ಚಿಂತಾಮಣಿ | ಸೆ.13ರಂದು ಲೋಕ ಅದಾಲತ್: ಸದುಪಯೋಗ ಪಡೆದುಕೊಳ್ಳಲು ನ್ಯಾಯಾಧೀಶರ ಮನವಿ

Date:

Advertisements

ಕಕ್ಷಿದಾರರು ಸಣ್ಣಪುಟ್ಟ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಲೋಕ ಅದಾಲತ್‌ ಕಾರ್ಯಕ್ರಮವು ವರದಾನವಾಗಿವೆ ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ಅಭಿಪ್ರಾಯಪಟ್ಟರು.

ಚಿಂತಾಮಣಿ ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 13 ರಂದು ನಡೆಯಲಿರುವ ಲೋಕ ಅದಾಲತ್‌ಗೆ ಸಿದ್ದತೆ ಕೈಗೊಳ್ಳುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಂಡರೆ ಸೌಹಾರ್ದಯುತ ವಾತಾವರಣ ಏರ್ಪಡುತ್ತದೆ. ನ್ಯಾಯಾಲಯಗಳಲ್ಲಿ ಮುಂದುವರೆಸಿಕೊಂಡು ಹೋಗುವುದರಿಂದ ದ್ವೇಷ, ವೈಷಮ್ಯ ಹೆಚ್ಚಾಗುತ್ತದೆ. ಮೊಕದ್ದಮೆಗಳಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಂಡರೆ ಇಬ್ಬರೂ ಗೆದ್ದಂತೆ. ವಿಶೇಷ ಆಂದೋಲನದ ಮೂಲಕ ಎರಡು ತಿಂಗಳ ಕಾಲ ಎಲ್ಲ ಬಗೆಯ ವ್ಯಾಜ್ಯಗಳನ್ನು ರಾಜಿ ಸಂಧಾನದ ಇತ್ಯರ್ಥ ಪಡಿಸಿಕೊಳ್ಳಲು ಕಾಲಾವಧಿ ನೀಡಿರುವುದು ಸುವರ್ಣಾವಕಾಶವಾಗಿದೆ. ಸಾರ್ವಜನಿಕರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisements

ಲೋಕ ಅದಾಲತ್‌ಗಳಲ್ಲಿ ಯಾವುದೇ ರೀತಿಯ ಒತ್ತಾಯವಿರುವುದಿಲ್ಲ. ಎರಡೂ ಕಡೆಯವರಿಗೆ ಹಿರಿಯ ವಕೀಲರು ಮಾರ್ಗದರ್ಶನ ಮಾಡುತ್ತಾರೆ. ಸಿವಿಲ್ ವ್ಯಾಜ್ಯಗಳು, ಕುಟುಂಬಗಳ ಆಸ್ತಿ, ಜಮೀನುಗಳ ಪಾಲುದಾರಿಕೆ ವಿವಾದಗಳು, ಸಾಲದ ಪ್ರಕರಣಗಳು ಮತ್ತಿತರ ಪ್ರಕರಣಗಳನ್ನು ಸಂಧಾನದಿಂದ ಬಗೆಹರಿಸಿಕೊಂಡರೆ ಇಬ್ಬರಿಗೂ ಸಹಾಯವಾಗುತ್ತದೆ. ನ್ಯಾಯಾಲಯಗಳಿಗೆ ಅಲೆದಾಡುವ ಸಮಯ, ಹಣಕಾಸಿನ ಖರ್ಚು ಉಳಿತಾಯವಾಗುತ್ತವೆ ಎಂದು ತಿಳಿಸಿದರು.

