ಚಿಕ್ಕಮಗಳೂರು | ಗಿರಿಜನರ ಹತ್ತಾರು ಸಮಸ್ಯೆಯ ಬದುಕಿನ ಸಮಾವೇಶ ʼಆದಿವಾಸಿ ಸಮಾವೇಶʼ: ಶಾಸಕ ಟಿ.ಡಿ. ರಾಜೇಗೌಡ

Date:

ಕೊಪ್ಪ ಗಿರಿಜನರ ಹತ್ತಾರು ಸಮಸ್ಯೆಯ ಬದುಕಿನ ಸಮಾವೇಶ ಆದಿವಾಸಿ ಸಮಾವೇಶ, ನಮಗೆ ಸೂರು, ಬದುಕುವುದಕ್ಕೆ ಮನೆ ಬೇಕು. ಎತ್ತಂಗಡಿ ಆಗಿರುವ ಗುಡಿಸಲನ್ನು ಮತ್ತೇ ನೆಲೆ ಉರುವ ರೀತಿಯಲ್ಲಿ ಮಾಡಬೇಕಿದೆ. ನಾವು ದುಡ್ಡು ಮಾಡ್ಬೇಕು ಅಂತ ಬಂದಿಲ್ಲ ಈತರ ಯಾರು ಭಾವಿಸಬಾರದು ಎಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆಯುತ್ತಿರುವ ಆದಿವಾಸಿ ಸಮಾವೇಶದಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.

ದನಿ ಇಲ್ಲದವರು ದನಿ ಇರುವ ಮಾತು ಕೇಳಿಲ್ಲ ಅಂದ್ರೆ ಕಷ್ಟವಾಗುತ್ತದೆ. ನಮಗೆ ಕಂಟಕವಾಗಿರುವ ಎರಡು ವಿಷಯಗಳಿವೆ. ಭೂಮಿ ನಮ್ಮ ಹಕ್ಕು ಹಾಗೂ ಮೂಲಭೂತ ಸೌಕರ್ಯಗಳು ನಮ್ಮ ಹಕ್ಕು ಕರ್ನಾಟಕದಲ್ಲಿ ಏಷ್ಟೋ ಹೋರಾಟ ನಡೆಯುತ್ತಿವೆ. ಕಂದಾಯ ಮಂತ್ರಿಯಾಗಿದ್ದ ಕಾಗೋಡು ತಿಮ್ಮಪ್ಪನಿರುವಾಗಲೇ ಡಿಸಿ ಅವರಿಗೆ ಹೇಳಿದಾಗ ಒಂದು ಚೂರೂ ಆ ಜಾಗದಿಂದ ಅಲುಗಾಡಲಿಲ್ಲ. ಇತ್ತೀಚಿಗೆ ಕಂದಾಯ ಸಚಿವರು ಆಗಿರುವ ಕೃಷ್ಣ ಬೈರೇಗೌಡ ಸಾಧ್ಯವಾದಷ್ಟು ನಾವು ಈ ಸಮಸ್ಯೆಯನ್ನು ಬಗೆ ಹರಿಸುತ್ತೀವಿ ಎಂದು ಹೇಳಿದ್ದಾರೆ. ಇಡೀ ದೇಶದ ರೈತರು 715 ದಿನ ಹೋರಾಟ ಮಾಡಿ, 712 ಜನ ರೈತರು ಹುತಾತ್ಮರಾಗಿದ್ದಾರೆ. 21ನೇ ಶತಮಾನದಲ್ಲಿ ಅಚ್ಚರಿ ಪಡುವ ಹೋರಾಟವಾಗಿ. ಮೂರು ಕಾಯ್ದೆಯನ್ನು ಸರ್ಕಾರ ಹಿಂಪಡೆಯುವಂತೆ ಮಾಡಿದೆ ಎಂದರು.

ಬುಡಕಟ್ಟು ಹಾಗೂ ಆದಿವಾಸಿ ಜನಾಂಗದಲ್ಲಿ ಬದುಕುವ ಹಕ್ಕಿನ ಕಿಡಿ ಹೊರ ಬರಬೇಕೆಂದು ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ಸಮಾವೇಶದಲ್ಲಿ ಮಾತನಾಡುತ್ತ ಹೇಳಿದರು. ಬುಡಕಟ್ಟು ಜನರ ಬದುಕು ಅಸ್ತವ್ಯಸ್ತವಾಗಿದೆ. ಅನಾದಿ ಕಾಲದಿಂದಲೂ ಬದುಕಿಗೋಸ್ಕರ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬದುಕಿಗೆ ದಕ್ಕೆ ಬರುವಂತಹ ಅನೇಕ ಕಾನೂನು ಜಾರಿಯಾಗುತ್ತಿವೆ. Wild life sanchuri, 94c ಡಿಮೊಡ್ ಫಾರೆಸ್ಟ್, ಹುಲಿ ಯೋಜನೆ ಆಗಿರಬಹುದು, ಇನ್ನು ಅನೇಕ ಯೋಜನೆಗಳು ಜಾರಿಯಾಗುತ್ತಿವೆ ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮುಂದುವರಿದು, ಅರಣ್ಯ ಹಕ್ಕು ಕಾಯ್ದೆ, ಮನೋಮೋಹನ್ ಸಿಂಗ್ ಅವರು ಇರುವಾಗಲೇ 2006-07ನೇ ಇಸವಿಯಲ್ಲಿ ಕಾನೂನಾಗಿ ಜಾರಿಗೆ ಬಂತು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಒಕ್ಕಲೇಬ್ಬಿಸುವುದನ್ನು ನಿಲ್ಲಿಸಬೇಕು. ರಸ್ತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕೊಡಬೇಕು ಎಂದು ಕಾನೂನು ಬಂತು. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವವರಿಗೆ ಮೂರು ಪಟ್ಟು ವ್ಯವಸ್ಥೆ ಮಾಡಬೇಕು ಎಂದು ಅರಣ್ಯ ಹಕ್ಕು ಕಾಯ್ದೆ ಹೇಳುತ್ತದೆ ಎಂದರು.

ಮಾರಾಟ ಮಾಡುವ ಹಕ್ಕು ಬೇಕು ಎಂದು ಹೇಳಿದ್ರೆ ಬಂಡವಾಳ ಹಾಗೂ ಕಂಪನಿಗಳು ಆವರಿಸಿಕೊಳ್ಳುತ್ತವೆ. ಹೋಂ ಸ್ಟೇ ಶುರುವಾಗುತ್ತವೆ. 480 ಹಕ್ಕು ಪತ್ರ ಕೊಪ್ಪ ತಾಲೂಕು, 187 ಹಕ್ಕು ಪತ್ರ ಶೃಂಗೇರಿ ತಾಲೂಕು ಹಾಗೂ ನರಸಿಂಹರಾಜಪುರ ತಾಲೂಕಿನ ಹಕ್ಕುಪತ್ರಗಳನ್ನು ಕೊಡುವುದಕ್ಕೆ ಸರ್ಕಾರದ ಗಮನ ತಂದಿದ್ದೇನೆ ಎಂದರು.

ಪ್ರತೀ ವರ್ಷ ಪೌಷ್ಠಿಕ ಆಹಾರ ಕೊಡಬೇಕು ಗಿರಕನ ಹುಳಿ,ಮುರುಕನ ಹುಳಿ ಜೇನು, ಸೀಗೆ,ಚಕ್ಕೆ ಇವನೆಲ್ಲ ಮಾರುತ್ತಿದ್ದರು ಕಾನೂನೂ ಕ್ರಮ ತಗೋಬೇಕು ಎಂದು ತೀರ್ಮಾನಿಸಿದಾಗ ಅದನ್ನ ಹೋರಾಟ ಮಾಡಿ ತಪ್ಪಿಸಿದರು. ಕೊಪ್ಪ ಭಾಗದ ಹಲವು ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯವನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಇದ್ದೀವಿ ಎಂದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 3ಕೋಟಿ ರೂ. ಕೊಟ್ಟಿದ್ದಾರೆ. ಕೊಪ್ಪದ ಡಿಗ್ರಿ ಕಾಲೇಜು 87ಲಕ್ಷ ಕೊಟ್ಟಿದ್ದಾರೆ. 2 ಕೋಟಿ ಮಠಕ್ಕೆ ಕೊಟ್ಟಿದ್ದಾರೆ. ಭೂಮಿಯನ್ನು ಒತ್ತುವರಿ ಮಾಡುತ್ತಿರುವ ಜಾಗವನ್ನು ಸರ್ವೇ ಮಾಡಲು ಕೆಲವರನ್ನು ನೇಮಕ ಮಾಡಿದ್ದಾರೆ. ಜನರ ಸಮಸ್ಯೆ ಬಗ್ಗೆ ನಾವು ಗಮನ ಹರಿಸುತ್ತೇವೆ. ಗುಡಿಸಲು ಹಾಕಿರುವ  ಕಂದಾಯ ಹಾಗೂ ಅರಣ್ಯ ಇಲಾಖೆಯವರು ನಮ್ಮ ಕುಟುಂಬಗಳನ್ನು ಕಿತ್ತು ಹೊರಗೆ ಹಾಕುತ್ತಾರಾ ಎಂಭ ಭಾವನೆ ಬೇಡ. ಹಕ್ಕುಪತ್ರಗಳನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಶೃಂಗೇರಿ ಕ್ಷೇತ್ರ ಶಾಸಕರು ಆದಿವಾಸಿ ಸಮಾವೇಶದಲ್ಲಿ ಭರವಸೆ ನೀಡಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಕೇಂದ್ರದಲ್ಲಿ ಇಂಡಿಯಾ ಒಕ್ಕೂಟಕ್ಕೆ ಅಧಿಕಾರ: ಗೃಹ ಸಚಿವ ಪರಮೇಶ್ವರ್

ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭಾ...

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....