ಚಿಕ್ಕಮಗಳೂರು ನಗರದ ಬಸವನಹಳ್ಳಿ ಮಾರ್ಗವಾಗಿ ಹಾದು ಹೋಗುವ ಮುಖ್ಯ ರಸ್ತೆ ಬಳಿ ಅನ್ಯ ಗುಂಪಿನಿಂದ ವಕೀಲರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಕೋರ್ಟ್‌ನಲ್ಲಿ ವಕೀಲರ ವೃತ್ತಿ ನಿರ್ವಹಿಸುತ್ತಿದ್ದ ಮಂಜುನಾಥ ಪೂಜಾರಿ ಹಾಗೂ ಪೃಥ್ವಿ ಇವರಿಬ್ಬರೂ ಒಂದು ಕೇಸ್‌ಗೆ ಸಂಬಂಧಿಸಿದಂತೆ ಕೊಪ್ಪ ತಾಲೂಕು ಕೋರ್ಟ್‌ಗೆ ಹೋಗಿದ್ದರು. ಇದೇ ತಿಂಗಳು ಸೋಮವಾರ ರಾತ್ರಿ 9:45 ರಲ್ಲಿ ಇಬ್ಬರೂ ಕೂಡಿ ಬೈಕ್‌ನಲ್ಲಿ ಬರುತ್ತಿದ್ದಾಗ ಬುಲೆರೋ ಗಾಡಿಯಲ್ಲಿ ಬರುತ್ತಿದ್ದ ಚಾಲಕ ವೇಗವಾಗಿ ಇವರತ್ತಿರ ಬಂದು ಪದೇ ಪದೆ ಜೋರಾಗಿ ಗಾಡಿಯ ಹಾರ್ನ್ ಶಬ್ದ ಮಾಡಿದ್ದಾನೆ.
ಗಾಡಿ ಸ್ಥಳೀಯ ಕೆಆರ್‌ಎಸ್ ಆಸ್ಪತ್ರೆ ಬಳಿ ತಲುಪಿದಾಗ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವಕೀಲರು ಪ್ರಶ್ನೆ ಮಾಡಿದಾಗ ಮಹೇಂದ್ರ ಬುಲೆರೋ ಗಾಡಿಯಿಂದ ರೋಗಿಯೊಬ್ಬರನ್ನು ಕೆಳಗಿಳಿಸುತ್ತಾರೆ. ರೋಗಿಯನ್ನು ಕಂಡ ಕೂಡಲೇ ವಕೀಲರು ಕ್ಷಮೆಯಾಚಿಸಿ ಅಲ್ಲಿಂದ ಹೊರಡುತ್ತಿರುತ್ತಾರೆ. ಆದರೆ ಗಾಡಿಯಲ್ಲಿದ್ದ ಗುಂಪೊಂದು ಕೆಳಗಿಳಿದು ವಕೀಲರಿಗೆ ಕೆಟ್ಟ, ಅವಾಚ್ಯ ಶಬ್ದಗಳನ್ನಾಡಿ ಹಲ್ಲೆ ಮಾಡುತ್ತಾರೆ. ಹಲ್ಲೆ ಮಾಡಿದವರು ಸಾರಗೋಡು ಕುಂದೂರು ಗ್ರಾಮಕ್ಕೆ ಸೇರಿದವರು ಎನ್ನಲಾಗಿದೆ.
ಘಟನೆಯಾದ ಕೂಡಲೇ ಹತ್ತಿರವಿದ್ದ ಬಸವನಹಳ್ಳಿ ಪೋಲಿಸ್ ಠಾಣೆಗೆ ದೂರು ಕೊಡಲು ವಕೀಲರು ಹೋಗುತ್ತಾರೆ. ಹಲ್ಲೆ ಮಾಡಿದವರು ರಾಜಕೀಯ ಪ್ರಭಾವಿತ ವ್ಯಕ್ತಿಗಳಾಗಿದ್ದರಿಂದ ಕೇಸು ದಾಖಲಿಸಲು ಪೊಲೀಸ್ ಇಲಾಖೆಯವರಿಗೆ ರಾಜಕೀಯ ವ್ಯಕ್ತಿಗಳಿಂದ ಕೇಸ್ ದಾಖಲಿಸಲು ಒತ್ತಡ ಎದುರಾದಾಗ ಪೊಲೀಸ್ ಇಲಾಖೆಯವರು ಕೇಸ್ ದಾಖಲಿಸಲು ಹಿಂದೆ ಸರಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಬುದ್ಧ, ಅಂಬೇಡ್ಕರ್ ಮಾರ್ಗವೇ ನಮಗೆ ಆದರ್ಶವಾಗಬೇಕು: ಸುಭಾಷ್ ಮಾಡ್ರಹಳ್ಳಿ
ಅವಾಚ್ಯ ಶಬ್ಧಗಳಿಂದ ಬೈದಿರುವುದು ಹಾಗೂ ಹಲ್ಲೆ ಮಾಡಿರುವ ದೃಶ್ಯ ಸಿ ಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ವಕೀಲರು ಆ ಫೂಟೇಜ್ ತೆಗೆಸಿ ಅದರ ಸಾಕ್ಷಿ ನೀಡಿ ಪೊಲೀಸ್ ಇಲಾಖೆಗೆ ದೂರು ದಾಖಲಿಸುತ್ತಾರೆ. ನಂತರ ಅಧಿಕಾರಿಗಳು ಮಂಗಳವಾರ ಸಂಜೆ ಕೇಸ್ ದಾಖಲಿಸಿಕೊಳ್ಳುತ್ತಾರೆ. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆಂದು ವಕೀಲರು ಈ ದಿನ.ಕಾಮ್ ಜೊತೆ ಮಾತಾಡಿದ್ದಾರೆ.