ಸಂತ ಅಲೋಶಿಯಸ್ (ಡೀಮ್ಡ್ ಟು ಯೂನಿವರ್ಸಿಟಿ) ಮಂಗಳೂರು ವಿವಿಯ ಮೊದಲ ಉಪಕುಲಪತಿಯಾಗಿ ರೆವರೆಂಡ್ ಫಾದರ್ ಪ್ರವೀಣ್ ಮಾರ್ಟಿಸ್ ನೇಮಕಗೊಂಡಿದ್ದಾರೆ.
ಕರ್ನಾಟಕ ಜೆಸ್ಯೂಟ್ ಪ್ರಾಂತ್ಯದ ಕುಲಪತಿ ರೆವರೆಂಡ್ ಫಾದರ್ ಡಿಯೋನಿಸಿಯಸ್ ವಾಜ್ ಅವರು ಇತ್ತೀಚೆಗೆ ಈ ಘೋಷಣೆ ಮಾಡಿದ್ದಾರೆ.
1974ರ ಮೇ 20ರಂದು ಉಡುಪಿಯ ಶಂಕರಪುರದಲ್ಲಿ ಜನಿಸಿದ ಮಾರ್ಟಿಸ್ ಬಲವಾದ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದ ಅವರು, ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಎಂಎಸ್‌ಸಿ ಪದವಿ ಪಡೆದರು.
ಈ ಸುದ್ದಿ ಓದಿದ್ದೀರಾ? ಗದಗ | ಹಿರೇಹಾಳ ಚೆಕ್ ಪೋಸ್ಟ್‌ಗೆ ಸಿಇಒ ಅನಿರೀಕ್ಷಿತ ಭೇಟಿ
ಅವರ ವಿದ್ವತ್‌ಪೂರ್ಣ ಪ್ರಯಾಣವು ಬೆಲ್ಜಿಯಂನ ನಮೂರ್ ವಿಶ್ವವಿದ್ಯಾಲಯಕ್ಕೆ ಮುಂದುವರಿಯಿತು. ಅಲ್ಲಿ ಅವರು ನ್ಯಾನೊ ವಿಜ್ಞಾನದಲ್ಲಿ ಪಿಎಚ್‌ಡಿ ಪಡೆದರು. ಇದಕ್ಕೂ ಮುನ್ನ 2017ರಿಂದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.
