ಚಿಕ್ಕನಾಯಕನಹಳ್ಳಿ | ಬಹುಜನ-ಪ್ರಜಾಪ್ರಭುತ್ವದ ಕೋ-ಆಪರೇಟಿವ್ ಬ್ಯಾಂಕ್ ಚುನಾವಣೆ!!

Date:

Advertisements

15 ವರ್ಷಗಳ ತರುವಾಯ ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆದಿದೆ.

ಚಿಕ್ಕನಾಯಕನಹಳ್ಳಿ ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕಿಗೆ ಆಡಳಿತ ಮಂಡಳಿಯ ಚುನಾವಣೆ ಭಾನುವಾರ ಸಂಜೆಯವರೆಗೂ ನಡೆಯಿತು. ನಂತರ ಮತ ಎಣಿಕೆ ನಡೆದು ಸಂಜೆ 6.00 ಗಂಟೆಯ ಹೊತ್ತಿಗೆ ಫಲಿತಾಂಶ ಹೊರಬಿದ್ದಿದೆ.

ಚುನಾವಣಾಧಿಕಾರಿ ಹರೀಶ್ ಕುಮಾರ್ ಘೋಷಿಸಿದ ಫಲಿತಾಂಶದ ಪ್ರಕಾರ, ಚಲಾವಣೆಯಾಗಿರುವ ಒಟ್ಟು ಮತಗಳಲ್ಲಿ 12 ಮತಗಳು ತಿರಸ್ಕೃತಗೊಂಡಿವೆ. ಮಿಕ್ಕಂತೆ, ಕಣದಲ್ಲಿದ್ದ ಒಟ್ಟು ಅಭ್ಯರ್ಥಿಗಳಲ್ಲಿ, ರಮೇಶ್ ಬಾಬು 360 ಮತಗಳು, ಸಿಎಂ ರಂಗಸ್ವಾಮಿ 308 ಮತಗಳು, ಬೀರಪ್ಪ 304 ಮತಗಳು, ಸಿ ಎಸ್ ರಮೇಶ್ 284 ಮತಗಳು, ಮಂಜುನಾಥ್ 282 ಮತಗಳು, ಮಹಮ್ಮದ್ ಕಲಂದರ್ 280 ಮತಗಳು, ಸಿಬಿ ರೇಣುಕಸ್ವಾಮಿ 278 ಮತಗಳು, ಸಿ ಎಲ್ ದೊಡ್ಡಯ್ಯ 265 ಮತಗಳನ್ನು ಪಡೆಯುವ ಮೂಲಕ ಕೋ-ಆಪರೇಟಿವ್ ಬ್ಯಾಂಕ್’ನ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

Advertisements
1000801699

ರಾಜಕೀಯ ನವ ಚೈತನ್ಯ :
ಅತಿಹೆಚ್ಚು ಮತಗಳನ್ನು ಪಡೆದು ಜಯ ಗಳಿಸಿರುವ ರಮೇಶ್ ಬಾಬು ಫಲಿತಾಂಶ ಹೊರಬಿದ್ದ ನಂತರ ಮಾತನಾಡಿ, ಶತಮಾನದ ಇತಿಹಾಸವಿರುವ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಕಟ್ಟುವಲ್ಲಿ ಕೆ ಆರ್ ತಿಮ್ಮದಾಸಪ್ಪನವರು, ಪಟ್ಟಾಭಿರಾಮಶೆಟ್ಟರು, ರಾಜೇಶಶೆಟ್ಟರು ಮತ್ತು ಲಿಂಗದೇವರು ಮೊದಲಾದವರ ಶ್ರಮ ಅಗಣಿತವಾದುದು. ಹಿಂದೆ ದಿ-ಕೋ ಆಪರೇಟಿವ್ ಬ್ಯಾಂಕ್ ಎಂದು ಹೆಸರಿದ್ದ ಈ ಬ್ಯಾಂಕಿಗೆ ನಾನು ಅಧ್ಯಕ್ಷನಾಗಿದ್ದ ಕಾಲದಲ್ಲಿ ‘ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್’ ಎಂದ ಮರುನಾಮಕರಣ ಮಾಡಿದ್ದೆವು. ಅದೇ ತರಹ ಈ ಬ್ಯಾಂಕಿನ ಪ್ರಗತಿ ಹಾಗೂ ಬ್ಯಾಂಕ್ ಮೂಲಕ ಬಡವ ಬಲ್ಲಿದರ ಸೇವೆಗೆ ನಾನು ಮತ್ತು ನನ್ನ ತಂಡ ಕಟಿಬದ್ಧವಾಗಿದೆ. ರಾಜ್ಯಮಟ್ಟದ ರಾಜಕಾರಣದಲ್ಲಿ ವ್ಯಸ್ತಗೊಂಡಿದ್ದ ನನಗೆ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಕಾರಣದತ್ತ ಹೊರಳಲು ಈ ಗೆಲುವು ನವ ಚೈತನ್ಯ ತಂದಿದೆ ಎಂದು ಹರ್ಷಿಸಿದರು.


ಕಳೆದೆರಡು ಮೂರು ಬಾರಿಯಿಂದ ಆಡಳಿತ ಮಂಡಳಿಯ ಚುನಾವಣೆ ನಡೆಯದೆ ಸದಸ್ಯ-ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಯುತ್ತಿತ್ತು. 15 ವರ್ಷಗಳ ನಂತರ ಈಗ ಮತ್ತೆ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣಾ ಪ್ರಕ್ರಿಯೆಗೆ ತೆರೆದುಕೊಂಡಿದೆ. ಇದರ ಪರಿಣಾಮ, ಷೇರುದಾರ ಮತದಾರರಲ್ಲೂ ಉತ್ಸುಕತೆ ಕಾಣುತ್ತಿದೆ. ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಇತಿಹಾಸದಲ್ಲೇ ಶೇಕಡಾ 95’ರಷ್ಟು ಮತ ಚಲಾಯಿಸುವ ಮೂಲಕ ಬ್ಯಾಂಕಿನ ಷೇರುದಾರ-ಮತದಾರರು, ಪ್ರಜಾಪ್ರಭುತ್ವೀಯ ಪ್ರಕ್ರಿಯೆಯೇ ಅತ್ಯುತ್ತಮ ಎಂಬುದಕ್ಕೆ ಸಾಕ್ಷ್ಯ ಒದಗಿಸಿದ್ದಾರೆ.

1000801700

ಒಟ್ಟು 582 ಷೇರುದಾರ ಮತಗಳಿದ್ದು, ಸಂಜೆಯ ಹೊತ್ತಿಗಾಗಲೇ 532 ಮತ ಚಲಾಯಿಸುವ ಮೂಲಕ ಶೇಕಡಾ 95% ಮತ ಚಲಾವಣೆಯಾಗಿದೆ ಎಂದು ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ, ಸಹಕಾರ ಸಂಘಗಳ ಸಹಕಾರನಿಬಂಧಕ ಹರೀಶ್ ಕುಮಾರ್ ತಿಳಿಸಿದರು. ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಮತ ಎಣಿಕೆ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಫಲಿತಾಂಶ‌ ಹೊರಬಿದ್ದಿದೆ.


ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ ಎ’ಯಿಂದ ಶಶಿಧರ್, ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ ಬಿ’ಯಿಂದ ಸಿ ಜಿ ಮಂಜುನಾಥ್, ಪರಿಶಿಷ್ಟ ಪಂಗಡ (ಮೀಸಲು) ಸಿ ಎಚ್ ಲವಕುಮಾರ್, ಪರಿಶಿಷ್ಟ ಜಾತಿಯಿಂದ ಸಿ ಹೆಚ್ ಪ್ರಕಾಶ್, ಮಹಿಳಾ(ಮೀಸಲು) ಪುಷ್ಪಲತಾ ಹಾಗೂ ಸಿ ಎಸ್ ಶಿಲ್ಪ ಧರಣೇಶ್’ರವರುಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ 9 ಸ್ಥಾನಗಳಿಗೆ ಕೃಷ್ಣಯ್ಯ, ಖ್ವಾಜಾ ಅಹಮದ್, ಸಿ ಎಂ ಗಂಗಾಧರಯ್ಯ, ಸಿ ವಿ ಚಂದ್ರಶೇಖರಯ್ಯ, ಚಿದಾನಂದ ಬಾಬು, ಸಿ ಎ ಜಾವೆದ್ ಪಾಷಾ, ಸಿ ಎಲ್ ದೊಡ್ಡಯ್ಯ, ಸಿ ಎಚ್ ದೊರೆಮುದ್ದಯ್ಯ, ಬೀರಲಿಂಗಯ್ಯ ಸಿ ಎಂ, ಮಹಮ್ಮದ್ ಖಲಂದರ್, ಮಂಜುನಾಥ್, ಸಿ ಎಸ್ ರಮೇಶ್, ರಮೇಶ್ ಬಾಬು, ಸಿ ಬಿ ರೇಣುಕಸ್ವಾಮಿ, ಸಿ ಎಂ ರಂಗಸ್ವಾಮಯ್ಯ, ಸಿ ಜಿ ಸೋಮಶೇಖರ್, ಶ್ರೀನಿವಾಸಾಚಾರ್ಯ’ರವರುಗಳು ಅಂತಿಮ ಕಣದಲ್ಲಿ ಉಳಿದಿದ್ದರು. ಆದರೆ, ಭಾನುವಾರ ನಡೆದ ಚುನಾವಣೆಯಲ್ಲಿ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕಿಗೆ ಮೇಲೆ ಹೆಸರಿಸಿದ ನೂತನ ಆಡಳಿತ ಮಂಡಳಿ ಆಯ್ಕೆಯಾಗಿದೆ.


