ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬಾಬಾ ಬುಡನ್‌ಗಿರಿ ದರ್ಗಾವನ್ನು ದತ್ತಪೀಠವೆಂದು ಕರೆಯಬೇಕಂದು ಹಿಂದುತ್ವವಾದಿ ಕೋಮು ಸಂಘಟನೆಗಳು ವಿವಾದಿತ ಸ್ಥಳವನ್ನಾಗಿಸಿವೆ. ದತ್ತಮಾಲೆ ಹಾಕುವ ಮೂಲಕ ಪ್ರತಿವರ್ಷ ಕೋಮು ಉದ್ವಿಗ್ನತೆಯನ್ನು ಸೃಷ್ಠಿಸುತ್ತಿವೆ. ಇದೀಗ, ಬಾಬಾಬುಡನ್‌ಗಿರಿಯಲ್ಲಿ ಹುಣ್ಣಿಮೆ ಪೂಜೆ ನಡೆಸಲು ಬಿಜೆಪಿ ಮುಂದಾಗಿದೆ.
ಬಾಬಾ ಬುಡನ್‌ಗಿರಿಯಲ್ಲಿ ವಿವಾದ ಆರಂಭವಾದ ಬಳಿಕ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಪ್ರತಿ ಹುಣ್ಣಿಮೆ ದಿನ ದತ್ತಪೀಠದ ಹೆಸರಿನಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಇದೀಗ, ಬಿಜೆಪಿ ಕೂಡ ಸೋಮವಾರ (ನ.27) ಹೆಣ್ಣಿಮೆ ಪೂಜೆ ಸಲ್ಲಿಸಲು ಮುಂದಾಗಿದೆ.
ಬಾಬಾ ಬುಡನ್‌ಗಿರಿಯನ್ನು ಹಿಂದುಗಳ ಪೂಜಾ ಸ್ಥಳವಾಗಿ ದತ್ತಪೀಠ ಮಾಡತ್ತೇವೆಂದು ಕೆಲವು ವರ್ಷಗಳಿಂದ ಹಿಂದುತ್ವವಾದಿ ಕೋಮು ಸಂಘಟನೆಗಳು ಹೋರಾಟ ಮಾಡುತ್ತಿವೆ. ಡಿಸೆಂಬರ್ 17ರಂದು ದತ್ತ ಜಯಂತಿ ಕಾರ್ಯಕ್ರಮ ಆಚರಿಸುತ್ತಿದ್ದು, ಆ ಸಂದರ್ಭದಲ್ಲಿ ದತ್ತ ಮಾಲೆ ಧರಿಸಿ, ಬಾಬಾಬುಡನ್‌ಗಿರಿಯಲ್ಲಿ ದತ್ತಪೀಠದ ಹೆಸರಿನಲ್ಲಿ ಹೋಮ-ಹವನ ಮಾಡುತ್ತವೆ.