ಬೆಂಗಳೂರು ರಸ್ತೆಯ ಯಂಗ್ ಸ್ಕೈ ರೆಸಾರ್ಟ್ ಬಳಿ ಯೂ ಟರ್ನ್ ಹೊಡೆಯುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಹಲವರು ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟಮಾಚನಹಳ್ಳಿ ಗೇಟ್ ಸಮೀಪ ನಡೆದಿದೆ.
ಬೆಂಗಳೂರು ಕಡೆಯಿಂದ ಮದನಪಲ್ಲಿ ಕಡೆ ಹೋಗಲು ಚಿನ್ನಸಂದ್ರ ರಸ್ತೆ ಮೂಲಕ ಚಿಂತಾಮಣಿ ನಗರಕ್ಕೆ ಬಂದು ಹೋಗಲು ಬಂದ ಸ್ವಿಫ್ಟ್ ಕಾರು, ಕಟಮಾಚನಹಳ್ಳಿ ಗೇಟ್ ಸಮೀಪದ ಯಂಗ್ ಸ್ಕೈ ರೆಸಾರ್ಟ್ ಮುಂಭಾಗ ಯೂಟರ್ನ್ ಹೊಡೆಯುತ್ತಿತ್ತು. ಈ ವೇಳೆ ಚಿಂತಾಮಣಿ ಕಡೆಯಿಂದ ಹೋಗುತ್ತಿದ್ದ ಮಹೇಂದ್ರ ಕಂಪನಿಯ ಥಾರ್ ಕಾರು ಡಿಕ್ಕಿ ಹೊಡೆದು ರಸ್ತೆಯ ಪಕ್ಕದಲ್ಲಿದ್ದ ಹಳ್ಳಕ್ಕೆ ಉರುಳಿದೆ.
ಇದನ್ನು ಓದಿದ್ದೀರಾ? ಬಾಗೇಪಲ್ಲಿ | ಬೇಡಿಕೆ ಈಡೇರಿಸಲು ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ದಿಷ್ಟಾವಧಿ ಧರಣಿ
ಅದೃಷ್ಟವಶಾತ್ ಎರಡು ಕಾರಿನಲ್ಲಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ವಿಷಯ ತಿಳಿದ ತಕ್ಷಣ 112 ತುರ್ತು ವಾಹನದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

