ಮಂಗಳೂರು | ಚಿಂತಕರು, ಸಾಮಾಜಿಕ ಕಾರ್ಯಕರ್ತರ ಜೊತೆ ಬಿ ಕೆ ಹರಿಪ್ರಸಾದ್‌ ಚರ್ಚೆ

Date:

Advertisements

ದಕ್ಷಿಣಕನ್ನಡದಲ್ಲಿ ಭುಗಿಲೆದ್ದಿರುವ ಮತೀಯ ಹಿಂಸಾಚಾರ, ದ್ವೇಷ ಭಾಷಣ, ಪ್ರತೀಕಾರದ ಹತ್ಯೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಶುಕ್ರವಾರ ಮಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರನ್ನು ದ.ಕ‌. ಮತ್ತು ಉಡುಪಿ ಜಿಲ್ಲೆಯ ಪ್ರಮುಖ ಚಿಂತಕರು, ಬರಹಗಾರರು, ರಂಗಕರ್ಮಿಗಳು, ಸಾಮಾಜಿಕ ಕಾರ್ಯಕರ್ತರು, ವಿವಿಧ ಚಳವಳಿಗಳ ಪ್ರಮುಖರು ಭೇಟಿಯಾಗಿ ಚರ್ಚಿಸಿದರು.

ಹೆಚ್ಚುತ್ತಿರುವ ಕೋಮು ಸಂಘರ್ಷ, ಆಳಗೊಳ್ಳುತ್ತಿರುವ ಮತೀಯ ಧ್ರುವೀಕರಣದ ಕುರಿತು ಕಳವಳ ವ್ಯಕ್ತಪಡಿಸಿದ ಸಮಾನ ಮನಸ್ಕರು ಶಾಂತಿ, ಸಾಮರಸ್ಯ ಮರಳಿ ನೆಲೆಗೊಳಿಸಲು ಸರಕಾರ ಕೈಗೊಳ್ಳಬೇಕಾದ ಕೆಲಸಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು, ಸಲಹೆಗಳನ್ನು ನೀಡಿದರು. ಸುಮಾರು ಎರಡು ತಾಸುಗಳ ಕಾಲ ಸಭೆ ನಡೆಯಿತು.

ಮೂರು ದಶಕಗಳಿಗಿಂತೂ ದೀರ್ಘ ಅವಧಿಯಲ್ಲಿ ವ್ಯವಸ್ಥಿತವಾಗಿ ಕೋಮುವಾದಿ ಸಿದ್ದಾಂತವನ್ನು ಕರಾವಳಿ ಜಿಲ್ಲೆಯಲ್ಲಿ ಹರಡಲಾಗಿದೆ. ಸರಿಯಾದ ಪ್ರತಿರೋಧ ಒಡ್ಡದಿರುವುದರಿಂದ ಇಂದು ಕೋಮುವಾದ ಯಾರ ಅಂಕೆಗೂ ಸಿಗದಷ್ಟು ರಾಕ್ಷಸೀ ರೂಪ ತಾಳಿದೆ. ಈ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈ ಕುರಿತು ಸ್ಪಷ್ಟ ಧೋರಣೆ ಹೊಂದದಿರುವುದರಿಂದ ಬಿಜೆಪಿ ಸರಕಾರದ ಪತನದ ಹೊರತಾಗಿಯು ಸಂಘ ಪರಿವಾರದ ಶಕ್ತಿಗಳ ಚಟುವಟಿಕೆ ತಡೆ ಇಲ್ಲದೆ ಮುಂದುವರಿದಿದೆ. ದ್ವೇಷ ಭಾಷಣಗಳು ತಡೆ ರಹಿತವಾಗಿ ನಡೆಯುತ್ತಿದೆ. ಇದು ಭೀಕರ ಹತ್ಯೆಗಳಿಗೂ ಸಾಕ್ಷಿ ಆಗುತ್ತಿರುವುದು ಭೀತಿಗೆ ಕಾರಣವಾಗಿದೆ. ಸಿದ್ದರಾಮಯ್ಯ ಸರಕಾರ ಕೋಮು ಶಕ್ತಿಗಳ ನಿಗ್ರಹಕ್ಕೆ ಈಗಲಾದರೂ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚಿಂತಕರು ಅಭಿಪ್ರಾಯಪಟ್ಟರು.

