ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮ ಮುತ್ತೋಡಿ ಅರಣ್ಯ ವ್ಯಾಪ್ತಿಯ ಸಣ್ಣಗ್ರಾಮದಲ್ಲಿ ಭಾರೀ ಮಳೆಯಾಗಿದ್ದರಿಂದ, ಸೇತುವೆ ಮುಳುಗಡೆಯಾಗಿದೆ. ಪರಿಣಾಮ, ಹೊರ ಜಗತ್ತಿಗೂ ಗ್ರಾಮಕ್ಕೂ ಸಂಪರ್ಕ ಇಲ್ಲದಂತಾಗಿದೆ.
ಮುತ್ತೋಡಿ ಗ್ರಾಮದ ಜನರು ಹಳ್ಳ ದಾಟಲು ಪರದಾಡುತ್ತಿದ್ದಾರೆ. ಕಿರು ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದೆ. ಪರಿಣಾಮ, ವೃದ್ಧೆಯು ಸೇತುವೆ ದಾಟಲು ಸಾಧ್ಯವಾಗದೆ, ಗ್ರಾಮಸ್ಥರು ಆಕೆಯನ್ನು ಹೊತ್ತುಕೊಂಡು ಸೇತುವೆ ದಾಟಿಸಿದ್ದಾರೆ.
ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ಭಾರೀ ಪ್ರಮಾಣದ ನೀರು ತುಂಬಿ ಮಲಗಾರು ಗ್ರಾಮದ ಕಿರು ಸೇತುವೆ ಮುಳುಗಿದೆ. ಮಲ್ಲಂದೂರು ಸಮೀಪದ ಮಲಗಾರು ಗ್ರಾಮದಲ್ಲಿ ಘಟನೆ ನಡೆದಿದೆ.