ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2024-25ನೇ ಸಾಲಿನ ಶಾಲಾ ಸಂಸತ್ ಚುನಾವಣೆಯು ಇತ್ತೀಚೆಗೆ ನಡೆಸಲಾಯಿತು.
ಶಾಲಾ ವಿದ್ಯಾರ್ಥಿಗಳ ಈ ಸಂಸತ್ ಚುನಾವಣೆಯು ದೇಶದ ಲೋಕಸಭಾ ಚುನಾವಣೆಯ ರೀತಿ ನೀತಿಗಳ ಮಾದರಿಯಲ್ಲೇ ಶಾಲಾ ಸಂಸತ್ ಚುನಾವಣೆಯು ನಡೆಯಿತು. ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಘೋಷಣೆಯೂ ಆಯಿತು. ನಂತರ ಪ್ರಮಾಣವಚನ, ಪದಗ್ರಹಣ ಕಾರ್ಯಕ್ರಮಗಳೂ ನಡೆದವು.
ಈ ಸಂದರ್ಭದಲ್ಲಿ ಶಾಲಾ ಸಂಸತ್ ಕುರಿತು ಮಾತನಾಡಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಎನ್ ಸತೀಶ್, “ಶಾಲಾ ಸಂಸತ್ ಚುನಾವಣೆಯ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಬಿತ್ತುವುದು ಇದರ ಮುಖ್ಯ ಉದ್ದೇಶ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಹಾಗೂ ವಿದ್ಯಾರ್ಥಿಗಳ ನಾಯಕತ್ವದಲ್ಲೇ ಶಾಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುವುದೇ ಶಾಲಾ ಸಂಸತ್ತಿನ ಮೂಲ ಆಶಯ” ಎಂದರು.
ಶಾಲಾ ಸಂಸತ್ತಿನ ನೂತನ ಮಂತ್ರಿಮಂಡಲದಲ್ಲಿ ರಾಷ್ಟ್ರಪತಿಯಾಗಿ ಚಿನ್ಮಯಿ, ಪ್ರಧಾನ ಮಂತ್ರಿಯಾಗಿ ಚೇತನ್ ಎಮ್ ಡಿ, ಶಿಕ್ಷಣ ಮಂತ್ರಿಯಾಗಿ ಚೇತನ್, ಆರೋಗ್ಯ ಮಂತ್ರಿಯಾಗಿ ಐಶ್ವರ್ಯಾ, ಕ್ರೀಡಾ ಮಂತ್ರಿಯಾಗಿ ಹರ್ಷವರ್ಧನ್, ಸಾಹಿತ್ಯ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ಚಿಂತನ, ಮಕ್ಕಳ ಕಲ್ಯಾಣ ಮಂತ್ರಿಯಾಗಿ ರಶ್ಮಿ ಕೆ ಆರ್, ಆಹಾರ ಖಾತೆ ಮಂತ್ರಿಯಾಗಿ ನಾಗವೇಣಿ, ಗೃಹ ಮಂತ್ರಿಯಾಗಿ ಶರತ್, ತೋಟಗಾರಿಕೆ ಮತ್ತು ನೀರಾವರಿ ಮಂತ್ರಿಯಾಗಿ ಶಹಬಾಝ್ ಆಯ್ಕೆಯಾದರು.
ಶಾಲಾ ಸಂಸತ್ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳಾಗಿ ಪ್ರಾಧ್ಯಾಪಕರಾದ ಭಗತ್ ಸಿಂಗ್ ಹಾಗೂ ಕೆ.ಟಿ. ದಾದಾ ಹಯಾತ್ ಕಾರ್ಯನಿರ್ವಹಿಸಿದರು. ಚುನಾವಣೆಯ ಸಂಭ್ರಮದಲ್ಲಿ ಶಾಲಾ ಸಿಬ್ಬಂದಿಗಳಾದ ನಾಗರಾಜ್ ಸಿ, ಸತೀಶ್ ಟಿ.ಆರ್, ನಾರಾಯಣಪ್ಪ ಎನ್, ಭಾಗ್ಯಮ್ಮ, ಮಹಾದೇವಿ, ಪಲ್ಲವಿ, ಲಿಂಗರಾಜು, ಹರೀಶ್ ಭಾಗಿಯಾಗಿದ್ದರು.