ಸುಮಾರು ಆರು ಸಾವಿರಕ್ಕೂ ಹೆಚ್ಚು ಷೇರುದಾರರನ್ನು ಹೊಂದಿರುವ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕು, ಯಾವುದೇ ವಹಿವಾಟು ಮತ್ತು ವಾರ್ಷಿಕ ಸಭೆಗಳಿಗೆ ಹಾಜರಾಗದ ಷೇರುದಾರರ ನಿರಾಸಕ್ತಿಯ ಕಾರಣ, ಈಗ ಕೇವಲ 583 ಮಂದಿ ಷೇರುದಾರರನ್ನಷ್ಟೇ ಹೊಂದಿದೆ. ಷೇರುದಾರರ ಸಂಖ್ಯೆ ನಿರಂತರ ಘಟಿಸಿದ್ದು ಕೋ-ಆಪರೇಟಿವ್ ಬ್ಯಾಂಕ್’ನ ಭವಿಷ್ಯದ ಚಿಂತೆಯನ್ನು ತಂದೊಡ್ಡಿದೆ. ನೂರು ವರ್ಷಗಳಿಗೂ ಮೀರಿದ ಇತಿಹಾಸವನ್ನು ಹೊಂದಿರುವ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಹಿಂದಿನಿಂದಲೂ ಸ್ಥಳೀಯ ಶಾಸಕರ ಹಿಡಿತದಲ್ಲೇ ಉಳಿದಿದೆ. ಹೀಗಾಗಿ, ಸ್ಥಳೀಯ ಶಾಸಕರ ರಾಜಕೀಯ ಗೆಲುವು ಮತ್ತು ಒಲವನ್ನು ಆಧರಿಸಿಯೇ ಬ್ಯಾಂಕಿನ ಏಳ್ಗೆ ಮತ್ತು ಅಭಿವೃದ್ಧಿಯ ಗತಿ ನಿರ್ಧಾರಗೊಳ್ಳುತ್ತಿದೆ.

1000801700 1

5,723’ರಷ್ಟು ಷೇರುಸದಸ್ಯತ್ವ ಹೊಂದಿದ್ದರೂ, ನಿಯಮಿತವಾಗಿ ಸಾಲ ವಸೂಲಿ ಮಾಡದ ಕಾರಣ, ಬ್ಯಾಂಕಿನ ನಿವ್ವಳ ಲಾಭ ಶೂನ್ಯವಾಗುತ್ತಾ ಬಂದಿತ್ತು. ಹೂಡಿಕೆ ಠೇವಣಾತಿಗಳು, ಆಪದ್ಧನ ಮತ್ತು ಇತರೇ ನಿಧಿಗಳು ದುಡಿಯುವ ಬಂಡವಾಳ‌ ಮತ್ತು ವಾರ್ಷಿಕ ವಹಿವಾಟಿನ ಮೌಲ್ಯ ಎಲ್ಲವೂ ನಿರಂತರ ಕುಸಿತ ಕಂಡ ಪರಿಣಾಮ ಬ್ಯಾಂಕಿಗೆ ತೀವ್ರ ಹಿನ್ನಡೆ ಉಂಟಾಗಿತ್ತು.


ಆಡಳಿತ ಮಂಡಳಿಗೆ ಈಚೀಚೆಗೆ ಅಧ್ಯಕ್ಷರಾಗಿ ಬಂದ ಸಿ ಎಸ್ ರಮೇಶ್, ಸಿ ಎಲ್ ದೊಡ್ಡಯ್ಯ, ಸಿ ಎಚ್ ದೊರೆಮುದ್ದಯ್ಯ, ರಮೇಶ್ ಬಾಬು, ಸಿ ಎಂ ರಂಗಸ್ವಾಮಯ್ಯ, ಸಿ ಬಿ ರೇಣುಕಸ್ವಾಮಿ, ಬೀರಲಿಂಗಯ್ಯ, ಸಿ ಎಚ್ ಲವಕುಮಾರ್ ಮೊದಲಾದವರ ಪರಿಶ್ರಮದಿಂದಾಗಿ ಸಿ’ಗ್ರೇಡ್ ನಲ್ಲಿದ್ದ ಕೋ-ಆಪರೇಟಿವ್ ಬ್ಯಾಂಕನ್ನು ಎ’ಗ್ರೇಡ್’ನವರೆಗೆ ತರುವಲ್ಲಿ ಸಫಲತೆ ಲಭಿಸಿತ್ತು.

