ವಿಮುಕ್ತಿ ವಿದ್ಯಾಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಚಿತ್ರದುರ್ಗದ ಧಮ್ಮ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಾಲಕಿಯರ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ವಿಷಯಗಳ ಕುರಿತು ಮತ್ತು ಬಾಲ್ಯವಿವಾಹ ಹಾಗೂ ಬಾಲ್ಯ ಕಾರ್ಮಿಕರ ಬಗ್ಗೆ ಚರ್ಚೆ ನಡೆಸಲಾಯಿತು.
ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಆರ್ ವಿಶ್ವಸಾಗರ್ ವಿಷಯಗಳ ಕುರಿತು ಮಾತನಾಡಿ, “ಇಂದು ಸಮಾಜದಲ್ಲಿ ಹದಿಹರೆಯದ ಕಿಶೋರಿಯರ ಮೇಲೆ ದೌರ್ಜನ್ಯಗಳಾಗುತ್ತಿದೆ. ಬಾಲಕಿಯರಿಗೆ ಅರಿವು ಮೂಡಿಸಲು ವಿಮುಕ್ತಿ ವಿದ್ಯಾಸಂಸ್ಥೆಯಿಂದ ಸುಮಾರು 25 ಹಳ್ಳಿಗಳಲ್ಲಿ ಗುಂಪು ರಚನೆ ಮಾಡಲಾಗಿದೆ. ಒಂದು ಗುಂಪಿನಲ್ಲಿ 30 ಕಿಶೋರಿಯರು ಇರುವಂತೆ ನಕ್ಷತ್ರ ಕಿಶೋರಿಯರ ಗುಂಪುಗಳನ್ನು ರಚನೆ ಮಾಡಲಾಗಿದೆ. ಇದಕ್ಕೆ ಜೊತೆಯಾಗಿ ನಕ್ಷತ್ರ ಕಿಶೋರಿಯರ ಪಾರ್ಲಿಮೆಂಟ್ ಸಹ ರಚನೆಯಾಗಿದೆ ಈ ಪಾರ್ಲಿಮೆಂಟಿನಲ್ಲಿ ಒಂದು ಹಳ್ಳಿಯ ಸಂಘದಿಂದ ಎರಡು ಜನ ಲೀಡರ್ ಗಳನ್ನು ನೇಮಿಸಲಾಗಿದೆ” ಎಂದು ವಿವರಿಸಿದರು.

ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕ ಅಧ್ಯಕ್ಷರಾದ ಅನ್ನಪೂರ್ಣ ಮುಂದಿನ ಆರು ತಿಂಗಳುಗಳಲ್ಲಿ ಕಿಶೋರಿಯರಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಸಂಸ್ಥೆಯ ಸಮುದಾಯ ಸಂಘಟಕ ಅರಣ್ಯ ಸಾಗರ್ ಕ್ರೀಡೆಗಳನ್ನು ಆಯೋಜಿಸಿದ್ದರು. ಆಶಾ ಮತ್ತು ಅಂಗನವಾಡಿ ಹಾಗೂ ಸ್ವಯಂಸೇವಕರಿಗೆ ಬಹುಮಾನಗಳ ವಿತರಣೆಯನ್ನು ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ‘ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ’; ಕ್ರಾಂತಿಕಾರಿ ಪಾದಯಾತ್ರೆ
ಕಾರ್ಯಕ್ರಮದಲ್ಲಿ ಸಂಯೋಜಕರಾದ ಶ್ರೀಮತಿ ಬೀಬಿಜಾನ್, ಶ್ರೀಮತಿ ನಾಗರತ್ನ ಕೆಬಿ ಹಾಗೂ ಆಶಾ ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತೆಯರು. ಮಹಿಳಾ ಸಂಘದ ಸ್ವಯಂ ಸೇವಕರು, ವಿದ್ಯಾರ್ಥಿ ಸೇವಕರು ಮತ್ತು ವಿಮುಕ್ತಿ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು.