ಚಿತ್ರದುರ್ಗ | ಶಾಸಕ ಚಂದ್ರಪ್ಪಗೆ ಏಕವಚನದಲ್ಲಿ ಮಾಜಿ ಶಾಸಕ ತಿಪ್ಪಾರೆಡ್ಡಿ ತರಾಟೆ

Date:

Advertisements

ನಾನು ಶಾಸಕನಾದಾಗ ಅವನು ಚಳ್ಳಕೆರೆಯಲ್ಲಿ ನಿಕ್ಕರ್ ಹಾಕಿಕೊಳ್ಳುತ್ತಿದ್ದ ನಾನು ಅವನಿಗಿಂತ ವಯಸ್ಸಿನಲ್ಲಿ ಹಿರಿಯ, ನಾನು ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಇಡೀ ಜಿಲ್ಲೆಯ ಪ್ರತೀ ಪ್ರದೇಶದ ಚಿತ್ರಣ ನನಗೆ ಗೊತ್ತಿದೆ ವರಿಷ್ಠರು ಮಾಹಿತಿ ಕೇಳಿದಾಗ ನನ್ನ ಅಭಿಪ್ರಾಯ ಹೇಳಿದ್ದೇನೆ ಇವನಿಗೆ ಹೆದರಿ ಸುಮ್ಮನಿರಲು ಆಗಲ್ಲ ಎಂದು ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಚಿತ್ರದುರ್ಗ ನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್‌ವೈಗಿಂತ ದೊಡ್ಡ ವ್ಯಕ್ತಿ ನಿನ್ನೆ ಬೆಂಬಲಿಗರ ಸಭೆ ನಡೆಸಿದ್ದಾರೆ. ಬಿಎಸ್‌ವೈ ಹಾಗೂ ನನ್ನ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ. ಇನ್ನು ಮುಂದೆ ನಾನು ಅವನ ಬಗ್ಗೆ ಏಕವಚನದಲ್ಲಿ ಮಾತಾಡುತ್ತೇನೆ, ಎಂದು ಮಾತನ್ನು ಅವರು ಮಾತು ಆರಂಭಿಸಿದರು.

ಬಿ.ವೈ.  ವಿಜಯೇಂದ್ರ ಭೇಟಿಯಾಗಿ ಸುಮಾರು ದಿನಗಳೇ ಆಗಿವೆ. ಈ ಹಿಂದೆ ವಿಜಯೇಂದ್ರ ಭೇಟಿಯಾದಾಗ ಈ ಮಹಾ ನಾಯಕನು ಇದ್ದನು. ಅವನ ಮಗನಿಗೆ ಟಿಕೆಟ್ ತಪ್ಪಿಸಲು ಅವನೇನು ದೊಡ್ಡ ಲೀಡರ್ ಅಲ್ಲ. ಕೋಲಾರದಲ್ಲಿ ಜೆಡಿಎಸ್ ಜತೆ ನಮ್ಮ ಪಕ್ಷದ ಹೊಂದಾಣಿಕೆ ಆಗಿದೆ. ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ವರಿಷ್ಠರು ಗೋವಿಂದ ಕಾರಜೋಳಗೆ ಟಿಕೆಟ್ ನೀಡಿದ್ದಾರೆ. ಈ ನಾಯಕನಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆಂದೇನು ಇರಲಿಲ್ಲ. ಈ ಹಿಂದೆ ಎ.ನಾರಾಯಣಸ್ವಾಮಿಗೆ ಟಿಕೆಟ್ ಕೊಡಿಸಿದ್ದೇ ನಾನು. ಬಿಜೆಪಿಯಲ್ಲಿ ಈ ಹಿಂದೆಯೇ ರಘುಚಂದನ್‌ಗೆ ಟಿಕೆಟ್ ಭರವಸೆ ನೀಡಿದ್ದರು ಎಂದು ಹೇಳಿದ್ದಾನೆ. ಕೋರ್ ಕಮಿಟಿ ಸಭೆ ನಡೆದಾಗ ನಾನು ಸಹ ಅಲ್ಲಿದ್ದೆ. ಕ್ಷೇತ್ರದಲ್ಲಿ ಮತಗಳ ಕಾಂಬಿನೇಷನ್ ಬಗ್ಗೆ ನಾನು ಹೇಳಿದ್ದೇನೆ ಎಂದರು.

