2023-24ನೇ ಸಾಲಿನ ಎಸೆಸೆಲ್ಸಿಯ ಫಲಿತಾಂಶಗಳು ಪ್ರಕಟಗೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿನಿ ಫಾತಿಮತ್ ಸಮೀಹಾ ಸಂಸ್ಕೃತ ಭಾಷೆ ಆಯ್ಕೆ ಮಾಡಿಕೊಂಡು 590 ಅಂಕ ಗಳಿಸಿ, ಸಾಧನೆ ಮಾಡಿದ್ದಾರೆ.
ಚಿಕ್ಕಮಗಳೂರು ಬಸರಿಕಟ್ಟೆಯ ಶ್ರಿ ಸದ್ಗುರು ವಿದ್ಯಾಮಂದಿರದ ವಿದ್ಯಾರ್ಥಿನಿಯಾಗಿರುವ ಈಕೆ, ಪ್ರಥಮ ಭಾಷೆಯಾಗಿ ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡಿದ್ದರು. ಇದರಲ್ಲಿ 125ಕ್ಕೆ 125 ಅಂಕ ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ಕನ್ನಡದಲ್ಲಿ 99, ಇಂಗ್ಲಿಷ್‌ನಲ್ಲಿ 94, ಗಣಿತದಲ್ಲಿ 83, ವಿಜ್ಞಾನದಲ್ಲಿ 69, ಸಮಾಜ ವಿಜ್ಞಾನದಲ್ಲಿ 100 ಅಂಕ ಗಳಿಸಿ, ಒಟ್ಟು 625 ಅಂಕಗಳಲ್ಲಿ 590 ಅಂಕದೊಂದಿಗೆ ಶೇ.94.4 ರಷ್ಟು ಫಲಿತಾಂಶ ಬಂದಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕರುನಾಡು ಕಂಡ ಮಹಾನ್ ಚಿಂತಕ ಜಗಜ್ಯೋತಿ ಬಸವಣ್ಣ: ವೈ ಸಿ ಮಯೂರ್
ಇವರು ಚಿಕ್ಕಮಗಳೂರಿನ ಮುಹಮ್ಮದ್ ರಫೀಕ್ ಮತ್ತು ಸೆಲೀಖತ್ ಬೇಗಂ ಪಾಣೆಮಂಗಳೂರು ದಂಪತಿಯ ಪುತ್ರಿ.
