ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯದ ವಿವಿಧ ಕಡೆಗಳಲ್ಲಿ ಕೊಕೇನ್ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಬಾಗೇಪಲ್ಲಿ ಮೂಲದ ವ್ಯಕ್ತಿಯನ್ನು ಹೈದರಾಬಾದ್‌ನ ಕುಕಟ್‌ಪಲ್ಲಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗೇಪಲ್ಲಿ ಪಟ್ಟಣದ ನಿವಾಸಿ ಅಪ್ಪಣ್ಣ ಎಂಬುವ ಆರೋಪಿಯನ್ನು ಬಂಧಿಸಿ, ಬಾಗೇಪಲ್ಲಿ ಠಾಣೆಗೆ ಮಾಹಿತಿ ನೀಡಿ, ಬಳಿಕ ಮೆಡ್ಚಲ್ ಜಿಲ್ಲಾ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣದಲ್ಲಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಣಶೇಖರ್, ಸುರೇಂಧ್ರ, ಹರಿಬಾಬುರೆಡ್ಡಿ, ಪ್ರಕಾಶಂ ಜಿಲ್ಲೆಯ ಮೇರಿ ಮಾರ್ಗೆಟ್, ಮಸ್ತಾನ್ ವಲಿ, ಯಶ್‌ಬಾಬು ಹಾಗೂ ಬಾಗೇಪಳ್ಳಿ ಮೂಲದ ಅಪ್ಪಣ್ಣ ಸೇರಿ ಒಟ್ಟು 7 ಜನರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಾಗಿದೆ.

ಜೂನ್ 2ರಂದು ನಡೆಸಿದ ದಾಳಿ ವೇಳೆ, ಆರೋಪಿಗಳಿಂದ 1 ಕೋಟಿ ರೂ ಮೌಲ್ಯದ 820 ಗ್ರಾಂ ಕೊಕೇನ್, 1 ತೂಕದ ಯಂತ್ರ ಹಾಗೂ 5 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಜಿ.ಪಂ. ಕಾರು ಚಾಲಕ ಬಾಬು ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ: ಕಾಂಗ್ರೆಸ್‌ನಿಂದ ಪ್ರತಿಭಟನೆ