ಚಿಕ್ಕಮಗಳೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ಎಸ್. ಡಿ. ಎ ಕಾಂತರಾಜ್ ಎಂಬ ಸಿಬ್ಬಂದಿ ಕಿರುಸಾಲ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ 10 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ನಡೆಸಿದೆ. 1 ಲಕ್ಷಕ್ಕೆ 50 ಸಾವಿರ ಸಬ್ಸಿಡಿ, 50 ಸಾವಿರ ಲೋನ್ ಸ್ಯಾಂಕ್ಷನ್ ಮಾಡಲು ಎಸ್.ಡಿ.ಎ. ಕಾಂತರಾಜ್ 10 ಸಾವಿರ ಲಂಚ ಕೇಳಿದ್ದರು. ಲಂಚ ಪಡೆಯುವಾಗ ಕಾಂತರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಭಾರೀ ಮಳೆಯಿಂದ ರೈತರ ಬೆಳೆ ನಾಶ; ಪರಿಹಾರದ ನಿರೀಕ್ಷೆಯಲ್ಲಿ ಸಂತ್ರಸ್ತರು
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಕೆ.ಜೆ. ತಿರುಮಲೇಶ್, ಇನ್ಸ್ಪೆಕ್ಟರ್ ಅನಿಲ್ ರಾಥೋಡ್, ಸಿಬ್ಬಂದಿ ವಿಜಯ ಭಾಸ್ಕರ್, ಸಂಜಯ್, ವೇದಾವತಿ, ಮಹೇಶ್, ಚಂದ್ರ ಶೆಟ್ಟಿ ಇತರರು ಇದ್ದರೆಂದು ಲೋಕಾಯುಕ್ತ ಅಧಿಕಾರಿಯಾದ ಅನಿಲ್ ರಾಥೋಡ್ ಈ ದಿನ.ಕಾಮ್ಗೆ ಮಾಹಿತಿ ನೀಡಿದ್ದಾರೆ.