ಸಣ್ಣ-ಪುಟ್ಟ ಪ್ರಕರಣಗಳನ್ನು ಅದಾಲತ್‌ಗಳಲ್ಲಿ ಇತ್ಯರ್ಥ ಪಡಿಸಿಕೊಳ್ಳುವುದರಿಂದ ನ್ಯಾಯಾಲಯಗಳ ಮೇಲಿನ ಹೊರೆಯೂ ತಗ್ಗುತ್ತದೆ. ಇತರೆ ಪ್ರಕರಣಗಳ ಶೀಘ್ರ ನ್ಯಾಯದಾನಕ್ಕೆ ಅವಕಾಶವಾಗುತ್ತದೆ. ನ್ಯಾಯಾಲಯಗಳಲ್ಲಿ ತೀರ್ಪು ಬರುವುದು ತುಂಬಾ ತಡವಾಗುತ್ತದೆ ಎಂಬುದು ಸಾರ್ವತ್ರಿಕ ದೂರಾಗಿದೆ. ನ್ಯಾಯಾಲಯಗಳ ಮೇಲಿನ ಅಧಿಕ ಹೊರೆ, ಒತ್ತಡ ಇದಕ್ಕೆ ಕಾರಣವಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಗೀತಾಂಜಲಿ ಮಾತನಾಡಿ, “ಕಳೆದ ಲೋಕ ಅದಾಲತ್‌ನಲ್ಲಿ ದಾಂಪತ್ಯ ವಿರಸದಿಂದ ದೂರವಾಗಿದ್ದ ಎರಡು ಜೋಡಿಗಳು ಒಂದಾದರು. ಹಿರಿಯ ನಾಗರಿಕರೊಬ್ಬರ ಕುಟುಂಬ ಸಮಸ್ಯೆ ಇತ್ಯರ್ಥವಾಯಿತು. ಮಧ್ಯಸ್ಥಿಕೆದಾರರ ಸಂಧಾನದ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚಿನ ಖರ್ಚಿಲ್ಲದೆ  ಪರಿಹಾರ ದೊರೆಯುತ್ತದೆ. ಲೋಕ ಅದಾಲತ್‌ಗಳಲ್ಲಿ ಇತ್ಯರ್ಥವಾದ ಪ್ರಕರಣಗಳು ಸಹ ನ್ಯಾಯಾಲಯದ ತೀರ್ಪುಗಳಷ್ಟೇ ಪರಿಣಾಮಕಾರಿಯಾಗಿರುತ್ತವೆ” ಎಂದರು.

ನ್ಯಾಯಾಲಯಗಳಲ್ಲಿ ಇತ್ಯರ್ಥವಾದ ಪ್ರಕರಣಗಳು ಅಲ್ಲಿಗೆ ಮುಕ್ತಾಯವಾಗುವುದಿಲ್ಲ. ತೀರ್ಪಿನ  ವಿರುದ್ಧ ಉನ್ನತ ನ್ಯಾಯಾಲಯಗಳಿಗೆ ಅಪೀಲು ಹೋಗಬಹುದು. ವರ್ಷಗಟ್ಟಲೇ ಅಲೆದಾಡಬೇಕಾಗುತ್ತದೆ. ಲೋಕ ಅದಾಲತ್‌ಗಳಲ್ಲಿ ಇತ್ಯರ್ಥವಾದ ಪ್ರಕರಣಗಳು ಮುಕ್ತಾಯವಾಗುತ್ತವೆ. ಅಪೀಲು ಹೋಗಲು ಅವಕಾಶವಿರುವುದಿಲ್ಲ. ಹೀಗಾಗಿ ಒಮ್ಮೆಲೇ ಪ್ರಕರಣದ ಮುಕ್ತಾಯವಾಗುತ್ತದೆ. ಜನರು ಅದಾಲತ್‌ಗಳ ಬಗ್ಗೆ ತಾತ್ಸಾರ, ಉದಾಸೀನತೆ ತೋರದೆ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದನ್ನು ಓದಿದ್ದೀರಾ? ವಿಜಯಪುರ | ಕುರಿಗಾಹಿಗಳ ರಕ್ಷಣೆಗೆ ಆಗ್ರಹ: ಆ.19ರಂದು ‘ಕುರಿಗಾರರ ನಡಿಗೆ ವಿಧಾನಸೌಧದ ಕಡೆಗೆ’ ಹೋರಾಟ

ಪ್ರಧಾನ ಸಿವಿಲ್ ನ್ಯಾಯಾಧೀಶೆ ಆರ್ ಶಕುಂತಲಾ, ಅಧಿಕ ಸಿವಿಲ್ ನ್ಯಾಯಾಧೀಶೆ ಹರ್ಷಿತ, ತಹಶೀಲ್ದಾರ್ ಸುದರ್ಶನ ಯಾದವ್, ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಶಿವಾನಂದ, ಕಾರ್ಯದರ್ಶಿ ಆರ್ ಎಸ್.ಶ್ರೀನಾಥ್ , ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದ್ , ಡಿವೈಎಸ್ಪಿ ಮುರಳಿಧರ್, ನಗರಸಭೆ ಪೌರಾಯುಕ್ತ ಜಿ ಎನ್ ಚಲಪತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

Download Eedina App Android / iOS

X