ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳ ಮಧ್ಯೆ ಜಾತಿ ಅಡ್ಡ ಬಂದಿದ್ದು, ಪರಿಶಿಷ್ಟ ಜಾತಿಯವಳು ಎನ್ನುವ ಕಾರಣಕ್ಕೆ ಯುವಕ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ ಯುವತಿ ನೇಣಿಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನೆಡೆದಿರುವ ಘಟನೆ ಕೇಳಿಬಂದಿದೆ.
ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದ ಯುವತಿ ನೇಣಿಗೆ ಕೊರಳೊಡ್ಡಿದ ಯುವತಿಯಾಗಿದ್ದು, , ‘ಪರಿಶಿಷ್ಟ ಜಾತಿ ಎಂದು ಮದುವೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾಳೆ’ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ನಾಗಸಮುದ್ರ ಗ್ರಾಮದ ಯುವತಿ, ರಾಂಪುರ ಗ್ರಾಮದ ಎಂಜಿನಿಯರ್ ಭಾರ್ಗವ ರೆಡ್ಡಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹುಡುಗಿ ಪರಿಶಿಷ್ಠ ಜಾತಿಯವಳು ಎನ್ನುವ ಕಾರಣಕ್ಕೆ ಮದುವೆ ಪ್ರಸ್ತಾಪಕ್ಕೆ ಯುವಕ ನಿರಾಕರಿಸಿದ್ದಾನೆ. ನಿರಾಕರಿಸಿದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಇದಕ್ಕೆ ಯುವಕ ಭಾರ್ಗವ ರೆಡ್ಡಿ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗೌತಮ ಬುದ್ಧನ ತತ್ವ, ಚಿಂತನೆಗಳ ಸ್ಮರಣೆಯೊಂದಿಗೆ ಬುದ್ಧ ಪೂರ್ಣಿಮೆ ಆಚರಣೆ.
ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಯುವತಿಯ ಸಂಬಂಧಿ ನಾಗರಾಜ್, “ಆರೋಪಿತ ಯುವಕ ಮತ್ತು ಯುವತಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಬೆಂಗಳೂರಿನಲ್ಲಿ ಸುತ್ತಾಡಿಸಿ ಈಗ ಪರಿಶಿಷ್ಟ ಜಾತಿ ಎನ್ನುವ ಕಾರಣಕ್ಕೆ ಎರಡು ತಿಂಗಳ ಹಿಂದೆ ಮದುವೆಯಾಗುವುದಿಲ್ಲ ಎಂದಿದ್ದಾನೆ. ಈ ವಿಷಯವಾಗಿ ಇಬ್ಬರ ಮಧ್ಯೆ ಎರಡು ಮೂರು ವಾರಗಳಿಂದ ಹಗ್ಗಜಗ್ಗಾಟ, ಚರ್ಚೆ ನಡೆದಿದೆ. ಮೊದಲು ಪ್ರೀತಿಸುವಾಗ ಇಲ್ಲದ ಜಾತಿ ಈಗ ಬಂದಿದ್ದೇಕೆ. ಯುವತಿ ಸಾವಿಗೆ ಯುವಕನೇ ಕಾರಣನಾಗಿದ್ದಾನೆ. ಜಾತಿ ದೌರ್ಜನ್ಯ, ವಂಚನೆಯ ದೂರು ದಾಖಲಿಸಲಾಗಿದೆ” ಎಂದು ಅಳಲು ತೋಡಿಕೊಂಡರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಕೂಡಲೇ ಬಂಧಿಸಿ ನ್ಯಾಯ ಕೊಡಿಸಲು ಪೋಷಕರು ಆಗ್ರಹಿಸಿದ್ದಾರೆ. ಮೊಳಕಾಲ್ಮೂರು ತಾಲೂಕಿನ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
