ದಾವಣಗೆರೆ | ಬಿಜೆಪಿಗರು ಬಾಬಾ ಸಾಹೇಬರ ಸಂವಿಧಾನವನ್ನು ಮುಗಿಸಲು ತೀರ್ಮಾನಿಸಿದ್ದಾರೆ: ಜಿಗ್ನೇಶ್ ಮೇವಾನಿ

Date:

Advertisements

ಬಸವಣ್ಣನ ಜನ್ಮ ಭೂಮಿಯಲ್ಲಿ ಆರೆಸ್ಸೆಸ್‌ನವರನ್ನು ಓಡಿಸುವ ಸಮಾವೇಶವನ್ನು ಮಾಡುತ್ತಿರುವುದಕ್ಕಾಗಿ ನಿಮಗೆ ಅಭಿನಂಧನೆಗಳು. ಆರೆಸ್ಸೆಸ್ ಮತ್ತು ಬಿಜೆಪಿಯ ಜನರು ಬಾಬಾ ಸಾಹೇಬರ ಸಂವಿಧಾನವನ್ನು ಮುಗಿಸಲು ತೀರ್ಮಾನ ಕೈಗೊಂಡಿದ್ದಾರೆ. ಆದರೆ ನೀವು ಸಂವಿಧಾನವನ್ನು ಮನೆ ಮನೆಗೆ ಕೊಂಡುಹೋಗಬೇಕೆಂದು ತೀರ್ಮಾನ ಮಾಡಿದ್ದೀರಿ ಎಂದು ಹೋರಾಟಗಾರ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಶ್ಲಾಘನೆ ವ್ಯಕ್ತಪಡಿಸಿದರು.

ಸಂವಿಧಾನ ಸಂರಕ್ಷಕರ ಪಡೆ ಕಟ್ಟುವ ಸಂವಿಧಾನ ಸಂರಕ್ಷಕರ ಸಮಾವೇಶದಲ್ಲಿ ಮಾತನಾಡಿದ ಅವರು, “ಈ ಭಾರತ ಭೂಮಿ ಮೋದಿ ಮತ್ತು ಅಮಿತ್‌ ಶಾ, ಮೋಹನ್ ಭಾಗವತ್ ಅವರ ಅಪ್ಪನ ಭೂಮಿಯಲ್ಲ. ಇದು ಬಸವಣ್ಣ, ಮಹಾವೀರ, ಸೂಫಿ ಸಂತರು, ಭಗತ್ ಸಿಂಗ್, ಸುಖದೇವ್, ರಾಜಗುರು, ನಾರಾಯಣಗುರು, ಅಶ್ಪಾಕುಲ್ಲಾ ಅವರ ಭೂಮಿಯಾಗಿದೆ. ಭಗತ್‌ ಸಿಂಗ್ ಅವರಂತಹ ಕ್ರಾಂತಿ ಕಾರಿ ತನ್ನ ಜೀವ ನೀಡಿದ್ದಾರೆ. ಇಂತಹ ಭೂಮಿಯನ್ನು ನಾವು ನಾಶ ಮಾಡಲು ಬಿಡುವುದಿಲ್ಲ. ಈ ಭೂಮಿಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಹೊಸ ಪೀಳಿಗೆಯವರಾದ ನಾವುಗಳು ಕೈಗೆತ್ತಿಕೊಳ್ಳಬೇಕಿದೆ” ಎಂದು ಕರೆ ನೀಡಿದರು.

“ನಾನು ಗುಜರಾತ್‌ನಿಂದ ಬರುತ್ತಿದ್ದೇನೆ . ಅಲ್ಲಿ ಚುನಾವಣೆಗಾಗಿ 2002ರಲ್ಲಿ ಗಲಭೆ ಮಾಡಿದರು. ನಂತರ ಮೋದಿ ಅವರ ಮೇಲಿನ ಕೊಳೆ ತೊಳೆಯಲು ವೈಬ್ರಂಟ್ ಗುಜರಾತ್ ಎಂಬ ಕಾರ್ಯಕ್ರಮ ಮಾಡಲಾಯಿತು. ಅಲ್ಲಿ ಬಂಡವಾಳ ಶಾಹಿಗಳಿಗೆ ಎಲ್ಲವನ್ನು ದಾರಾಳವಾಗಿ ನೀಡಲಾಯಿತು. ಈಗಿನ ಎಲ್ಲ ಬಂಡವಾಳಶಾಹಿಗಳು ಮೋದಿ ಮತ್ತು ಆರೆಸ್ಸೆಸ್ ಪರವಾಗಿದ್ದಾರೆ. ಎಲ್ಲೆಲ್ಲೂ ಕೂಡ ಸಂಘಪರಿವಾರದ ವಿರುದ್ಧವಾಗಿ ಸಂವಿಧಾನದ ಶಾಖೆಗಳನ್ನು ತೆರೆಯಬೇಕಾಗಿದೆ” ಎಂದು ಕರೆ ನೀಡಿದರು.

