ಚಿಕ್ಕಬಳ್ಳಾಪುರ | ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರವೂ ಹೊರಬರಲಿ: ನಟ ಚೇತನ್

Date:

Advertisements

“ತನಿಖಾ ಸಂಸ್ಥೆಗಳು ಸರಕಾರದ ತಾಳಕ್ಕೆ ಕುಣಿಯುತ್ತಿವೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರ ಕೂಡ ಹೊರಬರಬೇಕು” ಎಂದು ನಟ ಚೇತನ್ ಆಗ್ರಹಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಸಾಕಷ್ಟು ಹಗರಣಗಳ ತನಿಖೆ ಮಾಡುವಲ್ಲಿ ಎಸ್.ಐ.ಟಿ ವಿಫಲವಾಗುತ್ತಿದೆ. ಸರಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ” ಎಂದು ಆರೋಪಿಸಿದರು.

“ಮುಡಾ ಹಗರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ. ಅವರೆಲ್ಲರನ್ನೂ ಪಕ್ಷಾತೀತವಾಗಿ, ಪಾರದರ್ಶಕವಾಗಿ ವಿಚಾರಣೆಗೊಳಪಡಿಸಿ ತನಿಖೆ ನಡೆಸಬೇಕು. ಸಿಎಂ ಸಿದ್ದರಾಮಯ್ಯ ಅದು ಬಿಜೆಪಿ ಅವಧಿಯಲ್ಲಿ ಆಗಿರುವುದು ಎಂದು ಹೇಳುತ್ತಿರುವುದು ಸರಿಯಾದ ಕ್ರಮವಲ್ಲ” ಎಂದರು.

Advertisements

“ವಿಧಾನಸೌಧದ ಮುಂಭಾಗದಲ್ಲಿ 25 ಅಡಿ ಉದ್ದದ ಭುವನೇಶ್ವರಿ ಪ್ರತಿಮೆ ಸ್ಥಾಪಿಸಿರುವುದು ಮೌಢ್ಯದ ಪ್ರತೀಕ. ವೈಜ್ಞಾನಿಕ ಮನಸ್ಥಿತಿಯನ್ನೇ ಹೋಗಲಾಡಿಸುವ ಪ್ರಯತ್ನವಿದು. ಇದನ್ನು ಎಲ್ಲರೂ ಖಂಡಿಸಬೇಕು” ಎಂದು ಹೇಳಿದರು.

“ರಾಜ್ಯದ ಕುರಿ ಕಳ್ಳತನ ಹೆಚ್ಚುತ್ತಿರುವ ಕಾರಣ ಕುರಿಗಾಹಿಗಳು ಬಂದೂಕು ವಿತರಣೆ ಮಾಡುವ ಕುರಿತು ಸರಕಾರ ಬಹಳ ದಿನಗಳಿಂದ ಚಿಂತನೆ ನಡೆಸುತ್ತಿದೆ. ಇದೂ ಸಹ ಸರಿಯಾದ ಕ್ರಮವಲ್ಲ. ಇದು ಸಮಾಜದ ಶಾಂತಿ, ಸುರಕ್ಷತೆಗೆ ಹಾನಿಕಾರಕ. ಇದಕ್ಕೆ ಬದಲಾಗಿ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿ. ನೀವು ಬಂದೂಕು ಕೊಡುತ್ತಿರುವುದು ರಕ್ಷಣೆಗೆ ಅಲ್ಲ. ಮನುಷ್ಯರ ನಡುವಿನ ಸಂಘರ್ಷಕ್ಕೆ ದಾರಿಯಾಗಲಿದೆ” ಎಂದು ನಟ ಚೇತನ್ ಕಳವಳ ವ್ಯಕ್ತಪಡಿಸಿದರು.

ನಟ ಚೇತನ್

ದೇಶದಲ್ಲಿ ಅರಣ್ಯ ಕಬಳಿಕೆ ಹೆಚ್ಚಾಗಿದೆ. ಅರಣ್ಯಗಳು ಪ್ರಪಂಚದ ಶ್ವಾಸಕೋಶಗಳಿದ್ದಂತೆ. ಗೋಮಾಳ ಜಾಗವನ್ನು ಕೈಗಾರಿಕೆ ಮತ್ತು ಭೂ ಮಾಲೀಕರು ಅತಿಕ್ರಮಣ ಮಾಡುತ್ತಿದ್ದಾರೆ. ಪ್ರಾಣಿ ಪಕ್ಷಿಗಳ ಉಳಿವಿಗಾಗಿ, ಧನ, ಕರು, ಕುರಿ ಮೇಕೆಗಳ ಮೇವಿಗಾಗಿ ಗೋಮಾಳಗಳ ರಕ್ಷಣೆ ಆಗಬೇಕಿದೆ ಎಂದು ಹೇಳಿದರು.

ಅಹಿಂದ ಒಕ್ಕೂಟಗಳ ಅಧ್ಯಕ್ಷ, ಹೈಕೋರ್ಟ್ ವಕೀಲ ಹರಿರಾಂ ಮಾತನಾಡಿ, “ಕಾಂಗ್ರೆಸ್ ಸರಕಾರ ಗ್ಯಾರಂಟಿಗಳಿಗಾಗಿ ಬೇರೆ ಮಾರ್ಗ ಅನುಸರಿಸಬಹುದು ಎಂದು ನಾವು ಭಾವಿಸಿದ್ದೆವು. ಆದರೆ, ದಲಿತರ ಜೇಬನ್ನು ಕದಿಯುತ್ತಿರುವ 420 ಕಾಂಗ್ರೆಸ್ ಎಂದು ನಾವು ಊಹಿಸಿರಲಿಲ್ಲ. ದಲಿತರ ಎಸ್‌ಇಪಿ – ಟಿಎಸ್‌ಪಿ ಹಣವನ್ನು ಗ್ಯಾರಂಟಿಗಳ ಅನುಷ್ಠಾನಕ್ಕೆ ಬಳಸಿದೆ. ಕಳೆದ 9 ವರ್ಷಗಳಲ್ಲಿ ಸುಮಾರು 75 ಸಾವಿರ ಕೋಟಿ ದಲಿತರ ಹಣ ದುರ್ಬಳಕೆ ಆಗಿದೆ. ನಿಗಮಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ. ದಲಿತರ ನಿಯೋಗ ಇದೆಲ್ಲವನ್ನೂ ಪ್ರಶ್ನೆ ಮಾಡಲು ಹೋದಾಗ ಅವರ ಮೇಲೆ ಕೇಸು ಹಾಕಲಾಗಿದೆ” ಎಂದು ಕಿಡಿಕಾರಿದರು.

ಪಿ.ಟಿ.ಸಿ.ಎಲ್ ಕಾಯ್ದೆಯ ಪರಿಣಾಮ ದಲಿತರು ಭೂಮಿ ಕಳೆದುಕೊಂಡರು. ಅಧಿಕಾರಿಗಳು ದಲಿತರ ವಿರುದ್ಧವಾಗಿ ಆದೇಶ ಮಾಡುತ್ತಿದ್ದಾರೆ. ಎಸಿ, ಡಿಸಿಗಳನ್ನ ನಿಯಂತ್ರಣ ಮಾಡಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅವರನ್ನ ರಕ್ಷಣೆ ಮಾಡುವ ಕೆಲಸಕ್ಕೆ ಸರಕಾರ ಮುಂದಾಗುತ್ತಿದೆ ಎಂದು ಗುಡುಗಿದರು.

ಭೂಮಿ ಮಂಜೂರು ಸಮಿತಿ ಅಧ್ಯಕ್ಷರಾಗಿರುವ ಶಾಸಕರ ಸಂಬಂಧಿಯೊಬ್ಬರು 150 ಕೋಟಿ ಬೆಲೆಬಾಳುವ ಜಮೀನನ್ನು ದಲಿತರ ವಿರುದ್ಧವಾಗಿ ಆದೇಶ ಮಾಡಿದ್ದಾರೆ. ಜನಪ್ರತಿನಿಧಿಗಳ ಅಷ್ಟೇ ಅಲ್ಲ, ಅವರ ಕೆಳಗಿನ ಅಧಿಕಾರಿ ವರ್ಗವೂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಂತವರನ್ನು ಕಾಪಾಡುವ ಕೆಲಸಕ್ಕೆ ಸರಕಾರ ಮುಂದಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶೇ.85 ರಷ್ಟು ದಲಿತರು, ಶೇ.95 ರಷ್ಟು ಮುಸ್ಲಿಮರ ಮತಗಳೇ ಕಾರಣ. ಆದರೆ ಸರಕಾರದಲ್ಲಿ ದಲಿತರಿಗೆ ಉನ್ನತ ಅಧಿಕಾರ ಇಲ್ಲ. ಸಿದ್ದರಾಮಯ್ಯ ಒಬ್ಬರಿದ್ದರೆ ದಲಿತರು ಇದ್ದಂತಲ್ಲ. ಇದು ಸರ್ವಾಧಿಕಾರಿ ಧೋರಣೆ. ಹೀಗಾಗಿ, ಬಿಜೆಪಿ ವಿರುದ್ಧ ಪ್ರಶ್ನೆ ಮಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದರು.

ಇದನ್ನು ಓದಿದ್ದೀರಾ? ಉಡುಪಿ | ವೈದ್ಯ ಡಾ. ಕೀರ್ತನ್ ಉಪಾಧ್ಯರಿಂದ ಮುಸ್ಲಿಮರ ಬಗ್ಗೆ ದ್ವೇಷದ ಟ್ವೀಟ್; ಎಫ್‌ಐಆರ್ ದಾಖಲು

ಕಾಂಗ್ರೆಸ್ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಕೋಲಾರದ ಪೊಲೀಸ್ ಅಧಿಕಾರಿ ಒಬ್ಬ ಕೇವಲ ಎರಡೇ ದಿನಗಳಲ್ಲಿ 90 ಜನರಿಗೆ ನೋಟಿಸ್ ನೀಡಿ ಬಿ – ರಿಪೋರ್ಟ್ ಕೊಟ್ಟಿದ್ದಾರೆ. ಇದು ಸಾಧ್ಯವಾ? ಗೃಹ ಸಚಿವರಿಗೆ ಇದರ ಪ್ರಜ್ಞೆ ಇಲ್ಲ. ಸರಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಇಷ್ಟೆಲ್ಲಾ ಆದರೂ ದಲಿತ ಸಂಘಟನೆಗಳು, ದಲಿತ ನಾಯಕರು ಸುಮ್ಮನಿರುವುದು ದೊಡ್ಡ ದುರಂತ. ಸಿದ್ದರಾಮಯ್ಯ ಅವರ ವಕ್ತಾರರಂತೆ ವರ್ತಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದರ ಬಗ್ಗೆ ಯುವಜನರು ಧ್ವನಿ ಎತ್ತಬೇಕು” ಎಂದು ಹರಿರಾಂ ಆಗ್ರಹಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X