ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ ಐಟಿ ತನಿಖೆಯನ್ನು ದಿಕ್ಕು ತಪ್ಪಿಸಲು ಹೊರಟಿರುವ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಶಾಸಕತ್ವ ರದ್ದುಗೊಳಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟದಿಂದ ಚಿಕ್ಕಮಗಳೂರು ನಗರದಲ್ಲಿ ಬುಧವಾರ ನಡೆದಿದೆ.
ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಕಾಲೇಜು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಲಾಗಿದ್ದು, 12 ವರ್ಷ ಕಳೆದರು ಈ ಪರೆಗೂ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಿರುವುದಿಲ್ಲ. ಈ ಸಂಬಂಧ ನ್ಯಾಯಕ್ಕಾಗಿ ಹೋರಾಟಗಳೂ ನಡೆಯುತ್ತಿರುವಾಗಲೆ ಹಾಗೂ ಸರ್ಕಾರದ ನಿಯೋಜಿತ ವಿಶೇಷ ತನಿಖಾ ತಂಡ ತನಿಖೆಯನ್ನು ನಡೆಸುತ್ತಿರುವ ಸಂದರ್ಭದಲ್ಲಿ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿರುವ ಕೆಲವು ಶಾಸಕರ ನಡೆಯನ್ನು ದಲಿತ ಸಂಘಟನೆಗಳ ಒಕ್ಕೂಟ ತೀರ್ವವಾಗಿ ಖಂಡಿಸುತ್ತದೆ ಎಂದು ದಸಂಸ ಮುಖಂಡರು ತಿಳಿಸಿದರು.
ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರು, ವಿದ್ಯಾರ್ಥಿಗಳು, ಇನ್ನಿತರು ಸೇರಿದಂತೆ ಅಸಹಜ ಸಾವುಗಳನ್ನು ನೋಡಿದ್ದೇನೆ ಎಂದು ಭೀಮ ಎಂಬ ವ್ಯಕ್ತಿ ಹೇಳಿಕೆಯನ್ನು ನೀಡಿರುತ್ತಾನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಮಾನದ ಪರ ಹೋರಾಟಗಾರರು, ನ್ಯಾಯವಾದಿಗಳು, ಯೂಟ್ಯೂಬರ್‌ಗಳು ಮತ್ತು ಕೆಲವು ಮಾದ್ಯಮಗಳು ಧ್ವನಿ ಎತ್ತಿದ ಕಾರಣದಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿದ ಭಾಗವಾಗಿ ಎಸ್.ಐ.ಟಿ ಗೆ ತನಿಖೆ ಶುರುವಾಗಿದೆ.
ನೂರಾರು ಅಸಹಜ ಸಾವುಗಳ ಬಗ್ಗೆ ಊತು ಹಾಕಿರುವ ಸ್ಥಳಗಳನ್ನು ಗುರುತಿಸಿ ಆಗೆದು ಅಸ್ಥಿಪಂಜರ, ಮೂಳೆಗಳನ್ನು ಹುಡುಕುತ್ತಿರುವಾಗಲೆ ಕೆಲವು ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಎಸ್.ಐ.ಟಿ ತನಿಖೆಯನ್ನು ನಿಲ್ಲಿಸಬೇಕು. ಇದರಿಂದ ಮಂಜುನಾಥ ಸ್ವಾಮಿ ಕ್ಷೇತ್ರಕ್ಕೆ ಅಪಪ್ರಚಾರವಾಗುತ್ತಿದೆ ಎಂದು ಸುಳ್ಳು ಹೇಳಿಕೆ ನೀಡುವ ಮೂಲಕ ಎಸ್.ಐ.ಟಿ ತನಿಖೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಜನರಿಂದ ಆಯ್ಕೆಯಾದ ಇವರುಗಳು ಜನರ ಪರವಾಗಿ ನ್ಯಾಯ ಕೇಳದೆ ಅತ್ಯಾಚಾರಿಗಳ, ಕೊಲೆಗಡುಕರ ಪರವಾಗಿ ಹೇಳಿಕೆ ನೀಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಎಸ್ ಐಟಿ ತಂಡದವರು ತನಿಖೆ ವರದಿ ಬಿಡುಗಡೆ ಮಾಡುವ ಮೊದಲೆ, ಆರೋಪಿಸುತ್ತಿರುವುದು ಕೊಲಗಾರರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬುವಂತಹ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ ಎಂದು ದಸಂಸ ವತಿಯಿಂದ ತಿಳಿಸಿದರು.
ಸೌಜನ್ಯ, ಅನನ್ಯಭಟ್, ಪದ್ಮಲತಾ ಮತ್ತು ಆನೆ ಮಾವುತನ ಕೊಲೆಯ ಬಗ್ಗೆ ಒಂದು ದಿನವೂ ನ್ಯಾಯಕ್ಕಾಗಿ ವಿಧಾನ ಸಭೆಯಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ಈ ಶಾಸಕರು ಒತ್ತಾಯಿಸಿರುವುದಿಲ್ಲ. ಈ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು, ಬಿಜೆಪಿ ಮತ್ತು ಕೆಲವು ಕಾಂಗ್ರೇಸ್ ಶಾಸಕರು ಮುಗ್ಧ ಜನರ ಮತ್ತು ಭಕ್ತರನ್ನು ದೇವರ ಹೆಸರಿನಲ್ಲಿ ಪ್ರಚೋದಿಸುತ್ತಿರುವುದು ಮತ್ತು ಹೋರಾಟಗಾರರ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಎಸ್.ಐ.ಟಿ ತನಿಖೆಯ ದಿಕ್ಕು ತಪ್ಪಿಸಲು ಹೊರಟಿರುವ ಶಾಸಕರಸದಸ್ಯತ್ವವನ್ನು ರಾಜ್ಯ ಪಾಲರು ಕೂಡಲೆ ರದ್ದುಪಡಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟವು ಒತ್ತಾಯಿಸುತ್ತದೆ ಎಂದು ಆಶಾ ಸಂತೋಷ್ ತಿಳಿಸಿದರು.
ಇದನ್ನು ಓದಿದ್ದೀರಾ?ಚಿಕ್ಕಮಗಳೂರು l ಮಲೆನಾಡಿನಲ್ಲಿ ಕಾಡಾನೆ ಹಾವಳಿ: ಜನರಲ್ಲಿ ಭಯದ ವಾತಾವರಣ
ಈ ವೇಳೆ ಪ್ರಗತಿಪರ ಸಂಘಟನೆಯವರು ಹಾಗೂ ದಸಂಸ, ಸಾರ್ವಜನಿಕರು ಮತ್ತು ಇನ್ನಿತರರು ಸೇರಿದರು.