Advertisements
ಸಂವಿಧಾನ ಸಂರಕ್ಷಣೆ

“ಚುನಾವಣಾ ರಾಜಕೀಯದಿಂದ ಮಾತ್ರ ಎಲ್ಲವೂ ಸರಿಯಾಗುವುದಿಲ್ಲ. ಹೌದು ಅವರನ್ನು ಗುಜರಾತ್‌ ಸೇರಿದಂತೆ ಎಲ್ಲಡೆ ಸೋಲಿಸಬೇಕು ಎಂಬುವುದು ನಿಜವೇ ಆಗಿದೆ. ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದರು, ಅದು ಸಂಘರ್ಷ, ಸಂಘರ್ಷ ಮತ್ತು ಸಂಘರ್ಷ. ಅದು ಸೋಲಾಗಲಿ ಅಥವಾ ಗೆಲುವಾಗಲಿ, ಹೋರಾಟ ಮಾಡುತ್ತಲೇ ಇರಬೇಕು” ಎಂದರು.

“ಬಸವಣ್ಣನವರ ಈ ನೆಲದಲ್ಲಿ, ಬಾಬಾಸಾಹೇಬರ ಸಮಾನತೆ, ಸಾಮಾಜಿಕ ನ್ಯಾಯದ ಆಶಯದ ಸಂವಿಧಾನದ ಮೇಲೆ ದಾಳಿ ಮಾಡಿ ಮುಗಿಸಲು ಬಿಜೆಪಿಯವರು ತೀರ್ಮಾನ ಮಾಡಿರುವ ಹೊತ್ತಿನಲ್ಲಿ ಸಂವಿಧಾನವನ್ನು ಉಳಿಸುವ ತೀರ್ಮಾನ ಮಾಡಿರುವ ನಿಮ್ಮ ಪ್ರಯತ್ನ ಇತಿಹಾಸದ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ” ಎಂದು ಹೇಳಿದರು.

ಸಂವಿಧಾನ ಸಂರಕ್ಷಣೆ 1

“ಗುಜರಾತ್ ಗಲಭೆ ನಡೆಸಿ ಅಲ್ಪಸಂಖ್ಯಾತರ ಮಾರಣ ಹೋಮ ಸರ್ಕಾರದ ಮೂಗಿನ ಕೆಳಗೆ ನಡೆದು, ಇಡೀ ಪ್ರಪಂಚದ ಪ್ರಜ್ಞಾವಂತರು ಮೋದಿಯನ್ನು ಟೀಕಿಸಿದಾಗ, ಮೋದಿಯವರ ಸಲಹೆಗಾರರು ‘ವೈಬ್ರಂಟ್ ಗುಜರಾತ್ ಸಮ್ಮಿಟ್’ ಸಂಘಟಿಸಿ ಎಲ್ಲ ಬಂಡವಾಳಿಗರನ್ನು ಕರೆದು ಅಭಿವೃದ್ಧಿಯ ಹರಿಕಾರನಂತೆ ಫೋಸ್ ಕೊಡಿ ಅಂತ ಹೇಳಿದರು. ಅವರುಗಳನ್ನು ಕರೆದು ಅವರಿಗೆ ನಿಮಗೆ ಭೂಮಿ, ಕರೆಂಟ್, ಬಂಡವಾಳ ಎಲ್ಲವನ್ನೂ ಒದಗಿಸುತ್ತೇವೆಂದು ಹೇಳಿದರು, ಇದನ್ನೇ ಅವರ ತಂತ್ರವಾಗಿಸಿಕೊಂಡು ಇಂದು ತಮ್ಮ ಎಲ್ಲ ಸಂಪನ್ಮೂಲಗಳನ್ನು ಈ ಬಂಡವಾಳಿಗರಿಂದ ಪಡೆದುಕೊಂಡು ಅವರ ಜೇಬು ತುಂಬಿಸುವ ಎಲ್ಲ ಕೆಲಸಗಳನ್ನೂ ಅವರುಗಳು ಮಾಡುತ್ತಿದ್ದಾರೆ. ಇಡೀ ದೇಶದ ಬಂಡವಾಳಿಗರಿಂದು ಅದಾನಿ ಅಂಬಾನಿಗಳಂತೆ ಮೋದಿ ಪಡೆಯ ಜತೆಗೆ ನಿಂತಿದ್ದಾರೆ. ಶ್ರಮಜೀವಿಗಳು, ಬಡವರು, ದಲಿತರು ಇವರ ದಾಳಿಗಳಿಗೆ ಗುರಿಯಾಗುತ್ತಿದ್ದಾರೆ. ಮುಂದಿರುವ ದಾರಿ ಒಂದೇ, ನಾವೆಲ್ಲ ಸಂವಿಧಾನ ಪ್ರೇಮಿಗಳು. ನಮ್ಮ ನಮ್ಮ ಊರುಗಳಲ್ಲಿ, ಕೇರಿಗಳಲ್ಲಿ, ಜಿಲ್ಲೆಗಳಲ್ಲಿ ಆರೆಸ್ಸೆಸ್ ಶಾಖೆಗಳ ವಿರುದ್ಧ ಸಂವಿಧಾನದ ಪಡೆಗಳನ್ನು ಕಟ್ಟೋಣ, ಸಂವಿಧಾನದ ಆಶಯಗಳನ್ನು ನಿಜವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡೋಣ” ಎಂದು ಕೋರಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೇಶದಲ್ಲಿ ಬೌದ್ಧಿಕ ವಲಯವೂ ಕೂಡ ಜಾತಿ, ಧರ್ಮ, ಪಕ್ಷಗಳಾಗಿ ವಿಭಜಿತ ಗೊಂಡಿದೆ; ನಾಡೋಜ ಬರಗೂರು ರಾಮಚಂದ್ರಪ್ಪ.

