ಜಸ್ಟಿಸ್ ದಾಸ್ ವರದಿ ಸುಟ್ಟು ಹಾಕಿದ್ದು ದುರದೃಷ್ಟಕರ: ಕೋಟಿಗಾನಹಳ್ಳಿ ರಾಮಯ್ಯ

Date:

ಯಾವುದೇ ಪಾಲು ಪಡೆಯದವರಿಗೆ ಅನುಕೂಲ ಮಾಡಿಕೊಡಬೇಕು ಎಂಬುದರ ಬಗ್ಗೆ ನನಗೆ ಸಹಮತವಿದೆ. ವರದಿ ತುಂಬಾ ಸ್ಪಷ್ಟವಾಗಿದೆ. ಇದು ಕೂಡಲೇ ಜಾರಿ ಆಗಬೇಕಿದೆ. ತಾಂತ್ರಿಕವಾಗಿರುವುದನ್ನು ಸರಿಪಡಿಸಬೇಕಿದೆ ಎಂದಿದ್ದಾರೆ ಕೆ.ರಾಮಯ್ಯ.

ಜಸ್ಟಿಸ್ ಎಚ್.ಎನ್‌. ನಾಗಮೋಹನ ದಾಸ್ ಅವರ ಏಕ ಸದಸ್ಯ ಆಯೋಗದ ವರದಿಯನ್ನು ಸುಟ್ಟು ಹಾಕಿರುವುದು ದುರದೃಷ್ಟಕರ ಎಂದು ಹಿರಿಯ ಸಾಹಿತಿ, ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

- Advertisement -

ಜಸ್ಟಿಸ್ ದಾಸ್ ಅವರ ವರದಿ ಹಾಗೂ ಒಳಮೀಸಲಾತಿ ಜಾರಿ ಸಂಬಂಧ ಬೆಂಗಳೂರಿನ ಶಾಸಕರ ಭವನ-5ರಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸಂವಿಧಾನದಲ್ಲಿ ಸಹೋದರತೆ ಬಹುದೊಡ್ಡ ಸಂಗತಿ. ಸಹೋದರತೆಗೂ ನಮಗೂ ಕಿಂಚಿತ್ತು ಸಂಬಂಧವೂ ಇಲ್ಲ, ಸ್ಪರ್ಶವೂ ಇಲ್ಲ ಎನ್ನುವುದನ್ನು ವರದಿಯ ವಿರೋಧದಲ್ಲಿ ಕಾಣುತ್ತಿದ್ದೇವೆ ಎಂದು ಟೀಕಿಸಿದರು.

