ದಾವಣಗೆರೆ | ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಬೂತ್ ಮತದಾರಿಂದ ಮತದಾನ ಬಹಿಷ್ಕಾರಕ್ಕೆ ತೀರ್ಮಾನ

Date:

Advertisements

ದಾವಣಗೆರೆ ಜಿಲ್ಲೆ, ಹರಿಹರ ತಾಲೂಕು ನಗರಸಭೆ ವ್ಯಾಪ್ತಿಯ ಹತ್ತನೇ ವಾರ್ಡಿನ ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಬೂತ್ ನಂಬರ್ 48ರ ಸಾರ್ವಜನಿಕರಿಂದ 1356 ಮತಗಳು ಇರುವ ಪ್ರದೇಶದಲ್ಲಿ ಈ ಬಾರಿ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ವಾರ್ಡಿನ ಮುಖಂಡ ಮೂರ್ತಿ ಎಚ್ ಕೆ ಮಾತನಾಡಿ, “ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನದ ದಿನದಂದು ಮತದಾನ ಮಾಡದೆ ಬಹಿಷ್ಕಾರ ಹಾಕಲಾಗುವುದು” ಎಂದು ಹೇಳಿದರು.

“ಭಾರತ್ ಆಯಿಲ್ ಮಿಲ್ ಕಾಂಪೌಂಡ್ ವಿನಾಯಕ ನಗರ, ಪೌರಕಾರ್ಮಿಕರ ಬಡಾವಣೆಯಲ್ಲಿ ಅತಿಹೆಚ್ಚು ಬಡ ಕೂಲಿ ಕಾರ್ಮಿಕರು ಜೀವನ ನಡೆಸುತ್ತಾರೆ ಹಾಗೂ ಅತಿ ಹೆಚ್ಚು ಅವಿದ್ಯಾವಂತರಿದ್ದಾರೆ. ಸುಮಾರು 50ರಿಂದ 60 ವರ್ಷಗಳ ಕಾಲ ಇಲ್ಲಿನ ಬಡಾವಣೆಯ ಸ್ಥಳದಲ್ಲಿಯೇ ಜೀವನ ನಡೆಸಿಕೊಂಡು ಹೋಗುತ್ತಿದ್ದು, ಮೂಲಭೂತ ಸೌಕರ್ಯಗಳಾದ ಚರಂಡಿ, ವಿದ್ಯುತ್ ದೀಪ, ಶುದ್ಧ ಕುಡಿಯುವ ನೀರಿನ ಘಟಕ, ಅಂಗನವಾಡಿ ಕೇಂದ್ರ, ಸಮುದಾಯ ಭವನ, ಯುಜಿಡಿ ಕಾಮಗಾರಿ, ಶೌಚಾಲಯ ಸ್ವಚ್ಛತೆ ಸೇರಿದಂತೆ ಇನ್ನು ಹಲವಾರು ಮೂಲ ಸೌಕರ್ಯಗಳನ್ನು ಸರ್ಕಾರ ನಮಗೆ ಒದಗಿಸಿಲ್ಲ. ಜತೆಗೆ ಇಲ್ಲಿನ ಬಡಾವಣೆಯನ್ನು ಸ್ಲಂ ಏರಿಯಾ ಎಂದು ಗುರುತಿಸಿದ್ದರೂ ಕೂಡಾ  ಈವರೆಗೆ ರಾಜ್ಯ ಸರ್ಕಾರವಾಗಲಿ ಸ್ಥಳೀಯ ಆಡಳಿತವಾಗಲಿ ಹಕ್ಕುಪತ್ರಗಳನ್ನು ನೀಡುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡಾ ಸರ್ಕಾರ ಮೂಲ ಸೌಕರ್ಯ ಒದಗಿಸುವಲ್ಲಿ ಅನ್ಯಾಯ ಧೋರಣೆ ಅನುಸರಿಸುತ್ತಿದೆ” ಎಂದು ಆರೋಪಿಸಿದರು.

Advertisements

“ವಾರ್ಡಿನ ಬೂತ್ ಸಂಖ್ಯೆ 48ರ 1356 ಮತದಾರರು ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕವಾಗಿ ಮತದಾನದಿಂದು ದೂರ ಉಳಿದು ಮತದಾನ ಬಹಿಷ್ಕಾರ ಮಾಡಲು ತೀರ್ಮಾನ ಮಾಡಿರುತ್ತೇವೆ ಎಂದು ಹೇಳಿದರು.

ಸ್ಥಳೀಯ ನಿವಾಸಿ ಕರಿಯಮ್ಮ ಮಾತನಾಡಿ, “ನಮಗೆ ಇಲ್ಲಿ ಶೌಚಾಲಯ ಇಲ್ಲದೇ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಹೋಗಬೇಕು. ಅಲ್ಲಿ ಸಮಸ್ಯೆ ಅಥವಾ ಜನಸಂದಣಿ ಹೆಚ್ಚಾದರೆ ದೂರದಲ್ಲಿರುವ ಜಾಲಿ ಗಿಡಗಳನ್ನು ಆಶ್ರಯಿಸಬೇಕಿದೆ. ಅಲ್ಲಿಗೆ ಹೋಗುವಾಗ ಕೆಲವು ಗಂಡಸರು, ಕುಡುಕರು ಅಸಹ್ಯವಾಗಿ ನೋಡುತ್ತಾರೆ. ಸರಿಯಾದ ನೀರಿನ ವ್ಯವಸ್ಥೆ, ಚರಂಡಿ, ರಸ್ತೆಗಳಿಲ್ಲ. ಈ ಬಗ್ಗೆ ಯಾವ ಜನಪ್ರತಿನಿಧಿಗಳೂ ಗಮನ ಹರಿಸಿಲ್ಲ. ಹೀಗಾದರೆ ಯಾವ ಉಪಯೋಗಕ್ಕಾಗಿ ನಾವು ಮತದಾನ ಮಾಡಬೇಕು” ಎಂದು ಅಸಹನೆ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪೆನ್‌ಡ್ರೈವ್ ಪ್ರಕರಣ ಮುಚ್ಚಿಹಾಕುವ ಹುನ್ನಾನಡೆದಿದೆ: ಗೋಮಾರದಹಳ್ಳಿ ಮಂಜುನಾಥ್

ಕೃಷ್ಣ ಎಂ, ಯಮನೂರ, ಹನುಮಂತಪ್ಪ, ರಮೇಶ್ ಬನ್ನಿಮಟ್ಟಿ, ಪರಶುರಾಮ.ಡಿ, ಅಣ್ಣಪ್ಪ, ಗೀತಮ್ಮ, ಕವಿತಾ ಎಂ ಕೆ, ಅಕ್ಕಮ್ಮ, ಕವಿತಾ, ರಶ್ಮಿ, ಲಕ್ಷ್ಮಮ್ಮ, ಪ್ರೇಮ, ನೀಲಮ್ಮ ಸೇರಿದಂತೆ ವಾರ್ಡಿನ ಹಲವಾರು ಮುಖಂಡರುಗಳು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X