ಕಳೆದ ಒಂದು ದಶಕದಿಂದ ಮತ್ತೆ ಪ್ರಗತಿ ಸಾಧಿಸಿದ ಬ್ಯಾಂಕು ::
ಶೇಕಡಾ 72ರಷ್ಟು ಎನ್ ಪಿ ಎ ಏರಿಕೆಯಿದ್ದ ಸಮಯದಲ್ಲಿ ಸತತ ಪರಿಶ್ರಮ ವಹಿಸಿ 2018-19’ರ ಹೊತ್ತಿಗೆ ಅದು, ಶೇಕಡ 26.97ಕ್ಕೆ ಕುಸಿಯುವಷ್ಟರ ಮಟ್ಟಿಗೆ ವಸೂಲಾತಿ ಮಾಡಿ ನಿಧಿ ಸಂಗ್ರಹಿಸಲಾಯಿತು. 2020-21’ರ ಹೊತ್ತಿಗೆ ಶೇಕಡಾ -2.46’ರಷ್ಟಕ್ಕೆ ಎನ್‌ ಪಿ ಎ ಇಳಿಯುವಂತೆ ಮಾಡಿ, 2023-24’ರ ಹೊತ್ತಿಗೆ -10.84’ರಷ್ಟು ಎನ್ ಪಿ ಎ ಇಳಿಯುವಂತೆ ಮಾಡುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಮೆಚ್ಚುಗೆಗೆ ಪಾತ್ರವಾಗಿದೆ.

1000801699 1

ಸಾಲ ಮರುಪಾವತಿ, ವಸೂಲಾತಿಯ ಆಕರ್ಷಕವಾದ ಹೊಸ ಹೊಸ ಯೋಜನೆಗಳ ಮೂಲಕ ಗಳಿಸಿದ ಸಾಧನೆ-ಸಂಪಾದನೆಯಲ್ಲಿ ತನ್ನ ಷೇರುದಾರರಿಗೆ ಶೇಕಡಾ 15’ರಷ್ಟು ಡಿವಿಡೆಂಟ್ ನೀಡುತ್ತಿರುವುದು ಬ್ಯಾಂಕಿನ ಹೆಮ್ಮೆಯಾಗಿದೆ. ಈ ಶೇಕಡಾ 15’ರ ಡಿವಿಡೆಂಟನ್ನು ಕಳೆದ ಮೂರು ವರ್ಷದಿಂದ ಷೇರುದಾರರಿಗೆ ನೀಡಲಾಗುತ್ತಿದೆ. ಈಗ ಎ’ಗ್ರೇಡ್ ತಲುಪಿರುವ ಕಲ್ಪವೃಕ್ಷ ಕೋಪರೇಟಿವ್ ಬ್ಯಾಂಕ್’ನ ಷೇರು ಬಂಡವಾಳ ಠೇವಣಾತಿಗಳು ಮತ್ತು ಹೂಡಿಕೆಗಳು ದುಡಿಯುವ ಬಂಡವಾಳದ ಮೌಲ್ಯವನ್ನು ಹೆಚ್ಚಿಸುವ ಮೂಲಕ, ಬ್ಯಾಂಕು ಎ-ಪ್ಲಸ್’ ಗ್ರೇಡ್ ಏರುವಂತೆ ಮಾಡುವ ಸಂಕಲ್ಪವನ್ನು ಈಗಿನ ಆಡಳಿತ ಮಂಡಳಿ ಹೊಂದಿದೆ. ಜೊತೆಗೆ, ಬ್ಯಾಂಕಿನ ಏಳ್ಗೆಯನ್ನು ಕಾಣುತ್ತಿರುವ ಷೇರುದಾರ ಮತದಾರರೂ ಹೂಡಿಕೆಗೆ ಈಗ ಉತ್ಸುಕರಾಗಿದ್ದಾರೆ. ತಾಲ್ಲೂಕಿನ ಇತರೆ ಭಾಗಗಳಲ್ಲಿ ಕೂಡ ಬ್ಯಾಂಕಿನ ಶಾಖೆಗಳನ್ನು ತೆರೆಯುವ ಮಹತ್ವಾಕಾಂಕ್ಷೆಯನ್ನು ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್’ನ ಆಡಳಿತ ಮಂಡಳಿ ಹೊಂದಿದೆ.

ವರದಿ- ಸಂಚಲನ
ಚಿಕ್ಕನಾಯಕನ ಸೀಮೆಯಿಂದ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X