ಈ ವಿದ್ಯಮಾನವನ್ನು ರಾಜಕೀಯ ಲಾಭಕ್ಕೆ ನೋಡುವ ರಾಜಕೀಯ ನಾಯಕತ್ವವೂ ಮುಚ್ಚುಮರೆ ಆಟವನ್ನು ಎರಡೂ ಕಡೆಯೂ ಆಡುತ್ತಿದೆ. ಒಳಮೀಸಲಾತಿ ಜಾರಿ ವಿಳಂಬವಾಗಲೇಬೇಕು ಎಂದು ಅವರ ಮುಸುಕಿನ ನಡೆಗಳು ಹೇಳುತ್ತಿವೆ. ವರದಿಯು ಸೋರಿಕೆಯಾಗಿ ಸಿಕ್ಕಿರುವ ಮಾಹಿತಿಗಳನ್ನು ನೋಡಿದರೆ ವರದಿಯ ತಾತ್ವಿಕತೆ ತಪ್ಪು ಎನಿಸುವುದಿಲ್ಲ. ಜನಸಂಖ್ಯಾ ಆಧಾರದಲ್ಲಿ ಸೌಲಭ್ಯಗಳು ದೊರಕಬೇಕು ಎಂಬ ಆಗ್ರಹಗಳು ಪ್ರಜಾತಾಂತ್ರಿಕವಾಗಿ ಸರಿ. ಆದರೆ ಸಮಸ್ಯೆ ಇರುವುದು ಎಲ್ಲಿ ಎಂದು ನೋಡಬೇಕು. ಖಂಡಿತವಾಗಿಯೂ ನಾವು ಹೋಮೋಜೀನಿಯಸ್‌ ಆಗಿ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಬಹುಸಂಖ್ಯಾತವಾದ ಏನಾದರೂ ಹೆಚ್ಚಿನ ಪಾತ್ರ ವಹಿಸಿತು ಎಂದರೆ, ಆ ಬಹುಸಂಖ್ಯಾತರೊಳಗಿರುವ ಅಲ್ಪಸಂಖ್ಯಾತರಾದ ಹಲವು ಘಟಕಗಳು ಅನ್ಯಾಯಕ್ಕೆ ಒಳಗಾಗುತ್ತವೆ. ಬಹುಸಂಖ್ಯಾತವಾದ ಎಂದರೇನು, ಅಲ್ಪಸಂಖ್ಯಾತರು ಎಂದರೇನು ಎಂಬುದರ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿದ್ದಾರೆ. ಬಹುಸಂಖ್ಯಾತವಾದವೇ ನಿರ್ಧಾರ ಮಾಡುವುದಕ್ಕೆ ಬಿಡಬಾರದು ಎಂದು ಬಾಬಾಸಾಹೇಬರು ಪ್ರತಿಪಾದಿಸಿದ್ದಾರೆ. ನನ್ನದು ಕೂಡ ಅದೇ ನಿಲುವು ಎಂದು ಸ್ಪಷ್ಟಪಡಿಸಿದರು.

ಶಿಕ್ಷಣ, ರಾಜಕೀಯ ಪ್ರಾತಿನಿಧ್ಯ, ಕೈಗಾರಿಕೆ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಫಲಾನುಭವಿಗಳಾದವರು ಮತ್ತು ಹೊರಗುಳಿದವರ ಬಗ್ಗೆ ವರದಿ ಹೇಳಿದೆ. ಯಾವುದೇ ಪಾಲು ಪಡೆಯದವರಿಗೆ ಅನುಕೂಲ ಮಾಡಿಕೊಡಬೇಕು ಎಂಬುದರ ಬಗ್ಗೆ ನನಗೆ ಸಹಮತವಿದೆ. ವರದಿ ತುಂಬಾ ಸ್ಪಷ್ಟವಾಗಿದೆ. ಇದು ಕೂಡಲೇ ಜಾರಿ ಆಗಬೇಕಿದೆ. ತಾಂತ್ರಿಕವಾಗಿರುವುದನ್ನು ಸರಿಪಡಿಸಬೇಕಿದೆ ಎಂದರು.

ದಸಂಸ ಮುಖಂಡರಾದ ಮಾವಳ್ಳಿ ಶಂಕರ್ ಮಾತನಾಡಿ, ”ಪ್ರವರ್ಗ ‘ಎ’ಗೆ ಕೊಟ್ಟಿರುವ 1 ಪರ್ಸೆಂಟ್, ಪ್ರವರ್ಗ ‘ಬಿ’ಗೆ ಕೊಟ್ಟಿರುವ 6 ಪರ್ಸೆಂಟ್ ಮೀಸಲಾತಿಯನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಪ್ರವರ್ಗ ‘ಇ’ನಲ್ಲಿರುವವರನ್ನು ‘ಸಿ’ಗೆ ಶಿಫ್ಟ್‌ ಮಾಡಿದರೆ ಸಮಾನಾಂತರವಾಗುತ್ತದೆ ಮತ್ತು ಡ್ಯಾಮೇಜ್ ಕಂಟ್ರೋಲ್ ಆಗುತ್ತದೆ” ಎಂದು ಸಲಹೆ ನೀಡಿದರು.