Advertisements

ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ವಲಯಗಳಲ್ಲಿ ಸೌಹಾರ್ದತೆಯನ್ನು ಉದ್ದೀಪನಗೊಳಿಸುವ ಕಾರ್ಯಕ್ರಮಗಳು ನಡೆಯಬೇಕು. ದ.ಕ‌. ಉಡುಪಿ ಜಿಲ್ಲೆಗಳಲ್ಲಿ ದಂಧೆಗಳ ಲೋಕ ಹಾಗೂ ಮತೀಯ ಗೂಂಡಾಗಳ ಲೋಕ ಒಂದಕ್ಕೊಂದು ಬೆಸೆದುಕೊಂಡಿದ್ದು, ಇವುಗಳನ್ನು ಮುಲಾಜಿಲ್ಲದೆ ಮಟ್ಟ ಹಾಕಬೇಕು. ದ್ವೇಷ ಭಾಷಣ, ಮಾಬ್ ಲಿಂಚಿಂಗ್, ಹತ್ಯಾ ಪ್ರಕರಣಗಳಲ್ಲಿ ಜಾಮೀನು ದೊರಕದಂತೆ ಕಾನೂನಾತ್ಮಕ ದೃಢ ಕ್ರಮಗಳನ್ನು ಕೈಗೊಳ್ಳಬೇಕು, ಜಿಲ್ಲಾಡಳಿತದ ಎಲ್ಲಾ ವಿಭಾಗಗಳು, ಪೊಲೀಸ್ ಇಲಾಖೆ, ವಿ ವಿ ಸೇರಿದಂತೆ ಆಯಕಟ್ಟಿನ ವಿಭಾಗಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಬೇಕು. ಮಾನವೀಯತೆ, ಸಂವಿಧಾನದ ಮೌಲ್ಯಗಳನ್ನು ಜನತೆಗೆ ತಲುಪಿಸುವ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸರಕಾರ ವ್ಯಾಪಕವಾಗಿ ನಡೆಸಬೇಕು, ಸಾಮಾಜಿಕ ಚಳವಳಿಗಳು ನಡೆಸುವ ಸೌಹಾರ್ದ ಕಾರ್ಯಕ್ರಮಗಳಿಗೆ ಬೆಂಬಲ ನೀಡಬೇಕು, ಸಾಮರಸ್ಯ, ಸಹಬಾಳ್ವೆಯ ಕರೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಚಿಂತಕರ ನಿಯೋಗದ ಅಭಿಪ್ರಾಯಗಳನ್ನು ಆಲಿಸಿದ ಬಿ ಕೆ ಹರಿಪ್ರಸಾದ್ ಈ ಕುರಿತು ಜಾತ್ಯತೀತ ಶಕ್ತಿಗಳ ಜೊತೆಗಿರುವುದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿಗಳ ಜೊತೆಗೆ ಕರಾವಳಿಯ ಚಿಂತಕರು, ಬರಹಗಾರರು, ಸಂಘಟನೆಗಳ ಪ್ರಮುಖರ ಸಭೆ ಏರ್ಪಡಿಸುವುದಾಗಿ ತಿಳಿಸಿದರು.

ಇದನ್ನೂ ಓದಿ ಮಂಗಳೂರು | ದ್ವೇಷ ಭಾಷಣಗಳಿಗೆ ಕಡಿವಾಣವಿಲ್ಲ, ತಡೆಯಾಜ್ಞೆಗೂ ತಡೆಯಿಲ್ಲ: ಕಾನೂನು ಏನು ಹೇಳುತ್ತದೆ?

ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಮುನೀರ್ ಕಾಟಿಪಳ್ಳ ಸ್ವಾಗತಿಸಿ ಸಭೆಯ ಉದ್ದೇಶವನ್ನು ವಿವರಿಸಿದರು. ಡಾ. ಶ್ರೀನಿವಾಸ ಕಕ್ಕಿಲ್ಲಾಯ, ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಜನಪದ ವಿದ್ವಾಂಸ ಡಾ‌.ಗಣನಾಥ ಶೆಟ್ಟಿ ಎಕ್ಕಾರು, ನಿವೃತ್ತ ಪ್ರಾಂಶುಪಾಲರು ಡಾ.ಉದಯ ಇರ್ವತ್ತೂರು, ನಿವೃತ್ತ ಪ್ರಾಧ್ಯಾಪಕ ಡಾ ಶಿವರಾಮ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಡಾ ಎನ್ ಇಸ್ಮಾಯಿಲ್, ಡಾ‌.ಅಮರಶ್ರೀ ಮೂಡಬಿದ್ರೆ, ವಾಸುದೇವ ಉಚ್ಚಿಲ್, ಸಹಬಾಳ್ವೆ ಉಡುಪಿಯ ಅಮೃತ್ ಶೆಣೈ, ರಥಬೀದಿ ಗೆಳೆಯರು ಉಡುಪಿ ಇದರ ನಾಗೇಶ್ ಉದ್ಯಾವರ, ಕೀರ್ತಿ ಶೆಟ್ಟಿ ಅಂಬಲಪಾಡಿ, ಸಿಪಿಎಂ ಮುಖಂಡರಾದ ಕೆ ಯಾದವ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಹಿರಿಯ ನ್ಯಾಯವಾದಿಗಳಾದ ದಿನೇಶ್ ಹೆಗ್ಡೆ ಉಳೆಪ್ಪಾಡಿ, ಯಶವಂತ ಮರೋಳಿ, ದಲಿತ ಚಳವಳಿಯ ನಾಯಕರಾದ ಎಂ ದೇವದಾಸ್, ಕೃಷ್ಣಾನಂದ ಬಜ್ಪೆ, ಸದಾಶಿವ ಪಡುಬಿದ್ರೆ, ರಘು ಎಕ್ಕಾರು, ಮಾಜಿ ಮೇಯರ್ ಕೆ ಅಶ್ರಫ್, ಸಾಮಾಜಿಕ ಹೋರಾಟಗಾರರಾದ ಮಂಜುಳಾ ನಾಯಕ್, ಬಿ ಎನ್ ದೇವಾಡಿಗ, ಟಿ ಆರ್ ಭಟ್, ಸ್ವರ್ಣಾ ಭಟ್, ದಿಲ್ ರಾಜ್ ಆಳ್ವ, ಸಮರ್ಥ್ ಭಟ್, ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಸೀತಾರಾಮ ಬೇರಿಂಜ,ಕರುಣಾಕರ್ ಮಾರಿಪಳ್ಳ, ಸಿಪಿಐ ನ.ವಿ ಕುಕ್ಯಾನ್, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ರೋಯ್ ಕ್ಯಾಸ್ಟಲಿನೋ, ಪ್ಲೇವಿಕ್ರಾಸ್ತಾ ಅತ್ತಾವರ, ಡೋಲ್ಪಿ ಡಿಸೋಜ, ರಚನಾ ಸಂಸ್ಥೆಯ ಜೋನ್ ಮುಂತೇರೋ, ಕೆಥೋಲಿಕ್ ಸಭಾದ ಸಂತೋಷ್ ಡಿಸೋಜ, ಡಿವೈಎಫ್ಐ ನ ನ‌ ಬಿಕೆ ಇಮ್ತಿಯಾಜ್, ಮಹಿಳಾ ಸಂಘಟನೆಯ ಅಸುಂತ ಡಿಸೋಜ, ಪ್ರಮೀಳಾ ಶಕ್ತಿನಗರ, ಸಾಂಸ್ಕೃತಿಕ ರಂಗದ ಸಂತೋಷ್ ಶೆಟ್ಟಿ ಹಿರಿಯಡ್ಕ, ವಿದ್ದು ಉಚ್ಚಿಲ್, ಹರೀಶ್ ಪೇಜಾವರ, ಶ್ಯಾಮಸುಂದರ್ ರಾವ್, ಚಿತ್ತರಂಜನ್ ಶೆಟ್ಟಿ ಬೊಂಡಾಲ ಮುಂತಾದವರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

Download Eedina App Android / iOS

X