ಸಾಮಾಜಿಕ ಜಾಲತಾಣ ‘ಎಕ್ಸ್'(ಟ್ವಿಟ್ಟರ್)ನಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿಯಾಗಿ ಕಾಮೆಂಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಉಡುಪಿಯ ವೈದ್ಯ ಡಾ.ಕೀರ್ತನ್ ಉಪಾಧ್ಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸಾ ತಜ್ಞನಾಗಿರುವ ಡಾ.ಉಪಾಧ್ಯ ‘@Lonelystranger_ ಎಂಬ ಹೆಸರಿನ ಎಕ್ಸ್ ಖಾತೆಯನ್ನು ಹೊಂದಿದ್ದರು. ಬಲಪಂಥೀಯರನ್ನು ಬೆಂಬಲಿಸುವ ‘ಅಭಿ ಆ್ಯಂಡ್ ನೀಯು’ ಎಂಬ ಯೂಟ್ಯೂಬರ್ ದಂಪತಿ ಜು.13ರಂದು ‘ಎಕ್ಸ್’ನಲ್ಲಿ, “ಈ ಜಗತ್ತಿನಿಂದ ನೀವು ಏನಾದರೂ ಒಂದನ್ನು ಇಲ್ಲವಾಗಿಸಲು ಬಯಸುವುದಾದರೆ ಅದು ಯಾವುದು?” ಎಂದು ಪ್ರಶ್ನಿಸಿದ್ದರು.
Dear @DgpKarnataka He had made Communal and hate filled comment against Muslim community he is a doctor at mahesh hospital udupi, karnataka. Kindly take legal against him.@LonelyStranger_ pic.twitter.com/2h1J2zomRa
— Muffadal Vohra (@opinion_malik) July 14, 2024
ಇದಕ್ಕೆ ಉತ್ತರಿಸಿದ್ದ ಡಾ.ಉಪಾಧ್ಯ, ತಮ್ಮ ಖಾತೆಯಿಂದ “ಮುಸ್ಲಿಂ ಕಮ್ಯೂನಿಟಿ” ಎಂದು ಪ್ರಚೋದನಕಾರಿಯಾಗಿ ಉತ್ತರಿಸಿದ್ದರು. ಇದರ ಸ್ಕ್ರೀನ್‌ಶಾಟ್ ಸಾಮಾಜಿಕ ತಾಣಗಳಲ್ಲಿ ವೈರಲಾಗಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ ಉಸ್ತುವಾರಿ ಪೊಲೀಸ್ ಉಪನಿರೀಕ್ಷಕ (ನಿಸ್ತಂತು) ಅಜ್ಮಲ್ ಇಬ್ರಾಹಿಂ ಇ.ಎ. ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಭಾರತೀಯ ನಾಗರಿಕ ಸಂಹಿತೆ ಕಲಂ 196, 353ರಂತೆ ಪ್ರಕರಣ ದಾಖಲಾಗಿದೆ.
ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿಯಾಗಿ ಕಾಮೆಂಟ್ ಮಾಡುವ ಮೂಲಕ ಧರ್ಮ- ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡಿ, ಕೋಮು ಸೌಹಾರ್ದತೆಗೆ ಧಕ್ಕೆ ತರಲು ಪ್ರಯತ್ನಿಸಿದ ಡಾ.ಉಪಾಧ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಖಾತೆಯೇ ಡಿಲೀಟ್!
ಡಾ. ಕೀರ್ತನ್ ಉಪಾಧ್ಯ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತನ್ನ ಕಾಮೆಂಟ್‌ನ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿ, ವಿವಾದವಾಗುತ್ತಿದ್ದಂತೆಯೇ ಡಾ. ಉಪಾಧ್ಯ ತನ್ನ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.
“ವೈದ್ಯ ವೃತ್ತಿಯಲ್ಲಿರುವ ವ್ಯಕ್ತಿಯೊಬ್ಬ ಇಂತಹ ಸಮುದಾಯ ದ್ವೇಷದ ಹೇಳಿಕೆ ಕೊಡುವುದು ಖಂಡನೀಯ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
He later deleted the tweet,. changed the account name and now protected his Tweets after getting exposed @Stranger_Solo https://t.co/WZv8hQJQ3a pic.twitter.com/RmLETj6Yvy
— Mohammed Zubair (@zoo_bear) July 14, 2024
ಡಾ. ಕೀರ್ತನ್ ಉಪಾಧ್ಯ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನರು ಕರ್ನಾಟಕ ಡಿಜಿಪಿ ಅವರನ್ನು ಆಗ್ರಹಿಸಿ, ಹಲವರು ಟ್ವೀಟ್ ಮಾಡಿದ್ದಾರೆ.
“ಡಾ. ಕೀರ್ತನ್ ಉಪಾಧ್ಯ ತಾನು ಮಾಡಿದ್ದ ವಿವಾದಾತ್ಮಕ ಟ್ವೀಟ್ ಅನ್ನು ಡಿಲೀಟ್ ಮಾಡಿ ತನ್ನ ಎಕ್ಸ್ ಖಾತೆಯನ್ನೂ ಲಾಕ್ ಮಾಡಿ ಅವರ ಯಾವುದೇ ಟ್ವೀಟ್ ಅನ್ನು ನೋಡಲು ಆಗದಂತೆ ಮಾಡಿದ್ದಾರೆ” ಎಂದು ಆಲ್ಟ್‌ನ್ಯೂಸ್‌ನ ಪತ್ರಕರ್ತ ಮೊಹಮ್ಮದ್ ಝುಬೇರ್ ಹೇಳಿದ್ದಾರೆ.
ಡಾ. ಕೀರ್ತನ್ ಉಪಾಧ್ಯ ಅವರು ಇನ್ನೊಂದು ಟ್ವೀಟ್ ಮಾಡಿ ಯಾರೋ ತನ್ನ ಖಾತೆಯನ್ನು ಹ್ಯಾಕ್ ಮಾಡಿ ಅಂತಹ ಟ್ವೀಟ್ ಮಾಡಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
“ಡಾ. ಕೀರ್ತನ್ ಉಪಾಧ್ಯ ಈ ಹಿಂದೆಯೂ ಇದೇ ರೀತಿಯ ಇಸ್ಲಾಂ ದ್ವೇಷಿ ಟ್ವೀಟ್ ಮಾಡಿದ್ದಾರೆ” ಎಂದು ಜನ ಅವರ ಈ ಹಿಂದಿನ ಟ್ವೀಟ್‌ಗಳ ಸ್ಕೀನ್‌ಶಾಟ್‌ಗಳನ್ನು ಶೇರ್ ಮಾಡಿದ್ದಾರೆ.
