ಬೋರ್‌ವೆಲ್ ಕೊರೆಯಲು ಬಂದಿದ್ದ ಲಾರಿ ಸುಟ್ಟು ಭಸ್ಮವಾದ ಘಟನೆ ದಾವಣಗೆರೆ ತಾಲೂಕಿನ ಕುಕ್ಕುವಾಡ ಗ್ರಾಮದಲ್ಲಿ ನಡೆದಿದೆ.
ಮಳೆಯ ಅವಕೃಪೆಯಿಂದಾಗಿ ಬೆಳೆ, ತೋಟಗಳನ್ನು ಉಳಿಸಿಕೊಳ್ಳಲು ಅನ್ನದಾತ ಅಂತರ್ಜಲಕ್ಕಾಗಿ ಬೋರ್‌ವೆಲ್ ಮೊರೆ ಹೋಗಿದ್ದು, ಹತ್ತಾರು ಬೋರ್‌ವೆಲ್ ಗಾಡಿಗಳ ಸದ್ದು ಹಳ್ಳಿಗಳಲ್ಲಿ ಕೇಳಿಬರುತ್ತಿದೆ. ಆದರೆ ಕೊಳವೆಬಾವಿ ಕೊರೆಯಲು ಬಂದ ಗಾಡಿಯೊಂದು ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಾರಿಗೆ ಬೆಂಕಿ ಹತ್ತಿಕೊಂಡಿದ್ದು, ಲಾರಿಯು ಧಗಧಗನೇ ಹೊತ್ತಿ ಉರಿದಿದೆ. ಬೆಂಕಿ ನಂದಿಸಲು ಯತ್ನಿಸಲಾಯಿತಾದರೂ ಅಗ್ನಿಶಾಮಕ ದಳ ವಾಹನ ಬರುವ ವೇಳೆಗಾಗಲೇ ಸಂಪೂರ್ಣವಾಗಿ ಬೆಂಕಿಯಿಂದ ಸುಟ್ಟು ಕರಕಲಾಯಿತು.
ಈ ಸುದ್ದಿ ಓದಿದ್ದೀರಾ? ಉಡುಪಿ | ಗ್ಯಾರೇಜ್ ಕಾರ್ಮಿಕರ ಸಮಸ್ಯೆಗಳಿಗೆ ಧನಾತ್ಮಕವಾಗಿ ಸ್ಪಂದಿಸಿದ ಶಾಸಕ ಯಶಪಾಲ್ ಸುವರ್ಣ
ದಾವಣಗೆರೆ ತಾಲೂಕಿನ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕುಕ್ಕುವಾಡ ಗ್ರಾಮದಲ್ಲಿ ಧರ್ಮರಾಯ ಎನ್ನುವವರ ಜಮೀನಿನಲ್ಲಿ ನೀರಿಗಾಗಿ ಬೋರ್‌ವೆಲ್ ಕೊರೆಸಲು ಉದ್ದೇಶಿಸಲಾಗಿತ್ತು. ಲಾರಿಯೂ ಬಂದಿತ್ತು. ಜತೆಗೆ ಸಹಾಯಕ್ಕೆ ಎಂದು ಮತ್ತೊಂದು ಲಾರಿ ಬಂದಿತ್ತು. ಈ ವೇಳೆ ಬೋರ್‌ವೆಲ್ ಕೊರೆಸಲು ಸಹಾಯಕ್ಕೆ ಬಂದಿದ್ದ ಲಾರಿ ಹೊತ್ತಿ ಉರಿದಿದೆ. ಧರ್ಮರಾಯ ಎಂಬುವವರ ಜಮೀನಿನಲ್ಲಿ ಲಾರಿ ಸುಟ್ಟು ಕರಕಲಾಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