WhatsApp Image 2025 08 14 at 10.53.52

ಹೋರಾಟಗಾರ ಎಚ್.ಗೋವಿಂದಯ್ಯ ಮಾತನಾಡಿ, ”ಹೊಲೆಯರಲ್ಲಿಯೂ ವಂಚಿತರಾದ ಸಮುದಾಯಗಳನ್ನು ‘ಬಿ’ ಗುಂಪಿನಲ್ಲಿ ಸೇರಿಸಲಾಗಿದೆ. ಏನೇನೂ ಪಡೆಯದೆ ಇರುವವರನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಲಾಗಿದೆ. ಇದು ಬಹಳ ಒಳ್ಳೆಯ ವರದಿ. ಇದನ್ನು ಕೂದಲು ಸೀಳಿಕೊಂಡು ನೋಡುತ್ತಾ ಕೂತರೆ ನಮ್ಮಂತಹ ಸಾಮಾಜಿಕ ನ್ಯಾಯದ ದ್ರೋಹಿಗಳು ಇನ್ಯಾರೂ ಇರುವುದಿಲ್ಲ” ಎಂದು ಎಚ್ಚರಿಸಿದರು.

ಚಿಂತಕ ಶಿವಸುಂದರ್ ಮಾತನಾಡಿ, ”1 ಕೋಟಿ 5 ಲಕ್ಷ ಜನ ಪರಿಶಿಷ್ಟರಲ್ಲಿ 1 ಲಕ್ಷ 45 ಸಾವಿರ ಜನ ಸರ್ಕಾರಿ ಉದ್ಯೋಗಿಗಳಿದ್ದಾರೆ. ಅಂದರೆ ನಾವು ಮಾತನಾಡುತ್ತಿರುವುದು ಪರಿಶಿಷ್ಟರಲ್ಲಿನ 1.4 ಪರ್ಸೆಂಟ್‌ ಸಾಮಾಜಿಕ ನ್ಯಾಯದ ಪ್ರಶ್ನೆಯ ಬಗ್ಗೆ. ಇಷ್ಟಾದರೂ ಆಗಲೇಬೇಕು. ಆದರೆ ಸಾಮಾಜಿಕ ನ್ಯಾಯ ಇಷ್ಟಕ್ಕೆ ಸೀಮಿತವಾಗಬಾರದು. ಭೂಮಿ ಪ್ರಶ್ನೆಯನ್ನು ನೋಡಬೇಕಾಗುತ್ತದೆ” ಎಂದು ಆಶಿಸಿದರು.

WhatsApp Image 2025 08 14 at 09.37.04

ಶಿಕ್ಷಣ ತಜ್ಞ ಬಿ.ಶ್ರೀಪಾದ್ ಭಟ್ ಮಾತನಾಡಿ, “ಅತಿ ಹಿಂದುಳಿದವರಿಗೆ ಸಿಗಬೇಕಾದ ನ್ಯಾಯವನ್ನು ಸುಪ್ರೀಂಕೋರ್ಟ್ ಹೇಳಿದೆ. ಇದು ಜನಸಂಖ್ಯಾ ಆಧಾರದ ಮೇಲೆ ಮಾಡಿರುವ ಮೀಸಲಾತಿ ವಿಂಗಡಣೆಯಲ್ಲ; ಪ್ರಾಧಾನ್ಯತೆಯ ಆಧಾರದ ವಿಂಗಡಣೆ. ವರದಿಯನ್ನು ಸುಡುವುದು ಒಳ್ಳೆಯದಲ್ಲ. ಅದರಿಂದ ಅಪನಂಬಿಕೆಗಳು ಹೆಚ್ಚಾಗುತ್ತವೆ” ಎಂದರು.

