ಮಲೆನಾಡಿನ ಭಾಗದಲ್ಲಿ ಪ್ರಾಣಿಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗೆಯೇ, ಕಾಡುಕೋಣ ದಾಳಿಯಿಂದ ಯುವಕ ಮೃತ ಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮೈದಾಡಿಯ ಯಮಗೊಂಡ ಎಸ್ಟೇಟ್ ಬಳಿ ನಡೆದಿದೆ.
ಕಾಡು ಕೋಣ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಚೇತನ್ (30) ಮೃತ ದುರ್ದೈವಿ. ಕಳಸ ತಾಲೂಕಿನ ಮೈದಾಡಿಯ ಯಮಗೊಂಡ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ಆಕಸ್ಮಿಕವಾಗಿ ದಾಳಿ ಮಾಡಿದ್ದು, ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ನಕಲಿ ಐಎಎಸ್ ಅಧಿಕಾರಿ: ₹41 ಲಕ್ಷ ವಂಚನೆ; ಆರೋಪಿ ಬಂಧನ
ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಕಾಡುಕೋಣ ದಾಳಿ ಟ್ಟಿದೆ. ಕಾಡುಕೋಣ ದಾಳಿ ಪ್ರಕರಣಗಳು ಹೆಚ್ಚುತಿದ್ದು, ಕಾಡುಕೋಣ ದಾಳಿಯನ್ನು ಶಾಶ್ವತವಾಗಿ ತಡೆಯುವಂತೆ ಪರಿಹಾರ ನೀಡಬೇಕೆಂದು ಮಲೆನಾಡಿಗರು ಅಗ್ರಹಿಸಿದ್ದಾರೆ.





