50ನೇ ವರ್ಷದ ದಸಂಸ ಸುವರ್ಣ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಆಗಸ್ಟ್ 07ರ ಬುಧವಾರ ಬೆಂಗಳೂರಿನ ರಾಜ್ಯ ಸಮಿತಿ ಡಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ರಾಜ್ಯದ ಎಲ್ಲ ಕಾರ್ಯಕರ್ತರು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದಸಂಸ ದಾವಣಗೆರೆ ಜಿಲ್ಲಾ ಸಂಚಾಲಕ ಮಂಜುನಾಥ್ ಕುಂದುವಾಡ ಕರೆ ನೀಡಿದರು.
ದಾವಣಗೆರೆಯಲ್ಲಿ ನೆಡೆದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, “ದಸಂಸದ 50ನೇ ವರ್ಷದ ಸುವರ್ಣ ಸಂಭ್ರಮೋತ್ಸವ ಸ್ಮರಣೀಯವಾಗಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ದಸಂಸ ಸಂಸ್ಥಾಪನೆಯೇ ಸಮಾಜದ ಪರಿವರ್ತನೆ. ಶೋಷಿತ ಜನರ ರಕ್ಷಣೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಈ ನಿಟ್ಟಿನಲ್ಲಿ ಕಳೆದ 50 ವರ್ಷಗಳಿಂದ ದಸಂಸ ಶ್ರಮಿಸುತ್ತಿದೆ. ನಾವು ಇದರ ಭಾಗವಾಗಿರುವುದಕ್ಕೆ ಹೆಮ್ಮೆಪಡಬೇಕು. ಇಡೀ ಜಿಲ್ಲೆಯಿಂದ ಕಾರ್ಯಕ್ರಮಕ್ಕೆ ಸುಮಾರು 500 ಮಂದಿಯನ್ನು ಕರೆದುಕೊಂಡು ಹೋಗಬೇಕು” ಎಂದು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿ ತೀರ್ಪು ಶೀಘ್ರ ಜಾರಿಗೊಳ್ಳಬೇಕು: ದಸಂಸ ಮುಖಂಡ ಹೆಚ್ ಮಲ್ಲೇಶ್
ತಾಲೂಕು ಸಂಚಾಲಕ ಹನುಮಂತಪ್ಪ ಅಣಜಿ, ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಪ್ರದೀಪ್ ಕೆ ಟಿ ಜೆ ನಗರ, ಮಂಜುನಾಥ್ ಆರ್, ತಿಪ್ಪೇಶ್ ತಿಮ್ಮನಹಳ್ಳಿ, ಬಸವರಾಜ್ ಕತ್ತಲಗೆರೆ, ತಾಲೂಕು ಸಂಚಾಲಕರಾದ ಮಹಾಂತೇಶ್ ಪಿ ಜೆ ಕುಬೇಂದ್ರಪ್ಪ, ಪರಮೇಶ್, ತಾಲೂಕು ಮಹಿಳಾ ಸಂಚಾಲಕಿ ಆರತಿ ಎಸ್, ತಾಲೂಕು ಸಂಘಟನಾ ಸಂಚಾಲಕರುಗಳಾದ ನಾಗರಾಜ್ ಬಿ ಚಿತ್ತಾನಹಳ್ಳಿ, ಶಿವಶಂಕರ ಎಸ್ ಎಂ, ಸ್ಲಮ್ ಸಂಚಾಲಕ ನಾಗರಾಜ್ ಆನೆಕೊಂಡ, ರಂಗಪ್ಪ, ಪಾಂಡು, ಬಸವರಾಜ್, ವಿನೋದ್ ಹಾಗೂ ಇತರರು ಇದ್ದರು.