“ಪಕ್ಷಗಳ ಮೇಲೆ, ರಾಜಕಾರಣಿಗಳ ಮೇಲೆ ನಂಬಿಕೆಯಿಡಬೇಡಿರೆಂದು ಸ್ನೇಹಿತ ಪರಕಾಲ ಪ್ರಭಾಕರ್ ಹೇಳಿದರು, ನನಗೂ ನಾಗರಿಕರಿಗಿಂತ ಯಾರು ಬೀದಿಗಿಳಿದು ರೈತರಿಗಾಗಿ, ಕಾರ್ಮಿಕರಿಗಾಗಿ, ಮಹಿಳೆಯರಿಗಾಗಿ, ದಲಿತರಿಗಾಗಿ ಯುವಜನರಿಗಾಗಿ ಕ್ರಾಂತಿಗಾಗಿ ಚಳವಳಿ ಮಾಡುತ್ತಾರೋ ಅವರ ಮೇಲೆಯೇ ನನಗೆ ಹೆಚ್ಚು ನಂಬಿಕೆ. ನಾವು ಚುನಾವಣೆಯಲ್ಲಿ ಆರೆಸ್ಸೆಸ್ ಬಿಜೆಪಿಯನ್ನು ಸೋಲಿಸಬೇಕು. ಆದರೆ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ಬಾಬಾಸಾಹೇಬರು, ಶಿಕ್ಷಿತರಾಗಿ, ಸಂಘಟಿತರಾಗಿ, ಸಂಘರ್ಷ ನಡೆಸಿ ಎಂದು ಹೇಳೀದ್ದರು, ಭಗತ್ ಸಿಂಗ್ ಕೂಡಾ ನಿಜವಾದ ಸ್ವಾತಂತ್ರ್ಯಕ್ಕಾಗಿ ಸಂಘರ್ಷ ನಡೆಸಿ ಎಂದು ಹೇಳಿದ್ದರು. ಇಂದು ನಮ್ಮೆಲ್ಲರ ಗುರಿ ಅದೇ, ಈ ಬೀದಿ ಸಂಘರ್ಷದಲ್ಲಿ ನಾನು ನಿಮ್ಮೊಂದಿಗಿದ್ದೀನಿ. ಮತ್ತೆ ಮತ್ತೆ ಕರ್ನಾಟಕಕ್ಕೆ ಕರೆಯಿರಿ, ನಾನು ಮತ್ತೆ ಮತ್ತೆ ಗುಜರಾತ್‌ನಿಂದ ಬಂದು ಕರ್ನಾಟಕದಲ್ಲಿ ನಿಮ್ಮೊಂದಿಗೆ ಹೋರಾಟದ ಭಾಗವಾಗುತ್ತೇನೆ” ಎಂದು ಭರವಸೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X