ಕಾಫಿ ತೋಟದ ಮನೆಯ ಮುಂದೆ ಆಟವಾಡುತ್ತಿದ್ದ 7 ವರ್ಷದ ಬಾಲಕನ ಮೇಲೆ ಸಾಕು ನಾಯಿಗಳು ಗುಂಪಾಗಿ ದಾಳಿ ನಡೆಸಿದ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೆಳಗೂರು ಗ್ರಾಮದಲ್ಲಿ ನಡೆದಿದೆ.
ನಾಯಿಗಳ ದಾಳಿಯಿಂದಾಗಿ ಆಟವಾಡುತ್ತಿದ್ದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ನಾಯಿಗಳು ಬಾಲಕನ ತಲೆ, ಕುತ್ತಿಗೆ ಹಾಗೂ ಭುಜದ ಭಾಗಕ್ಕೆ ಮನಬಂದಂತೆ ಕಚ್ಚಿವೆ. ಬಾಲಕನ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ಬರುವಷ್ಟರಲ್ಲಿ ನಾಯಿಗಳು ಮಗುವನ್ನು ರಕ್ತಸಿಕ್ತಗೊಳಿಸಿದ್ದವು. ಮಗುವಿನ ಸ್ಥಿತಿ ನೋಡಲಾಗದಷ್ಟು ಭೀಕರವಾಗಿದ್ದು, ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿದ್ದೀರಾ ಚಿಕ್ಕಮಗಳೂರು | ಕಾಡುಕೋಣ ದಾಳಿ: ಯುವಕ ಸಾವು
ಘಟನೆಗೆ ಸಂಬಂಧಿಸಿದಂತೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