ಇದನ್ನೂ ಓದಿರಿ: ಅಲೆಮಾರಿಗಳನ್ನು ತಾಯ್ತನದಿಂದ ಪೊರೆದವರು ಮಾದಿಗರು: ಗೋಸಂಗಿ ಲೋಕೇಶ್

ಕಾಂಗ್ರೆಸ್ ವಕ್ತಾರೆ ಯು.ಟಿ.ಫಾರ್ಝಾನಾ ಮಾತನಾಡಿ, ”ಒಳಮೀಸಲಾತಿಯನ್ನು ವಿರೋಧಿಸುವವರಿಗೆ ಮೀಸಲಾತಿ ಪಡೆಯುವ ಅರ್ಹತೆ ಇರುವುದಿಲ್ಲ. ವರ್ಣವ್ಯವಸ್ಥೆಯಲ್ಲಿ ಶೋಷಿತರಾದವರು, ತಮ್ಮ ಕೆಳಗಿನವರ ಪಾಲನ್ನು ವಿರೋಧಿಸುವುದು ಸರಿಯಲ್ಲ. ಒಳಮೀಸಲಾತಿಯನ್ನು ವಿರೋಧಿಸುವವರಿಗೆ ಬ್ರಾಹ್ಮಣ್ಯವನ್ನು ವಿರೋಧಿಸುವ ಹಕ್ಕು ಇರುವುದಿಲ್ಲ” ಎಂದು ಹೇಳಿದರು.

ಸಭೆಯಲ್ಲಿ ಪ್ರೊ.ದೊರೆರಾಜು, ಬಸವರಾಜ ಕೌತಾಳ್, ಡಾ.ರವಿಕುಮಾರ್ ನೀಹ, ರೂಮಿ ಹರೀಶ್, ಅಗ್ರಹಾರ ಕೃಷ್ಣಮೂರ್ತಿ, ಡಿ. ಉಮಾಪತಿ, ಪ್ರೊ. ಬಿ.ಸಿ. ಬಸವರಾಜ್, ಲೇಖಾ ಅಡವಿ, ಹನುಮಂತಗೌಡ, ಹರ್ಷಕುಮಾರ್ ಕುಗ್ವೆ, ಡಾ. ಹುಲಿಕುಂಟೆ ಮೂರ್ತಿ, ವಿಕಾಸ್ ಆರ್ ಮೌರ್ಯ, ಸಿ.ಜಿ. ಲಕ್ಷ್ಮೀಪತಿ, ವಿ.ಎಲ್.ನರಸಿಂಹಮೂರ್ತಿ, ಆರ್.ವಿಜಯಕುಮಾರ್, ಡಾ.ಅರುಂಧತಿ, ಡಾ.ಬಸವರಾಜ್, ಡಾ.ವೈ.ಕೆ.ಬಾಲಕೃಷ್ಣಪ್ಪ, ಗುರುಪ್ರಸಾದ್ ಕಂಟಲಗೆರೆ, ಡಾ.ಲಕ್ಷ್ಮೀರಂಗಯ್ಯ, ಜನಾರ್ದನ ಕೆಸರಗದ್ದೆ, ರವಿಕುಮಾರ್ ಬಾಗಿ, ಚಂದ್ರು ತರಹುಣಿಸೆ, ರುದ್ರುಪುನೀತ್, ಭೀಮಾಶಂಕರ್, ಸರೋವರ್ ಬೆಂಕಿಕೆರೆ, ನರಸೀಯಪ್ಪ, ಸಿದ್ದಪ್ಪ ಮೂಲಗೆ, ಡಾ.ವಾಸು ಹೆಚ್.ವಿ, ನಾಗೇಗೌಡ ಕೀಲಾರ ಹಲವರು ಪಾಲ್ಗೊಂಡಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಯೋತ್ಪಾದಕ ಸಂಘಟನೆಗಳ ಸದಸ್ಯರೊಂದಿಗೆ ಸಂಪರ್ಕ ಆರೋಪ: ಭಾಲ್ಕಿ ಮೂಲದ ಯುವಕನ ಬಂಧನ

ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ ಮೂಲಕ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಮತ್ತು...

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ...

ರಾಜ್ಯಕ್ಕೆ ₹3,705.30 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ತಂಡಕ್ಕೆ ಸಿಎಂ ಡಿಕೆಶಿ ಮನವಿ

ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ...

ಹವಾಮಾನ ವರದಿ: ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ 10 ದಿನ ಭಾರೀ ಮಳೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ...