ಚಿಕ್ಕನಾಯಕನಹಳ್ಳಿ | ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಸಂಸತ್‌’ ಚುನಾವಣೆ; ನೂತನ ಮಂತ್ರಿಮಂಡಲ ರಚನೆ

Date:

Advertisements

ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2024-25ನೇ ಸಾಲಿನ ಶಾಲಾ ಸಂಸತ್ ಚುನಾವಣೆಯು ಇತ್ತೀಚೆಗೆ ನಡೆಸಲಾಯಿತು.

ಶಾಲಾ ವಿದ್ಯಾರ್ಥಿಗಳ ಈ ಸಂಸತ್ ಚುನಾವಣೆಯು ದೇಶದ ಲೋಕಸಭಾ ಚುನಾವಣೆಯ ರೀತಿ ನೀತಿಗಳ ಮಾದರಿಯಲ್ಲೇ ಶಾಲಾ ಸಂಸತ್ ಚುನಾವಣೆಯು ನಡೆಯಿತು. ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಘೋಷಣೆಯೂ ಆಯಿತು. ನಂತರ ಪ್ರಮಾಣವಚನ, ಪದಗ್ರಹಣ ಕಾರ್ಯಕ್ರಮಗಳೂ ನಡೆದವು.

ಈ ಸಂದರ್ಭದಲ್ಲಿ ಶಾಲಾ ಸಂಸತ್ ಕುರಿತು ಮಾತನಾಡಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಎನ್ ಸತೀಶ್, “ಶಾಲಾ ಸಂಸತ್ ಚುನಾವಣೆಯ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಬಿತ್ತುವುದು ಇದರ ಮುಖ್ಯ ಉದ್ದೇಶ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಹಾಗೂ ವಿದ್ಯಾರ್ಥಿಗಳ ನಾಯಕತ್ವದಲ್ಲೇ ಶಾಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುವುದೇ ಶಾಲಾ ಸಂಸತ್ತಿನ ಮೂಲ ಆಶಯ” ಎಂದರು.

Advertisements

ಶಾಲಾ ಸಂಸತ್ತಿನ ನೂತನ ಮಂತ್ರಿಮಂಡಲದಲ್ಲಿ ರಾಷ್ಟ್ರಪತಿಯಾಗಿ ಚಿನ್ಮಯಿ, ಪ್ರಧಾನ ಮಂತ್ರಿಯಾಗಿ ಚೇತನ್ ಎಮ್ ಡಿ, ಶಿಕ್ಷಣ ಮಂತ್ರಿಯಾಗಿ ಚೇತನ್, ಆರೋಗ್ಯ ಮಂತ್ರಿಯಾಗಿ ಐಶ್ವರ್ಯಾ, ಕ್ರೀಡಾ ಮಂತ್ರಿಯಾಗಿ ಹರ್ಷವರ್ಧನ್, ಸಾ‌ಹಿತ್ಯ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ಚಿಂತನ, ಮಕ್ಕಳ ಕಲ್ಯಾಣ ಮಂತ್ರಿಯಾಗಿ ರಶ್ಮಿ ಕೆ ಆರ್, ಆಹಾರ ಖಾತೆ ಮಂತ್ರಿಯಾಗಿ ನಾಗವೇಣಿ, ಗೃಹ ಮಂತ್ರಿಯಾಗಿ ಶರತ್, ತೋಟಗಾರಿಕೆ ಮತ್ತು ನೀರಾವರಿ ಮಂತ್ರಿಯಾಗಿ ಶ‌ಹಬಾಝ್ ಆಯ್ಕೆಯಾದರು.

ಶಾಲಾ ಸಂಸತ್ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳಾಗಿ ಪ್ರಾಧ್ಯಾಪಕರಾದ ಭಗತ್ ಸಿಂಗ್ ಹಾಗೂ ಕೆ.ಟಿ. ದಾದಾ ಹಯಾತ್ ಕಾರ್ಯನಿರ್ವಹಿಸಿದರು. ಚುನಾವಣೆಯ ಸಂಭ್ರಮದಲ್ಲಿ ಶಾಲಾ ಸಿಬ್ಬಂದಿಗಳಾದ ನಾಗರಾಜ್ ‌ಸಿ, ಸತೀಶ್ ಟಿ.ಆರ್, ನಾರಾಯಣಪ್ಪ ಎನ್, ಭಾಗ್ಯಮ್ಮ, ಮಹಾದೇವಿ, ಪಲ್ಲವಿ, ಲಿಂಗರಾಜು, ಹರೀಶ್ ಭಾಗಿಯಾಗಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X