತು ಸಂಸದರನ್ನು ಕರೆಸಿ ಮಾತನಾಡಿದ ಬಳಿಕ ತಿರ್ಮಾನ ಕೈಗೊಳ್ತೇವೆ ಎಂದು ಹೇಳಿದ್ದಾರೆ.

8670d4e5 6265 4930 9a83 1d5f661416ad

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ರವರು ಕ್ಲಾಕ್ ಟವರ್ ಗೊಂದಲ ವಿಚಾರವನ್ನು ಸ್ಥಳೀಯ ಶಾಸಕ ಕೋತ್ತೂರ್ ಮಂಜುನಾಥ್ ಬಗೆಹರಿಸುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕೋಲಾರ ನಗರದ ಕ್ಲಾಕ್ ಟವರ್ ಗಡಿಯಾರ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಸಮಾಜಕಲ್ಯಾಣ ಇಲಾಖೆ ಕೆ.ಹೆಚ್ ಮುನಿಯಪ್ಪ, “ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಕ್ಲಾಕ್ ಟವರ್ ಗಡಿಯಾರ ಗೊಂದಲ ಶಾಂತಿಯುತವಾಗಿ ಬಗೆಹರಿಸಿ ಎಂದು ಕೇಳಿಕೊಂಡಿದ್ದೇನೆ” ಎಂದರು.

“ಜಿಲ್ಲಾಧಿಕಾರಿ ರವಿ ರವರಿಗೆ ಅಂಜುಮನ್ ಸಂಸ್ಥೆ ಅಧ್ಯಕ್ಷರು ಸಂಸದರ ಹೆಸರು ತೆಗೆದು ಗಡಿಯಾರ ಹಾಕಬೇಕು ಎಂದು ಮನವಿ ಮಾಡಿದ್ರೆ, ಇನ್ನೊಂಡೆದೆ ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಯವರು, ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ರವರು ಮನವಿ ನೀಡಿ ಸಂಸದರ ಹೆಸರು ಇರುವ ಗಡಿಯಾರ ಕ್ಲಾಕ್ ಟವರ್‌ಗೆ ಹಾಕಬೇಕು” ಎಂದಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಕ್ಲಾಕ್ ಟವರ್ ಗಡಿಯಾರ ವಿಚಾರದ ಪರ ವಿರೋಧದ ಚರ್ಚೆ ಎಲ್ಲೆಲ್ಲೂ ಆಗುತ್ತಿದೆ. ಎಲ್ಲರ ಕಣ್ಣು ಜಿಲ್ಲಾಧಿಕಾರಿಯ ತಿರ್ಮಾನದ ಮೇಲಿದ್ದು, ಶಾಂತಿಯುತವಾಗಿ ಜಿಲ್ಲಾಧಿಕಾರಿಗಳು ಗೊಂದಲ ಬಗೆಹರಿಸುತ್ತಾರೆ ಎಂಬ ವಿಶ್ವಾಸದಲ್ಲಿ ಎಲ್ಲರೂ ಇದ್ದಾರೆ.

WhatsApp Image 2025 06 24 at 16.24.21 6207fd1d
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದ 15 ಜಿಲ್ಲೆಗಳಲ್ಲಿ ಇನ್ನೂ 5 ದಿನ ಮಳೆ ಅಬ್ಬರ: ಹವಾಮಾನ ಇಲಾಖೆ

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಹಾಗೂ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ...

ರಸ್ತೆ ಅಪಘಾತಗಳ ನಿಯಂತ್ರಣಕ್ಕೆ AI ತಂತ್ರಜ್ಞಾನದ ನೆರವು: ಡಾ. ಶಾಲಿನಿ ರಜನೀಶ್

ರಾಜ್ಯದಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವು-ನೋವುಗಳನ್ನು ಗಣನೀಯವಾಗಿ ತಗ್ಗಿಸಲು ಕೃತಕ ಬುದ್ಧಿಮತ್ತೆ...

ದೆಹಲಿ | ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರ ಬಂಧನ

ಪೂರ್ವ ದೆಹಲಿಯ ಪ್ರೀತ್ ವಿಹಾರ್ ಪ್ರದೇಶದ ಕೆಫೆಯೊಂದರಲ್ಲಿ ಮಂಗಳವಾರ ನಸುಕಿನ ವೇಳೆ...

ಭಾರತದ ಮೇಲೆ‌ ಹೊಸ ಸುಂಕ ಹೇರಲು ಟ್ರಂಪ್ ಆಡಳಿತ ಸಿದ್ಧತೆ; ಶೀಘ್ರವೇ ಅಧಿಕೃತ ಘೋಷಣೆ!

ನಾನಾ ರಾಷ್ಟ್ರಗಳು ದೇಶೀಯ ಕೈಗಾರಿಕಾ ಉತ್ಪಾದನೆಗೆ ಸರ್ಕಾರಿ ಸಬ್ಸಿಡಿ ಮತ್ತು ಬೆಂಬಲ...