ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಲೇಡಿಹಿಲ್ ಬಳಿ ಇರುವ ಮಂಗಳೂರು ನಗರ ಪಾಲಿಕೆಯ ಈಜು ಕೊಳದಲ್ಲಿ ಈಜುಗಾರಿಕೆ ವೇಳೆ ಹರಿಯಾಣ ಮೂಲದ ಅಭಿಷೇಕ್ ಎಂಬ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ನಗರ ಪಾಲಿಕೆಯ ಈ ಈಜುಕೊಳದಲ್ಲಿ ಮಂಗಳವಾರ ಸಂಜೆ ವೇಳೆ ಸಾರ್ವಜನಿಕರಿಗೆ ಈಜಲು ಅವಕಾಶ ಇರುವ ಟಿಕೆಟ್ ಪಡೆದುಕೊಂಡು ಅಭಿಷೇಕ್ ಆನಂದ್ (30) ಈಜುಕೊಳಕ್ಕೆ ಬಂದಿದ್ದರು. ನೀರಿಗಿಳಿದ ಅಭಿಷೇಕ್ ತುಂಬಾ ಹೊತ್ತಿನ ತನಕ ಮೇಲಕ್ಕೆ ಬಾರದಿರುವುದನ್ನು ಈಜುಗಾರರು ಗಮನಿಸಿ ಜೀವರಕ್ಷಕರಿಗೆ ಮಾಹಿತಿ ನೀಡಿದ್ದರು. ಜೀವ ರಕ್ಷಕರು ನೀರಿಗಿಳಿದು 15 ಅಡಿ ಆಳದಲ್ಲಿ ಕುಸಿದು ಬಿದ್ದಿದ್ದ ಅಭಿಷೇಕ್‌ನನ್ನು ಮೇಲೆತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿ ವೆನ್ಲಾಕ್ ಸರ್ಕಾರಿ ಆಸ್ಪತ್ರೆ ಕೊಂಡೊಯ್ದರು. ಆಸ್ಪತ್ರೆಗೆ ತರುವಷ್ಟರಲ್ಲಿಯೇ ಯುವಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕಾರಂಜಾ ಸಂತ್ರಸ್ತರ ಹೋರಾಟ : ಪರಿಣಿತರ ಉನ್ನತ ಮಟ್ಟದ ಸಭೆ ನಡೆಸಿ ನಿರ್ಣಯ : ಡಿ.ಕೆ.ಶಿವಕುಮಾರ್
ಮೃತ ಯುವಕ ಹರಿಯಾಣ ರಾಜ್ಯದ ಗುರ್ಗಾಂವ್ ಮೂಲದವನಾಗಿದ್ದಾನೆ. ಯುವಕ ಮಂಗಳೂರಿನಲ್ಲಿ ಏನು ಮಾಡುತ್ತಿದ್ದ, ಯಾರ ಜೊತೆಗೆ ಈಜು ಕೊಳಕ್ಕೆ ಬಂದಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ಇದೇ ಮೊದಲ ಬಾರಿಗೆ ಈ ಯುವಕ ಇಲ್ಲಿನ ಈಜುಕೊಳಕ್ಕೆ ಬಂದಿರಬೇಕು. ಈತ ಈ ಮೊದಲು ಇಲ್ಲಿ ಬಂದಿರುವುದನ್ನು ಗಮನಿಸಿಲ್ಲವೆಂದು ಈಜುಕೊಳದ ಸಿಬ್ಬಂದಿಗಳು ಹೇಳಿದ್ದಾರೆ.