ಚಿತ್ರದುರ್ಗದ ಧಮ್ಮ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆ, ವಿಸ್ತಾರ್ ಆಪಿ, ಧಮ್ಮ ಸ್ಕೂಲ್ ಆಫ್ ಡ್ರಾಮಾ ಹಾಗೂ ಶಾಂತಿ ಮತ್ತು ಸೌಹಾರ್ದ ವೇದಿಕೆಗಳು ಒಗ್ಗೂಡಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಮತ್ತು ಕಿಶೋರಿಯರ ಕ್ರೀಡೆ – ಸಾಂಸ್ಕೃತಿಕ ಸಮಾರಂಭವನ್ನು ನಡೆಸಿವೆ.
ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ನಾನಾ ರೀತಿಯ ಸ್ಪರ್ಧೆಯಲ್ಲಿ ಭಾವಹಿಸಿದ್ದರು. ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಗಿದೆ. ಕಾರ್ಯಕ್ರಮಲ್ಲಿ ಚಿತ್ರದುರ್ಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಡಾ ಆರ್ ಸುಬ್ರ ನಾಯಕ್ ಅವರು ಹೆಣ್ಣು ಮಕ್ಕಳು ಉತ್ತಮ ಜ್ಞಾನ, ಉನ್ನತ ಶಿಕ್ಷಣ ಪಡೆದು ಸಬಲರಾಗಬೇಕು ಎಂದು ತಿಳಿಸಿದರು.
ಚಿತ್ರದುರ್ಗದ ಮಹಿಳಾ ಉದ್ಯಮಿ ಶ್ರೀಮತಿ ವೀಣಾ ಸುರೇಶ್ ಬಾಬು ಅವರು ಮಹಿಳೆಯರ, ಬಾಲಕಿಯರ ಶ್ರೇಯೋಭಿವೃದ್ಧಿಗೆ ನಾನು ಬೆಂಬಲವಾಗಿರುತ್ತೇನೆ ಎಂದರು.
ನೇಹಾ ಪಿಳ್ಳೆಕೇರನಹಳ್ಳಿ- ಭರತನಾಟ್ಯ ಪ್ರದರ್ಶನ ಮಾಡಿದರು. ಹೇಮಶ್ರೀ ಅಳಗವಾಡಿ ಯೋಗ ಪ್ರದರ್ಶನ ನೀಡಿದರು ಮತ್ತು ಇವರ ಸಾಧನೆಗಳನ್ನು ಮೆಚ್ಚಿ ವಿಮುಕ್ತಿ ಸಂಸ್ಥೆಯು ಇಬ್ಬರಿಗೂ ಸನ್ಮಾನಿಸಿತು.
ಕಾರ್ಯಕ್ರಮದಲ್ಲಿ ಸರೋವರ್ ಬೆಂಕಿಕೆರೆ ಮತ್ತು ಸಂಗಡಿಗರು ಪ್ರಾರ್ಥನ ಗೀತೆ ಹಾಡಿದರು. ಅರ್ಪಿತ ಸ್ವಾಗತಿಸಿದರು. ಅನ್ನಪೂರ್ಣ ಪ್ರಸ್ತಾವಿಕ ನುಡಿಗಳನ್ನಾಡಿದರು. ಹೇಮಾ ಹಾಗೂ ಬಿಬಿ ಜಾನ್ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿಗಳಾದ ಡಾ ನಾರದಮುನಿ, ಡಾ ನಾಗರಾಜ್,
ಹಿರಿಯ ಪತ್ರಕರ್ತರಾದ ಶ್ರೀ ಅರುಣ್ ಕುಮಾರ್, ಧಮ್ಮ ಕೇಂದ್ರದ ವಿಶ್ವಸಾಗರ್, ಅರಣ್ಯ ಸಾಗರ್, ಎಂ ಕೆ ಹಟ್ಟಿ , ಲಕ್ಷ್ಮಿಸಾಗರ , ಐನಳ್ಳಿ ಪಂಚಾಯಿತಿಯ ಹಳ್ಳಿಗಳ ಮತ್ತು ಚಿತ್ರದುರ್ಗ ಟೌನ್ ನಲ್ಲಿರುವ ಹಾಸ್ಟೆಲ್ಗಳ ಸುಮಾರು 80-100 ಕಿಶೋರಿಯರು, ಸ್ವಯಂಸೇವಕೀಯರು ಹಾಗೂ ವಿಮುಕ್ತಿ ವಿದ್ಯಾಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.