Advertisements

ಚಿತ್ರದುರ್ಗದಲ್ಲಿ ಜನತಾ ಬಜಾರ್ ಎಂದು ಇತ್ತು. ಅಲ್ಲಿ ಕೈಕಾಲು ಹಿಡಿದು ಸಕ್ಕರೆ, ಸೀಮೆ ಎಣ್ಣೆ ತೂಗಲು ಸೇರಿಕೊಂಡಿದ್ದ, ಎರಡ್ಮೂರು ನ್ಯಾಯ ಬೆಲೆ ಅಂಗಡಿ ಮಾಡಿಕೊಂಡಿದ್ದ, ಸೀಮೆ ಎಣ್ಣೆ ಹಂಚುತ್ತಿದ್ದೇನೆಂದು ಜನರ ಬಳಿ ಹೇಳುತ್ತಿದ್ದನು. 1979ರಲ್ಲಿ ಪುರಸಭೆಗೆ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದನು, 2023ರ ಚುನಾವಣೆಯಲ್ಲಿ ಚಿತ್ರದುರ್ಗದಲ್ಲಿ ಕೈ ಅಭ್ಯರ್ಥಿ ಪರ ಕೆಲಸ ಯಾರೋ ದೊಡ್ಡ ವ್ಯಕ್ತಿಗೆ ಐವತ್ತು ಲಕ್ಷ ಕೊಡಿಸಲು ಪ್ರಯತ್ನಿಸಿದ್ದನು. ಹಿಂದೆ ಕೆಟ್ಟದಾಗಿ ಬೈಯುವುದು ಮುಂದೆ ಕೈಕಾಲು ಮುಗಿಯುವ ಕೆಲಸ ದೊಡ್ಡ ಉಳ್ಳಾರ್ತಿಯವನಿಗೆದೆ. ಯಾರೂ ಮಾತಾಡಿಸಲ್ಲ ಅವನು ಸತ್ತರೆ 20ಸಾವಿರ ಜನ, ನಾನು ಸತ್ತರೆ 4ಜನ ಸೇರಲ್ಲ ಅಂದಿದ್ದಾನೆ. ಅದನ್ನು ಹೇಗೆ ನಾವು ಟ್ರೈಲರ್ ನೋಡುವುದು ಈಗ ಎಂದು ವ್ಯಂಗ್ಯವಾಡಿದರು. ಅನೇಕರ ಬಳಿ ಕಾಲೇಜು ಸರ್ಟಿಫಿಕೇಟ್ ವಿಚಾರಕ್ಕೆ ಹಣ ಕೇಳಿದ್ದಾನೆ ಅಂಥವರು ಇವನು ಸತ್ತಾಗ ಬೈಯಲು ಬರಬಹುದು ಎಂದು ವ್ಯಂಗ್ಯವಾಡಿದರು.

ಬಿಎಸ್‌ವೈ, ಬಿ.ಎಲ್. ಸಂತೋಷ ಭರವಸೆ ನೀಡಿದ್ದರು ಎಂದಿದ್ದಾನೆ. ಆದರೆ, ನನ್ನ ಪುತ್ರನಿಗೆ ಟಿಕೆಟ್ ಕೊಟ್ಟರೆ ಕೊಡಲಿ, ಇಲ್ಲ ಬಿಡಲಿ ಎಂದಿದ್ದನು ಈ ಬಗ್ಗೆ ಅವನು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಲಿ. ಬಿಎಸ್ ವೈಗಾಗಿ ಶಾಸಕ ಸ್ಥಾನ ತ್ಯಾಗ ಮಾಡಿದ್ದೆ ಎಂದಿದ್ದಾನೆ. ಬಿಎಸ್‌ವೈ ಅವರು ಚಂದ್ರಪ್ಪಗೆ ಕೆಎಸ್‌ಆರ್‌ಟಿಸಿ ಛೇರ್ಮನ್ ಕೊಟ್ಟಿದ್ದರು, ಅವಕಾಶ ಇಲ್ಲದಿದ್ದರೂ ಸೈರನ್ ಹಾಕಿಕೊಂಡು ಓಡಾಡಿದ್ದ, ಬಿಎಸ್‌ವೈ ಆಶೀರ್ವಾದದಿಂದ ಚೇರ್ಮನ್ ಆಗಿದ್ದು ಮರೆತಿದ್ದಾನೆ ಎಂದರು.

ನಂತರ ತಿಪ್ಪಾರೆಡ್ಡಿಯವರು, ನಿನ್ನೆ ಅವನು ಕರೆದ ಸಭೆಯಲ್ಲಿ ಕೆಲ ಬಿಜೆಪಿ ಬೆಂಬಲಿಗರು ಇದ್ದರು ಅಂತೆಯೇ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದವರು ಸಭೆಯಲ್ಲಿದ್ದರು. 1994ರಲ್ಲಿ ಪಕ್ಷೇತರ ಶಾಸಕನಾಗಿ ಗೆದ್ದು ಗೃಹಮಂಡಳಿ ಅಧ್ಯಕ್ಷ ಆಗಿದ್ದೆ. ಎರಡನೇ ಸಲವು ಪಕ್ಷೇತರ ಶಾಸಕನಾಗಿ ಗೆದ್ದಿದ್ದೆ, ನಾನು ತಿಪ್ಪಾರೆಡ್ಡಿಗೆ ಎಂಎಲ್ಸಿ ಮಾಡಿದ್ದೆನೆಂದು ಹೇಳುತ್ತಾನೆ ಅಧಿಕ ಲೀಡ್ ನಲ್ಲಿ ನಾನು 2009ರಲ್ಲಿ ಎಂಎಲ್ ಎ ಆಗಿದ್ದೇನೆ. ಅವನು ಯಾವತ್ತು ಪಕ್ಷದ ಪರ ಚುನಾವಣೆ ಮಾಡಿಲ್ಲ ಜಿಲ್ಲೆಯಲ್ಲಿ ಎಲ್ಲರೂ ಸೋತು ನಾನು ಗೆದ್ದರೆ ಮಂತ್ರಿ ಆಗುತ್ತೇನೆ ಎಂಬ ಭಾವನೆ ಅವನಲ್ಲಿದೆ ಎಂದಿದ್ದಾರೆ.

ಹೊಳಲ್ಕೆರೆ ಬಿಜೆಪಿ ಪ್ರಭಾವವಿರುವ ಕ್ಷೇತ್ರ ಅಲ್ಲಿ ಯಾರು ಸ್ಪರ್ಧಿಸಿದರೂ ಬಿಜೆಪಿ ಗೆಲ್ಲುತ್ತದೆ.  ಮಾಜಿ ಮುಖ್ಯಮಂತ್ರಿ ಜೆ ಹೆಚ್ ಪಟೇಲರು ಒಮ್ಮೆ ನನಗೆ ಹೇಳಿದ್ದರು,  ಬೆಳಗ್ಗೆ ನನ್ನ ಬಳಿ ಬಂದು ನನಗೆ ತುಂಬಾ ಹೊಗಳುತ್ತಾನೆ. ಸಂಜೆ ದೇವೇಗೌಡರ ಬಳಿ ಹೋಗಿ ನನ್ನನ್ನೇ ಬೈಯುತ್ತಾನೆ ಎಂದಿದ್ದರು. ಪುತ್ರನಿಗೆ ಲೋಕಸಭೆ ಟಿಕೆಟ್ ಗಾಗಿ ನನ್ನ ಜತೆ ರಾಜಿಗೆ ಪ್ರಯತ್ನಿಸಿದ್ದನು. ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್ ಗೆ ಕಳಿಸಿದ್ದ, ಜೋಗಿಮಟ್ಟಿಯಲ್ಲಿ ಪಾರ್ಟಿಗೆ ಸೇರೋಣ ಎಂದು ಹೇಳಿ ಕಳಿಸಿದ್ದ. ನಾನು ಭೇಟಿಗೆ ನಿರಾಕರಿಸಿ ವಾಪಸ್ ಕಳಿಸಿದ್ದೆ, ಅವನು ನನಗೆ ಎಂಎಲ್ ಎ, ಎಂಎಲ್ಸಿ ಮಾಡುವುದಾದರೆ ನನಗೆ ಎಂಎಲ್‌ಎಗಿರಿನೇ ಬೇಡ.  ಬಿಜೆಪಿ ಕಚೇರಿ ಮೊಟ್ಟೆ, ಕಲ್ಲು ಹೊಡೆದರೆ ಮುಗಿಯಲ್ಲ ನಾನು ಅವನಿಗಿಂತ ಎರಡು ಸಲ ಹೆಚ್ಚು ಗೆದ್ದಿದ್ದೇನೆ ಎರಡು ಸಲ ಪಕ್ಷೇತರವಾಗಿ ಗೆದ್ದು ಶಾಸಕನಾಗಿದ್ದೇನೆ.  ಚಿತ್ರದುರ್ಗದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ವಿಚಾರಗಳ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ. ಅವನು ನನ್ನ ಮಗನ ಟಿಕೆಟ್ ತಪ್ಪಿಸಿದವರ ಮಕ್ಕಳಿಗೂ ತೊಂದರೆ ಅಂದು ಶಾಪ ಹಾಕುತ್ತಿದ್ದಾನೆ. ಅವನು ಹೇಳಿದಂತೆ ಆಗುತ್ತದಾ ಎಂದು ವ್ಯಂಗ್ಯವಾಡಿದರು.  ರಾಜಕೀಯವಾಗಿ ಪಕ್ಷ ಸೋತರೂ ಪರವಾಗಿಲ್ಲ, ವರಿಷ್ಠರು ಗಮನಿಸುತ್ತಾರೆ ಪಕ್ಷ ವಿರೋಧಿಗಳ ಬಗ್ಗೆ ಪಕ್ಷದ ವರಿಷ್ಠರು ಗಮನಹರಿಸುತ್ತಾರೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ಗೋಷ್ಠಿಯಲ್ಲಿ ಕೋರೆವೆಟ್ಟಿ ದ್ಯಾಮಣ್ಣ, ಮಾಳಪ್ಪನ ಹಟ್ಟಿ ಈಶ್ವರಪ್ಪ, ಕವನ, ಅರುಣ್, ಮೈಲಾರಪ್ಪ, ಲೋಕೇಶ್, ಸುರೇಶ್‌, ರಾಮಣ್ಣ, ರವಿ ಸೇರಿದರೆ ಇತರರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X