ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಆರ್ ಬಡಾವಣೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿ ಮಾಡಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಒಬ್ಬನನ್ನು ವಶಕ್ಕೆ ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜಾ ಇಮಾಮ್ ಖಾಸಿಂ ರವರ ಮಾರ್ಗದರ್ಶನದಲ್ಲಿ ಚಿಂತಾಮಣಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮುರಳೀಧರ ನೇತೃತ್ವದ ತಂಡ ಚಿಂತಾಮಣಿ ನಗರ ಭಾಗದ ಎನ್ ಆರ್ ಬಡಾವಣೆಯ ಮನೆಯ ಮೇಲೆ ದಾಳಿ ಮಾಡಿದೆ.
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿನೋದ್ ಕುಮಾರ್ (32) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ವೇಶ್ಯಾವಾಟಿಕೆ ದಂಧೆಯಲ್ಲಿ ಗಳಿಸಿದ್ದ 1100 ರೂ ನಗದು ಹಣ, ದ್ವಿಚಕ್ರ ವಾಹನ ಒಂದು ವಶಕ್ಕೆ ಪಡೆದಿದ್ದಾರೆ. ಮನೆಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಬಂಡೆಕಲ್ಲು ಉರುಳಿಬಿದ್ದ ಘಟನೆ: ಮೃತರ ಸಂಖ್ಯೆ ಮೂರಕ್ಕೆ
ಈ ದಾಳಿಯಲ್ಲಿ ಚಿಂತಾಮಣಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮುರಳೀಧರ, ಚಿಂತಾಮಣಿ ನಗರ ಠಾಣೆಯ ಪಿ.ಎಸ್.ಐ.ನಾರಾಯಣಸ್ವಾಮಿ, ಸಿಬ್ಬಂದಿಗಳಾದ ಅಂಜನಾರೆಡ್ಡಿ, ಗಂಗರಾಜು, ಸುನೀತಾ ಪಾಲ್ಗೊಂಡಿದ್ದರು.
