ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋವೆರಹಟ್ಟಿ ಗ್ರಾಮದ ಕೊಲೆಗೀಡಾದ ದಲಿತ ವಿದ್ಯಾರ್ಥಿನಿ ವರ್ಷಿತಾ ಮನೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ನೇತೃತ್ವದ ನಿಯೋಗ ಮತ್ತು ಚಿತ್ರದುರ್ಗ ಕಾರ್ಯಕರ್ತರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಾಯಿತು.
ವಿದ್ಯಾರ್ಥಿನಿ ಚಿತ್ರದುರ್ಗದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಲ್ಲಿ ಇದ್ದು ದ್ವಿತೀಯ ವರ್ಷದ ಬಿಎ ಪದವಿ ಓದುತ್ತಿದ್ದಳು.
ಚಿತ್ರದುರ್ಗ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವೀತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ವಸತಿ ಸೌಲಭ್ಯ ಪಡೆದ ವಿದ್ಯಾರ್ಥಿನಿ ಮನೆಗೆ ಹೋಗುತ್ತೇನೆಂದು ಆಗಸ್ಟ್ 14 ರಂದು ಸಂಜೆ ಹೋಗಿದ್ದಾಳೆ. ಅವಳ ಪೋನ್ ಸ್ವಿಚ್ ಆಫ್ ಆಗಿ ಎರಡು ದಿನಗಳ ನಂತರ ಅವರ ತಾಯಿ ಜ್ಯೋತಿ ಹಾಸ್ಟೆಲ್, ಕಾಲೇಜ್ ವಿಚಾರಣೆ ಮಾಡಿದಾಗ ಕಾಣೆಯಾಗಿದ್ದ ವಿಷಯ ತಿಳಿದು. ಬೇಸರದಿಂದ ಇದ್ದ ಕುಟುಂಬಕ್ಕೆ ಆಗಸ್ಟ್-19ರ ತಡರಾತ್ರಿಯೇ ಪರಿಚಯಸ್ಥರ ಮೂಲಕ ವಿದ್ಯಾರ್ಥಿನಿ ಅರೆಬೆಂದ ಮೃತ ದೇಹ ಪತ್ತೆಯಾದ ಸುದ್ದಿ ಕೇಳಿ ಸಿಡಿಲು ಬಡಿದಂತಾಗಿದೆ.
ವಿದ್ಯಾರ್ಥಿನಿ ವರ್ಷಿತಾ ಕುಟುಂಬ ದಲಿತ ಸಮುದಾಯದ ಕಡು ಬಡತನದಿಂದ ಕೂಡಿದ್ದು ತಂದೆ ತಿಪ್ಪೇಶಪ್ಪ, ತಾಯಿ ಜ್ಯೋತಿ ದಿನಗೂಲಿ ಕೆಲಸ ಮಾಡಿ ಸಣ್ಣ ಮನೆಯಲ್ಲಿ ವಾಸವಾಗಿದ್ದಾರೆ. ಗಂಡು ಮಕ್ಕಳಿಲ್ಲದ ಮನೆಗೆ ಹಿರಿಯ ಮಗಳಾಗಿದ ವರ್ಷಿತಾ ತಂಗಿಯರಿಬ್ಬರು ವಿದ್ಯಾಭ್ಯಾಸವನ್ನು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಮೂವರು ಸರ್ಕಾರಿ ವಸತಿ ನಿಲಯ ಆಸರೆಯಲ್ಲಿ ಉನ್ನತ ಶಿಕ್ಷಣ ಭವಿಷ್ಯದ ಕನಸು ಕಟ್ಟಿಕೊಂಡಿದ್ದರು.

ಶಿಕ್ಷಣದ ಅವಶ್ಯಕತೆಗೆಂದು ತಾಯಿ ಕೂಲಿ ಕೆಲಸ ಮಾಡಿ ಮೊಬೈಲ್ ಕೊಡಿಸಿದ್ದು ಕೊಲೆಗೆಡುಕರ ದಾಳಕ್ಕೆ ಸಿಲುಕಿ ರಾಷ್ಟ್ರೀಯ ಹೆದ್ದಾರಿ ಬಳಿ ಅರೆಬರೆಯಾಗಿ ಬೆಂದು ಸಾವಿಗೀಡಾದ ವಿದ್ಯಾರ್ಥಿನಿ ಕುಟುಂಬ ದುಖಃದಲ್ಲಿ ಮುಳುಗಿದೆ.
ವಿದ್ಯಾಭ್ಯಾಸ ಮುಗಿಸಿ ಕುಟುಂಬದ ಜವಾಬ್ದಾರಿ ಹೊರಬೇಕಾಗಿದ ವಿದ್ಯಾರ್ಥಿನಿಯ ಮೇಲೆ ತಾಯಿ ಇಬ್ಬರು ತಂಗಿಯರು ಅವಲಂಬಿತವಾಗಿದ್ದರು. ಅವಳಿಲ್ಲದೆ ಕುಟುಂಬಕ್ಕೆ ಆಸರೆ ಯಾರು? ವಸತಿ ನಿಲಯದಿಂದ ಹೋದ ಬಳಿಕ ನಿಮ್ಮ ಮಗಳು ಬಂದಿದ್ದಾಳಾ? ಇಲ್ವಾ? ಎಂದು ಒಂದು ಪೋನ್ ಮಾಡಿದ್ದರೆ ಸಾಕಾಗಿತ್ತು, ನನ್ನ ಮಗಳನ್ನು ಉಳಿಸಿಕೊಳ್ಳುತ್ತಿದೆವು. ಹಾಸ್ಟೆಲ್ ನಿಂದ ಹೋಗಿ 5-6 ದಿನಗಳಾಗಿದೆ, ಅಂದರೆ ಸರ್ಕಾರಿ ವಸತಿ ನಿಲಯದ ನಿಲಯ ಪಾಲಕರ ನಿರ್ಲಕ್ಷ್ಯತನವೇ ಮಗಳು ಬಲಿಯಾಗುವುದಕ್ಕೆ ಪ್ರಮುಖ ಕಾರಣವೆಂದು ತಾಯಿ ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಗಳಿಗೆ ಕಠಿಣ ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಸಂಪೂರ್ಣ ವರದಿ ಸಲ್ಲಿಸಬೇಕು. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಆಯೋಗವು ಖಾಸಗಿ ವಸತಿ ನಿಲಯಗಳು, ಪಿಜಿ ಸೆಂಟರ್ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಹೆಚ್ಚು ನಿಗಾ ವಹಿಸಬೇಕು, ಉಚಿತ ಆರೋಗ್ಯ ತಪಾಸಣೆ ನಡೆಸಬೇಕು. ಪ್ರತಿ ರಾತ್ರಿ ವಸತಿ ನಿಲಯಗಳಲ್ಲಿ ರಾತ್ರಿ ಕಾವಲುಗಾರು ನೇಮಕಾ ಮಾಡಬೇಕು. ನಿರಂತರವಾಗಿ ತಿಂಗಳಿಗೊಮ್ಮೆ ಪಾಲಕರು ಸಭೆ ನಡೆಸಿ ಸುತ್ತೋಲೆ ಹೊರಡಿಸಬೇಕು. ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಕನಿಷ್ಠ 25 ಲಕ್ಷ ಪರಿಹಾರ ಘೋಷಣೆ ಮಾಡಬೇಕು ಎಂದು ಎಸ್ ಎಫ್ ಐ ಮುಖಂಡರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೆರೆ ನೀರು ಪೋಲು, ನೀರಾವರಿ ಇಲಾಖೆ ನಿರ್ಲಕ್ಷ್ಯ; ದುರಸ್ತಿಗೆ ರೈತಸಂಘದ ಮುಖಂಡರ ಆಗ್ರಹ
ಭೇಟಿ ವೇಳೆ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್, ರಾಜ್ಯ ಸಮಿತಿ ಸದಸ್ಯರಾದ ಅನಂತರಾಜ್ ಬಿ ಎಮ್, ಶಿವಾರೆಡ್ಡಿ, ಮುಖಂಡರಾದ ರಕ್ಷಿತಾ ಎಸ್ ಎ, ಮುದ್ದುಶ್ರೀ ಡಿ, ಐಶ್ವರ್ಯ ಕೊಲಮ್, ಸಾಯಿ ವರ್ಷಿಣಿ, ರಕ್ಷಿತಾ ದುರ್ಗದ ಪಾಲಯ, ಸಿಂಧು ಇ, ಪವಿತ್ರ ಎಸ್ ಉಪಸ್ಥಿತರಿದ್ದರು.