ಚಿತ್ರದುರ್ಗ | ದಲಿತರನ್ನು ಒಳಗೊಳ್ಳದ ಭಾರತ ಸಮೃದ್ಧವಾಗಲು ಸಾಧ್ಯವಿಲ್ಲ: ಎಚ್ ಸಿ ಮಹದೇವಪ್ಪ

Date:

Advertisements

ದಲಿತರು, ಅಸ್ಪೃಶ್ಯರನ್ನು ಒಳಗೊಳ್ಳದ ಹೊರತು ಭಾರತ ಸಮೃದ್ಧವಾಗಲು ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅಭಿಪ್ರಾಯಪಟ್ಟರು.

ಚಿತ್ರದುರ್ಗದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್, ಕೋಟೆ ನಾಡು ಬೌದ್ಧ ವಿಹಾರ ನೇತೃತ್ವದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

“ವಿದ್ಯಾರ್ಥಿಗಳ ಶೈಕ್ಷಣಿಕ ಸಮಾವೇಶ ಕಾರ್ಯಕ್ರಮವು ವಿದ್ಯಾರ್ಥಿಗಳ ದೃಷ್ಟಿಯಿಂದ ಮುಂದಾಲೋಚನೆಯ ದೂರದೃಷ್ಟಿಯ ಉತ್ತಮ ಕಾರ್ಯಕ್ರಮವಾಗಿದೆ. ಶೋಷಿತರನ್ನು ಅಸ್ಪೃಶ್ಯರನ್ನು ಪಂಚಮರನ್ನು ಸಮಾಜದಿಂದ ದೂರ ಇಟ್ಟಂತಹ ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಆಳವಾಗಿ ಅಧ್ಯಯನ ಮಾಡದೆ ಅಥವಾ ತಿಳಿದುಕೊಳ್ಳದೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ” ಎಂದರು.

Advertisements

“ಹಿಂದೆ ಬ್ರಿಟಿಷರು ಆಡಳಿತ ನಡೆಸಿದಾಗ ಅವರು ಎಷ್ಟೇ ಅನಾಹುತ ಮಾಡಿದ್ದರೂ ಕೂಡ ಅವರು ಬರದೇ ಇದ್ದಿದ್ದರೆ ಇಲ್ಲಿನ ಶಿಕ್ಷಣ ಸಾರ್ವತ್ರಿಕಗೊಳ್ಳುತ್ತಿರಲಿಲ್ಲ. ಬಹಳಷ್ಟು ವರ್ಗ ಶಿಕ್ಷಣದಿಂದ ವಂಚಿತರಾಗುತ್ತಿದ್ದರೆಂದು ಸ್ವತಃ ಕುವೆಂಪು ಅವರೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು” ಎಂದರು.

“ಅಂಬೇಡ್ಕರ್ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಅವರಿಗೆ ಸಂಸ್ಕೃತ ಕಲಿಯುವುದಕ್ಕೆ ಬಿಡುತ್ತಿರಲಿಲ್ಲ. ಆದರೆ ಅವರು ಕಷ್ಟಪಟ್ಟು ಅಧ್ಯಯನ ಮಾಡಿದರು. ಶಾಹು ಮಹಾರಾಜರಂಥವರು ಅವರಿಗೆ ಸಹಕಾರ ನೀಡಿ ಅವರು ಪರ್ಷಿಯನ್ ಭಾಷೆಯನ್ನೂ ಕಲಿಯಲು ಸಹಕಾರ ನೀಡಿದರು. ಅದಕ್ಕೂ ಮುಂಚೆ ಮಹಾತ್ಮ ಬಾ ಫುಲೆ ಸಾರ್ವತ್ರಿಕ ಶಿಕ್ಷಣದ ಮುನ್ನುಡಿ ಬರೆದಿದ್ದರು. ತದನಂತರ ನಾಲ್ವಡಿ ಕೃಷ್ಣರಾಜ ಒಡೆಯರು ಶಿಕ್ಷಣಕ್ಕೆ ಒತ್ತುಕೊಟ್ಟು ಸಾರ್ವತ್ರಿಕಗೊಳಿಸಿದ್ದರಿಂದ ಅಂಬೇಡ್ಕರ್ ಕೊಟ್ಟ ಸಂವಿಧಾನದ ಅಡಿಯಲ್ಲಿ ನಾವು ನೀವು ಎಲ್ಲರೂ ಶಿಕ್ಷಣವನ್ನು ಕಲಿಯುವಂತಾಗಿದೆ. ಆದ್ದರಿಂದಲೇ ನಾವು ಹೋರಾಟವನ್ನು ಮುಂದುವರಿಸುತ್ತಿದ್ದೇವೆ” ಎಂದು ಹೇಳಿದರು.

“ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಶೋಷಣೆ ನಡೆಯುವಂತಹ ಸಮಾಜದಿಂದ ಭಾರತ ಸಮೃದ್ಧವಾಗಲು ಸಾಧ್ಯವಿಲ್ಲ. ಶೋಷಣೆ ಮುಕ್ತದಿಂದ ಮಾತ್ರ ಸಮೃದ್ಧ ಭಾರತವಾಗಲು ಸಾಧ್ಯ. ಆದ್ದರಿಂದಲೇ ಸಂವಿಧಾನ ಪೀಠಿಕೆಯನ್ನು ಎಲ್ಲರಿಗೂ ತಿಳಿಸುವ ಸಲುವಾಗಿ ನಾವು ವಿಶ್ವ ಪ್ರಜಾಪ್ರಭುತ್ವದ ದಿನ ಸಂವಿಧಾನ ಪೀಠಿಕೆಯನ್ನು ಎಲ್ಲರೂ ಓದುವಂತಾಗಲು ವಿದ್ಯಾರ್ಥಿಗಳಿಗೆ ಬೋಧಿಸಲು ಕಾರ್ಯ ರೂಪಿಸುತ್ತಿದ್ದೇವೆ” ಎಂದರು.

“ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಆಂಜನೇಯ ಮಾತನಾಡಿ, “ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ವಿಧಾನಸೌಧದಲ್ಲಿ ಕುಳಿತು ಮುಖ್ಯಮಂತ್ರಿಯವರು ಮತ್ತು ಸಚಿವರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳೋಣ” ಎಂದು ಸಲಹೆ ನೀಡಿದರು.

ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ತಿಪ್ಪೇಸ್ವಾಮಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಮಾತನಾಡಿ, “ಶಾಲೆ-ಕಾಲೇಜುಗಳಲ್ಲಿ ಮತ್ತು ಹಾಸ್ಟೆಲ್‌ಗಳಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ತಾವು ಒಂದೆಡೆ ಸೇರಲು, ಪರಸ್ಪರ ಮಾತನಾಡಲು, ಕೂಡಿಕೊಳ್ಳಲು ಆಗದಂತಹ ವಾತಾವರಣವಿದೆ. ಇದಕ್ಕೆ ಕಾರಣ ಜಾತಿ ಜಾತಿಗಳ ನಡುವೆ ವರ್ಗೀಕರಣ, ಮೀಸಲಾತಿ ಒಡಕಿನ ಅಥವಾ ರಾಜಕಾರಣಿಗಳ ಒಡಕಿನ ಸಂಚಿನ ಫಲವಾಗಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಕಂಡರೆ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನೇರವಾಗಿ ಭಾರತೀಯರನ್ನು ರಕ್ಷಿಸಬಲ್ಲ ಸಂವಿಧಾನದ ಆಶಯಕ್ಕೆ ಪೆಟ್ಟು ಬೀಳುತ್ತಿದೆ. ಆ ಕಾರಣ ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ಗಳಲ್ಲಿರುವ ವ್ಯವಸ್ಥೆ ಸರಿಪಡಿಸಿ ಮತ್ತು ಪರಿಶಿಷ್ಟ ಜಾತಿಯ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕಿದೆ” ಎಂದು ಒತ್ತಾಯಿಸಿದರು.

“ಮೊರಾರ್ಜಿ ವಸತಿ ಶಾಲೆಗಳಂತಹ ವಸತಿ ಶಾಲೆಗಳನ್ನು ಹೋಬಳಿಗೆ ಒಂದರಂತೆ ಕಟ್ಟಬೇಕಿದೆ. ಆದರೆ, ಆ ಶಾಲೆಗಳಲ್ಲಿ ಬೇರೆ ಕಡೆ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು, ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಸ್ಥಳೀಯ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವನ್ನು ನೀಡಬೇಕು. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿಗಳನ್ನು ನೀಡಬೇಕು ಮತ್ತು ಶಾಲೆ-ಕಾಲೇಜುಗಳ ಶೈಕ್ಷಣಿಕ ಆರಂಭದ ದಿನದಿಂದಲೇ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳನ್ನು ಪ್ರಾರಂಭಿಸಬೇಕು” ಎಂದು ವಿದ್ಯಾರ್ಥಿಗಳ ಪರವಾಗಿ ಶೈಕ್ಷಣಿಕ ಹಕ್ಕೊತ್ತಾಯಗಳನ್ನು ಮಂಡಿಸಿ ಗಮನ ಸೆಳೆದರು.

ಈ ಸುದ್ದಿ ಓದಿದ್ದೀರಾ? ಪದವಿ ಪಡೆದವರೇ ಜಾತಿವಾದಿಗಳಾದರೆ ಯಾವ ಚಂದಕ್ಕೆ ಶಿಕ್ಷಣ ಪಡೆಯಬೇಕು?: ಸಿಎಂ ಅಸಮಾಧಾನ

ಇದೇ ವೇಳೆ ಗುರುನಾಥ್ ಅವರ ‘ನಕ್ಷತ್ರ ತಬ್ಬಿ ಮಲಗಿದ ಹೊತ್ತು’ ಕೃತಿ ಬಿಡುಗಡೆ ಮಾಡಲಾಯಿತು. ಸಮಾರಂಭದಲ್ಲಿ ಬುದ್ಧ ಧಮ್ಮದ ಭಿಕ್ಷು ಭಂತೇಜಿ, ಸಿದ್ದಲಿಂಗಯ್ಯನ ಕೋಟೆ ಶ್ರೀಗಳು, ಚಿತ್ರದುರ್ಗ ಶಾಸಕ ವೀರೇಂದ್ರ, ದಸಂಸ ಮಾವಳ್ಳಿ ಶಂಕರ್, ಕಾಂಗ್ರೆಸ್ ಮುಖಂಡ ಜಿ ಎಸ್ ಮಂಜುನಾಥ್, ಪ್ರಕಾಶ್, ತಾಜಪೀರ್ ಮಾಜಿ ಸಂಸದ ಬಿ ಎನ್ ಚಂದ್ರಪ್ಪ, ಶಾಸಕ ಬಸವಂತಪ್ಪ, ಗುರುನಾಥ್, ಸಿದ್ದೇಶ್, ವಕೀಲ ತಿಪ್ಪೇಸ್ವಾಮಿ ಮತ್ತು ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಮತ್ತು ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X