ಆದಿವಾಸಿ ಸಮುದಾಯಗಳಿಗೆ ನ್ಯಾಯ ಸಿಗಬೇಕು. ಸಾಂಸ್ಕೃತಿಕ ಆದಿವಾಸಿ ಆಧ್ಯಾತ್ಮಿಕ ವಿಷಗಳನ್ನು ಅರಿಯಬೇಕು ಎಂದು ಆದಿವಾಸಿ ಜನರ ಬದುಕು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯಬೇಕು ಎಂದು ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿ, “ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು ಅಂತ ಬಾಬಾ ಸಾಹೇಬರು ಒಂದು ಮಾತು ಹೇಳ್ತಾರೆ, ಇಂದಿಗೆ 2 ಲಕ್ಷ ವರ್ಷಗಳ ಇತಿಹಾಸ ನೋಡುತ್ತಿದ್ದೇವೆ. ಇದರಲ್ಲಿ ಮುಕ್ತವಾಗಿ ಮೂಲ ನಿವಾಸಿಗಳು ಅಥವಾ ಆದಿವಾಸಿಗಳು ಇದ್ದಾರೆ. ಇವರು ಇಂದಿಗೂ ತಳಮಟ್ಟದಲ್ಲಿ ಬದುಕುತ್ತಿದ್ದಾರೆ” ಎಂದು ಹೇಳಿದರು.
“ಅಮೆರಿಕ ಅನ್ನೋ ದೇಶ ಶ್ರೀಮಂತವಾಗಿದೆ ಎಂದರೆ, ಆದಿವಾಸಿ ಸಮುದಾಯಗಳ ಭೂಮಿಗಳನ್ನು ಕಿತ್ತುಕೊಂಡು ನರಮೇಧಗಳನ್ನಾಗಿ ಮಾಡಿ ಅವರ ಕೈಯಲ್ಲಿ ಕೆಲಸ ಮಾಡಿಸಿಕೊಂಡು
ಅವರ ಭೂಮಿಯನ್ನು ಬಂಡವಾಳ ಶಾಹಿಗಳು ಹಾಗೂ ಕಾರ್ಪೊರೇಟರ್ ಕಂಪನಿಗಳಿಗೆ ನೀಡಿದ್ದಾರೆ” ಎಂದು ಹೇಳಿದರು.
“10 ಸಾವಿರ ವರ್ಷಗಳಿಂದ ಪ್ರತಿರೋಧ ಆಗಿದೆ. ಬ್ರಾಹ್ಮಣ ಅಸಮಾನತೆ, ಹಿಂದೂಗಳ ಅಸಮಾನತೆ, ಭ್ರಷ್ಟಾಚಾರ, ಜಾತಿ, ವರ್ಗ, ಲಿಂಗ ತಾರತಮ್ಯ ಪ್ರಸ್ತುತ ದಿನದಲ್ಲಿ ಹೆಚ್ಚಾಗಿದೆ. ದಲಿತ, ಪ್ರತಿರೋಧವಾಗಿ ಪಾಪಾ ಪುಣ್ಯ ಇಲ್ಲದಂತಾಗಿದೆ” ಎಂದು ಹೇಳಿದರು.
“ಬಾಬಾ ಸಾಹೇಬ್, ಬಸವಣ್ಣ, ಬುದ್ಧ ಅವರ ತತ್ವದೊಂದಿಗೆ ಇರಬೇಕಾಗಿದೆ. ರಾಜ್ಯ ಸರ್ಕಾರಗಳು ದಲಿತ ಆದಿವಾಸಿಗಳ ₹11 ಸಾವಿರ ಕೋಟಿ ಅನುದಾನವನ್ನು ವ್ಯಯ ಮಾಡುತ್ತಿದ್ದಾರೆ. ದಲಿತ, ಆದಿವಾಸಿಗಳಿಗೆ ಮೀಸಲಿಡಬೇಕಾದ ಅನುದಾನವನ್ನು ವ್ಯರ್ಥ ಮಾಡುತ್ತಿದ್ದಾರೆ. ಮೀಸಲಾತಿಗಳನ್ನು ಬಳಸದೆ ಜನರಿಗೆ ಮಣ್ಣೆರಚುತ್ತಿದ್ದಾರೆ” ಎಂದರು.
“ಹಾಲು ಮತದ ಕುರುಬ, ಮತ್ತಿ ಕುರುಬ ಇವರನ್ನೆಲ್ಲ ಎಸ್‌ಟಿಗೆ ಸೇರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ದಿಡ್ಡಳ್ಳಿ ಹೋರಾಟದಲ್ಲಿ ಆದಿವಾಸಿಗಳ ಗುಡಿಸಲು ಕಿತ್ತು ಎಸೆದರು. ಅದರೂ ನಿರಂತರ ಹೋರಾಟದಿಂದ ಅವರ ಬದುಕು ಕಟ್ಟಿಕೊಳ್ಳಲು ಅವಕಾಶ ಸಿಕ್ಕಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಲಿಂಗ ಅಸಮಾನತೆ ಭೇದಿಸಲು ಮಹಿಳೆಯರು ರಾಜಕೀಯಕ್ಕೆ ಬರಬೇಕು: ಡಾ. ವೆನ್ನೆಲ ಗದ್ದರ್
“ಆದಿವಾಸಿ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯಬೇಕು. ಇತ್ತೀಚೆಗೆ ಬಂದಿರುವ ಕಾಂತಾರ ಸಿನಿಮಾವನ್ನು ಹಿಂದೂ ಸಂಸ್ಕೃತಿಯೆಂದು ಹೇಳಿದರು. ಆದರೆ ಅದು ಪಂಜುರ್ಲಿ ಎನ್ನುವ ದೈವ. ಆ ದೈವಕ್ಕೆ ಆದಿವಾಸಿಗಳ 5 ಸಾವಿರ ವರ್ಷಗಳ ಇತಿಹಾಸವಿದೆ. ಸಮಾನತೆ, ನ್ಯಾಯ, ವೈಜ್ಞಾನಿಕತೆ ಮೂರು ಮುಖ್ಯವಾದ ಅಂಶವಾಗಿದೆ” ಎಂದು ಹೇಳಿದರು.
