ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇರೆಗೆ ಬಂಧನವಾಗಿದ್ದ ಚಿತ್ರದುರ್ಗದ ಮುರುಘಾಮಠದ ಮಾಜಿ ಪೀಠಾಧಿಪತಿ ಶಿವಮೂರ್ತಿ ಮುರುಘಾ ಸ್ವಾಮೀಜಿ, ಏಪ್ರಿಲ್ 29ರಂದು ಚಿತ್ರದುರ್ಗದ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಮುರುಘಾ ಶರಣರ ಮೇಲೆ ದಾಖಲಾಗಿದ್ದ ಅಪ್ರಾಪ್ತೆಯರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ
ಹೈ ಕೋರ್ಟ್ ಪೋಕ್ಸೊ ಕಾಯ್ದೆಯಡಿ ಒಂದೂವರೆ ವರ್ಷಗಳ ಬಳಿಕ ಅವರಿಗೆ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಮಾಜಿ ಶಾಸಕ ಏಕಾಂತಯ್ಯ ಸಾಕ್ಷ್ಯ ನಾಶದ ಆತಂಕವಿರುವ ಕಾರಣ ಜಾಮೀನು ರದ್ದು ಮಾಡಲು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಾಮೀನನ್ನು ರದ್ದು ಮಾಡಿ ಮುರುಘಾ ಶರಣರು ನ್ಯಾಯಾಲಕ್ಕೆ ಶರಣಾಗುವಂತೆ ಆದೇಶಿಸಿ, ಏಳು ದಿನಗಳ ಕಾಲಾವಕಾಶ ನೀಡಿತ್ತು. ಆದರಂತೆ ಸೋಮವಾರದಂದು ಮುರುಘಾ ಶರಣರು ದಾವಣಗೆರೆಯ ವಿರಕ್ತ ಮಠದಿಂದ ನೇರವಾಗಿ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪೆನ್‌ಡ್ರೈವ್ ಪ್ರಕರಣ| ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
“ನ್ಯಾಯಾಧೀಶರ ವಿಚಾರಣೆ ನಂತರ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನೆಡೆಸಿ ಪುನಃ ಅವರನ್ನು ಜಿಲ್ಲಾ ಕಾರಾಗೃಹಕ್ಕೆ ಬಿಡಲಾಗುವುದು” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
