ಒಂದು ವರ್ಷದಿಂದ ಪಾಳು ಬಿದ್ದಿದ್ದು, ಮತ್ತೆ ಸುಂಕ ಸಂಗ್ರಹ ಆರಂಭದ ಕುರಿತು ಜನಸಾಮಾನ್ಯರಲ್ಲಿ ವದಂತಿ ಆತಂಕಕ್ಕೆ ಕಾರಣವಾಗಿದ್ದ ಸುರತ್ಕಲ್ ನಿರುಪಯುಕ್ತ ಟೋಲ್ ಗೇಟ್‌ನ ಕೆಲವು ಟೋಲ್ ಸಂಗ್ರಹ ಬೂತ್‌ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರುವಾರದಂದು ತೆರವುಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಟೋಲ್ ಸಂಗ್ರಹ ಕಳೆದ ಡಿಸೆಂಬರ್ 1ರಂದು ರದ್ದುಗೊಂಡಿದ್ದು, ಹೋರಾಟದ ಗೆಲುವು ಸಾಧಿಸಿದ ದಿನವಾಗಿದೆ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಗೆಲುವಿನ ಸಂಭ್ರಮಾಚರಣೆ ಹಾಗೂ ಅದೇ ಸಂದರ್ಭ ನಿರುಪಯುಕ್ತ ಟೋಲ್ ಗೇಟ್ ರಚನೆ ತೆರವು, ನಂತೂರು, ಸುರತ್ಕಲ್ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆಯನ್ನಾಗಿಸುವುದೂ ಸೇರಿದಂತೆ ಹೆದ್ದಾರಿಯ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಸಭೆ ಆಯೋಜಿಸಿದೆ.
ಆಗ್ರಹ ಸಭೆಗೆ ದೊಡ್ಡ ಜನ ಬೆಂಬಲ ದೊರಕಿದ್ದು, ಹೋರಾಟ ಸಮಿತಿಯೂ ಕಾರ್ಯಕ್ರಮದ ಯಶಸ್ಸಿಗೆ ವ್ಯಾಪಕ ಸಿದ್ದತೆ ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಹಣ ಮಂಜೂರಾತಿಗೆ ಅಧಿಕಾರಿಗಳಿಂದ ಲಂಚ; ಗ್ರಾ.ಪಂ ಕಚೇರಿಯಲ್ಲಿ ದನ ಕಟ್ಟಿ ಪ್ರತಿಭಟನೆ
ಈಗ, ಸಂಭ್ರಮಾಚರಣೆಯ ಮುನ್ನಾ ದಿನ ನಿರುಪಯುಕ್ತ ಟೋಲ್ ಗೇಟ್‌ನಲ್ಲಿ ಪಾಳು ಬಿದ್ದಿದ್ದ ಬೂತ್‌ಗಳನ್ನು ತೆರವುಗೊಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮತ್ತೆ ಹೋರಾಟ ಭುಗಿಲೇಳುವ ಸಾಧ್ಯತೆಗಳ ಹಿನ್ನಲೆಯಲ್ಲಿ ಈ ಅಲ್ಪ ಪ್ರಮಾಣದ ತೆರವು ಪ್ತಕ್ರಿಯೆ ನಡೆದಿದೆ ಎಂಬುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ.