ಚಿಕ್ಕಬಳ್ಳಾಪುರ | ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ನಾಮಪತ್ರ ಸಲ್ಲಿಕೆ; ಹರಿದು ಬಂದ ಜನಸಾಗರ

Date:

Advertisements

ಬಿಜೆಪಿಯಿಂದ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಪಡೆಯಲು ಕೇಂದ್ರ ಮಟ್ಟದಲ್ಲಿ ಹೋರಾಟ ನಡೆಸುತ್ತೇನೆ. ಕ್ಷೇತ್ರದ ಧ್ವನಿಯಾಗಿ, ರಾಜ್ಯದ ಪರವಾಗಿ ಕೇಂದ್ರದಲ್ಲಿ ಹೋರಾಟ ಮಾಡುತ್ತೇನೆ. ಚುನಾವಣೆಯಲ್ಲಿ ಸೇವೆ ಸ್ಲಲಿಸಲು ನನಗೆ ಅವಕಾಶ ಕಲ್ಪಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು.

ಚಿಕ್ಕಬಳ್ಳಾಪುರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರಸ್‌ನಿಂದ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಮೆರವಣಿಗೆಯಲ್ಲಿ ಮಾತನಾಡಿದರು.

“ಇದು ಅತ್ಯಂತ ಪ್ರಮುಖ ಚುನಾವಣೆ, ಪ್ರತಿಯೊಂದು ಮನೆಗೂ ಗ್ಯಾರೆಂಟಿ ಯೋಜನೆಗಳು ತಲುಪುತ್ತಿವೆ. ರಾಜ್ಯ ಸರ್ಕಾರಕ್ಕೆ ನಾಲ್ಕು ವರ್ಷಗಳ ಅಧಿಕಾರದ ಅವಧಿ ಇದ್ದು, ಸಂಸದರಿಗೆ ಐದು ವರ್ಷಗಳ ಅವಧಿ ಇರಲಿದೆ. ನಿಮ್ಮ ಸೇವೆಗೆ ಇದೊಂದು ಸದಾವಕಾಶ” ಎಂದು ಹೇಳಿದರು.

Advertisements

“ಬಿಜೆಪಿ ಸರ್ಕಾರಕ್ಕೆ ದಕ್ಷಿಣ ಭಾರತದ ಬಗ್ಗೆ ಒಲವಿಲ್ಲ. ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಅವರಿಗೆ ದಕ್ಷಿಣ ಭಾರತ ಬೇಕಿಲ್ಲ. ಉತ್ತರ ಭಾರತದ ಬಗ್ಗೆ ಮಾತ್ರ ವಿಶೇಷ ಅಭಿಮಾನ. ಕರ್ನಾಟಕದ ತೆರಿಗೆ ಹಣವನ್ನು ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನಕ್ಕೆ ನೀಡುತ್ತಿದೆ. ಹೀಗಾಗಿ ರಾಜ್ಯದ ಪರ ಹೋರಾಟ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತದಾರರೇ ಅಭ್ಯರ್ಥಿಗಳು, ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ, ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಿಸಲಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡ ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕು” ಎಂದು ಮನವಿ ಮಾಡಿದರು.

“ಕೋವಿಡ್ ಸಮಯದಲ್ಲಿ ಕೋಟ್ಯಂತರ ಜನ ನರಳುವಂತಾಯಿತು. ರಾಜ್ಯದ ಜನತೆಯೂ ತೀವ್ರ ತೊಂದರೆಗೆ ಸಿಲುಕಿದ್ದರು. ಅಷ್ಟೇ ಅಲ್ಲದೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹೆಚ್ಚಿನ ದಬ್ಬಾಳಿಕೆಯಾಗಿತ್ತು. ಹಿಂದೆ ಚಿಕ್ಕಬಳ್ಳಾಪುರದಲ್ಲಿ ಗೆದ್ದು ಬಂದಿದ್ದವರು ವಿನಾ ಕಾರಣ ಅಮಾಯಕರ ಮೇಲೆ ಪ್ರಕರಣಗಳ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದರು. ಇದನ್ನು ಈಗ ತಪ್ಪಿಸಬೇಕಾಗಿದೆ. ಆಸ್ಪತ್ರೆಗೆ ಹೋದಾಗ ನಾವು ವೈದ್ಯರ ಧರ್ಮ ಕೇಳುವುದಿಲ್ಲ. ವಕೀಲರ ಬಳಿ ತೆರಳಿದಾಗಲೂ ಅವರ ಧರ್ಮದ ಬಗ್ಗೆ ವಿಚಾರಿಸುವುದಿಲ್ಲ. ಆದರೆ ಬಿಜೆಪಿ ಪ್ರತಿಯೊಂದರಲ್ಲೂ ಧರ್ಮದ ವಿಚಾರ ಮುಂದಿಟ್ಟುಕೊಂಡು ಒಡೆದಾಳುವ ನೀತಿ ಅನುಸರಿಸುತ್ತಿದೆ. ಪ್ರತಿಯೊಬ್ಬರನ್ನೂ ಒಟ್ಟಿಗೆ ಕರೆದೊಯ್ಯುವ ಪಕ್ಷ ಕಾಂಗ್ರೆಸ್. ಯುವಕನಾದ ನನಗೆ ಅವಕಾಶ ಮಾಡಿಕೊಟ್ಟರೆ ನಾನು ಸದಾ ನಿಮ್ಮ ಜೊತೆ ಇರುತ್ತೇನೆ” ಎಂದು ಭರವಸೆ ನೀಡಿದರು.

ಸಚಿವ ಡಾ ಎಂ ಸಿ ಸುಧಾಕರ್ ಮಾತನಾಡಿ, “ಚಿಕ್ಕಬಳ್ಳಾಪುರದಲ್ಲಿ ಹೂವಿನ ಮಾರುಕಟ್ಟೆಗೆ 24 ಎಕರೆ ಜಮೀನು ಗುರುತಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಹಿಂದೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರೂ ಕೂಡಾ ಚಿಕ್ಕಬಳ್ಳಾಪುರಕ್ಕೆ ಎಂಆರ್‌ಐ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯುದಯಕ್ಕೆ ಸರ್ಕಾರ ಬದ್ಧವಾಗಿದೆ. ಹಿಂದೆ ಬೇಜವಾಬ್ದಾರಿ ಆಡಳಿತದಿಂದ ಸಹಸ್ರಾರು ಎಕರೆ ಭೂಮಿ ನಮ್ಮ ಕೈಬಿಟ್ಟು ಹೋಗುವ ಆತಂಕ ವ್ಯಕ್ತವಾಗಿತ್ತು. ಇದೀಗ ನಮ್ಮ ಸರ್ಕಾರ ಮರು ಸರ್ವೆಗೆ ಆದೇಶ ನೀಡಿ, ಭೂಮಿ ಉಳಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯವರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಬದಲಿಸಲು ಸಾದ್ಯವಿಲ್ಲ. ಅದಕ್ಕೆ ನಾವು ಅವಕಾಶ ನೀಡಬಾರದೆಂದರೆ ಕಾಂಗ್ರೆಸ್ ಗೆಲ್ಲಬೇಕು” ಎಂದರು.

ಸಚಿವ ಕೆ ಎಚ್ ಮುನಿಯಪ್ಪ ಮಾತನಾಡಿ, “ಬಿಜೆಪಿಯವರು ಧರ್ಮ ಧರ್ಮಗಳ ನಡುವೆ ಒಡಕು ತಂದು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ನಾವು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡುವಂತೆ ಕೇಂದ್ರಕ್ಕೆ ಮಾಡಿದ ಮನವಿಗೆ ಸ್ಪಂದನೆ ದೊರೆಯಲಿಲ್ಲ. ಬಡವರ ಪರವಾದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರ ಗೊಬ್ಬರ, ಔಷಧಗಳ ಬೆಲೆಗಳನ್ನು ಗಣನೀಯವಾಗಿ ಏರಿಕೆ ಮಾಡಿದೆ. ಜನಸಾಮಾನ್ಯರು ನೆಮ್ಮದಿಯಿಂದ ಬದಕಲು ಸಾಧ್ಯವಾಗುತ್ತಿಲ್ಲ. ಯುಪಿಎ ಸರ್ಕಾರದಲ್ಲಿ ಜಾರಿಗೆ ತಂದಿದ್ದ ಯೋಜನೆಗಳನ್ನು ಮತ್ತೆ ಅನುಷ್ಠಾನಗೊಳಿಸಲು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು” ಎಂದು ಹೇಳಿದರು.

ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, “ಎಂ ಎಸ್ ರಾಮಯ್ಯ ಕುಟುಂಬ ಸಾಕಷ್ಟು ಸೇವೆ ಸಲ್ಲಿಸಿದ್ದು, ಕಷ್ಟದಲ್ಲಿರುವವರಿಗೆ ನೆರವಾಗುತ್ತಾ ಬಂದಿದೆ. ಹಿಂದುಳಿದ ಹರಿಕಾರ ದೇವರಾಜ ಅರಸು ಅವರು ಕಷ್ಟ ಕಾಲದಲ್ಲಿದ್ದಾಗ ಅವರ ನೆರವಿಗೂ ಈ ಕುಟುಂಬ ಧಾವಿಸಿತ್ತು. ರಾಜ್ಯವನ್ನಾಳಿದ ನೀವು ಚೆನ್ನಾಗಿರಬೇಕೆಂದು ಅರಸು ಅವರಿಗೆ ಈ ಕುಟುಂಬದವರು ಹರಸುತ್ತಿದ್ದರು. ನನ್ನನ್ನು ಹೇಗೆ ಆಶೀರ್ವದಿಸಿದ್ದೀರೋ ಅದೇ ರೀತಿ ರಕ್ಷಾ ರಾಮಯ್ಯ ಅವರನ್ನೂ ಆಶೀರ್ವದಿಸಿ” ಎಂದು ಮತದಾರರಲ್ಲಿ ಮನವಿ ಮಾಡಿದರು.

“ಪ್ರತಿ ಕುಟುಂಬದ ಸದಸ್ಯರಿಗೆ 10 ಕೆ.ಜಿ ಅಕ್ಕಿ ದೊರೆಯುತ್ತಿದೆ. ಶಾಶ್ವತ ನೀರಾವರಿ ಜಾರಿ ಜೊತೆಗೆ ಕೆ ಸಿ ವ್ಯಾಲಿ ಕಣಿವೆಯಿಂದ ಬರುವ ನೀರನ್ನು ಮೂರಹೇ ಹಂತದಲ್ಲಿ ಶುದ್ದೀಕರಣ ಮಾಡಲು ಪ್ರಮಾಣಿಕ ಪ್ರಯತ್ನ ನಡೆಸುತ್ತೇವೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಸಾಧನೆಯಿಂದ ಎತ್ತಿನ ಹೊಳೆ ಯೋಜನೆ ಜಾರಿಗೆ ಬಂದಿದ್ದು, ಒಂದೆರಡು ವರ್ಷಗಳಲ್ಲಿ ನೀರು ಹರಿಯಲಿದೆ” ಎಂದು ಭರವಸೆ ನೀಡಿದರು.

“ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಈ ಬಾರಿ ನಾವು 23 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಕಾಂಗ್ರೆಸ್ ಗೆಲ್ಲದಿದ್ದರೆ ಗ್ಯಾರಂಟಿಗಳು ನಿಲ್ಲಲಿವೆ. ಹೀಗಾಗಿ ನಮಗೆ ಶಕ್ತಿ ತುಂಬಿ. ರಕ್ಷಾ ರಾಮಯ್ಯ ಅವರನ್ನು ಗೆಲ್ಲಿಸಿ. ನೀವು ನಮಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಸತ್ಯ, ನಿಷ್ಠೆಗೆ ಹೆಸರಾದ ಕೆ ಪಿ ಬಚ್ಚೇಗೌಡರ ಆಶೀರ್ವಾದ ನಮಗೆ ದೊರೆತಿದೆ” ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಶಾಸಕ ಕೆ.ಪಿ. ಬಚ್ಚೇಗೌಡ ಮಾತನಾಡಿ, ರಕ್ಷಾ ರಾಮಯ್ಯ ಈ ಬಾರಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲು ಪ್ರತಿಯೊಬ್ಬರ ಪರಿಶ್ರಮ ಅಗತ್ಯವಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಜನಪರವಾಗಿವೆ. ಕಾಂಗ್ರೆಸ್ ಸರ್ಕಾರ ಜನರ ಹೃದಯದಲ್ಲಿದ್ದು, ಜನರ ಮನಸ್ಸಿನಲ್ಲಿದೆ. ಈ ಬಾರಿ ನಮ್ಮ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, “ಚಿಕ್ಕಬಳ್ಳಾಪುರ ಕ್ಷೇತ್ರ 270 ಕಿಲೋಮೀಟರ್ ಉದ್ದ ಇದ್ದು, 19 ಲಕ್ಷ ಮಂದಿ ಮತದಾರರನ್ನು ಹೊಂದಿದೆ. ಎಲ್ಲರೂ ಸೇರಿ ರಕ್ಷಾ ರಾಮಯ್ಯ ಅವರನ್ನು ಗೆಲ್ಲಿಸಬೇಕು. ಪಕ್ಷದ ಕಾರ್ಯಕರ್ತರೆಲ್ಲರೂ ತಾವೇ ರಕ್ಷಾ ರಾಮಯ್ಯ ಎಂದು ಭಾವಿಸಿಕೊಂಡು ಮನೆ ಮನೆಗೆ ತೆರಳಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು. 2014ರಲ್ಲಿ 15 ಲಕ್ಷ ರೂಪಾಯಿ ಕಪ್ಪು ಹಣವನ್ನು ಜನ ಸಾಮಾನ್ಯರ ಖಾತೆಗಳಿಗೆ ಹಾಕುವುದಾಗಿ ಬಿಜೆಪಿ ಹೇಳಿತ್ತು. 15 ಪೈಸೆಯನ್ನೂ ನೀಡಿಲ್ಲ. ಜನಸಾಮಾನ್ಯರ ಪರವಾಗಿ ಆಡಳಿತ ಮಾಡುತ್ತಿರುವುದು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸರ್ಕಾರ. ಅಂಬಾನಿ ಕುಟುಂಬದ ಮದುವೆ ನಿಶ್ಚಿತಾರ್ಥಕ್ಕೆ ಖರ್ಚು ಮಾಡಿದ್ದು 1,800 ಕೋಟಿ ರೂಪಾಯಿ,  ನಮ್ಮೆಲ್ಲರ ಹಣದಿಂದ ಅವರು ಮೆರೆಯುತ್ತಿದ್ದಾರೆ. ಆದರೆ ಜನಸಾಮಾನ್ಯರ ಆದಾಯ ದುಪ್ಪಟ್ಟು ಆಗಿಲ್ಲ. ಆದರೆ ರಸಗೊಬ್ಬರದ ಬೆಲೆ ಎರಡು ಪಟ್ಟು ಏರಿಕೆಯಾಗಿದೆ” ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಎಸ್ ರವಿ ಮಾತನಾಡಿ, “ಅದಾನಿ ಅವರು ಅಮಿತ್ ಶಾ ಅವರಿಗೆ ದೂರವಾಣಿ ಕರೆ ಮಾಡಿ ಸುಧಾಕರ್ ಅವರಿಗೆ ಟಿಕೆಟ್ ನೀಡುವಂತೆ ನೀಡುವಂತೆ ಶಿಫಾರಸು ಮಾಡಿದ್ದರು. ಹೀಗಾಗಿ ಅವರಿಗೆ ಬಿಜೆಪಿ ಟಿಕೆಡ್ ದೊರೆತಿದೆ. ಇವರಿಗೆ ಜನತೆಯ ಶಿಫಾರಸು ಇಲ್ಲ. ಇಂತಹವರು ಗೆಲ್ಲಬಾರದು. ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ರಾಜ್ಯಾದ್ಯಂತ ಉತ್ತಮ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರವನ್ನು ಮೈತುಂಬ ಹೊದ್ದು ಮಲಗಿರುವವರನ್ನು ಸೋಲಿಸಿ. ನಮ್ಮ ನವಯುವಕ, ಸಚ್ಛಾರಿತ್ರ್ಯದ ರಕ್ಷಾ ರಾಮಯ್ಯ ಗೆಲ್ಲುವುದು ಖಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | 6 ಮಂದಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಬಾಗೇಪೆಲ್ಲಿ ಶಾಸಕ ಸುಬ್ಬಾರೆಡ್ಡಿ, ಗೌರಿ ಬಿದನೂರು ಶಾಸಕ ಕೆ ಎಚ್ ಪುಟ್ಟಸ್ವಾಮಿ ಗೌಡ, ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು ಸೇರಿದಂತೆ ಬಹುತೇಕರು ಇದ್ದರು.

ತೀವ್ರ ರಾಜಕೀಯ ಒತ್ತಡದ ನಡುವೆಯೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬಹಿರಂಗ ಸಮಾವೇಶಕ್ಕೆ ಆಗಮಿಸಿ ರಕ್ಷಾ ರಾಮಯ್ಯ ಅವರಿಗೆ ಶುಭ ಕೋರಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X