ಶಿಕ್ಷಕಿಯೊಬ್ಬರನ್ನು ವಂಚಿಸಿ ಅತ್ಯಾಚಾರವೆಸಗಿದ ಆರೋಪದಡಿ ದಾವಣಗೆರೆ ನಗರದ ಜಯನಗರ ಬಡಾವಣೆಯ ಡಿಎಚ್‌ಎಂ ಚರ್ಚ್ ಪಾದ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಾದ್ರಿ ರಾಜಶೇಖರ್(58) ಬಂಧಿತ ಆರೋಪಿ. ಅತ್ಯಾಚಾರವೆಸಗಿ ವಂಚಿಸಿದ್ದಾರೆಂದು ಆರೋಪಿಸಿ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದರು. ಆರೋಪಿ ವಿರುದ್ಧ ಸೆಕ್ಷನ್ 376,(2) (2), 354(2), 323, 504, 506, 417, 420 ಪ್ರಕರಣ ದಾಖಲಾಗಿತ್ತು. ಕೃತ್ಯವೆಸಗಿ ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಪಾದ್ರಿಯ ಮೊಬೈಲ್ ಲೊಕೇಷನ್ ಆಧರಿಸಿ ಹೈದರಾಬಾದ್‌ನಲ್ಲಿ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದಾಗಿ ತಿಳಿದುಬಂದಿದೆ.
58ರ ಇಳಿ ವಯಸ್ಸಿನ ಪಾದ್ರಿ ಪಿ ರಾಜಶೇಖರ್ ಕೃತ್ಯ ಎಸಗಿದ್ದಾನೆಂದು ಆರೋಪಿಸಲಾಗಿದೆ. ಪಾದ್ರಿಯ ಕೃತ್ಯ ಇದೇ ಮೊದಲೇನಲ್ಲ. ಈ ಹಿಂದೆ ಚರ್ಚೆಗೆ ಬರುತ್ತಿದ್ದ ಹಲವು ಸ್ತ್ರೀಯರ ಮುಂದೆ ಅಸಭ್ಯವಾಗಿ ವರ್ತಿಸಿದ್ದ ಆರೋಪಗಳು ಕೇಳಿಬಂದಿದ್ದವು. ಪಾದ್ರಿಯ ವಿಕೃತ ಕಾಮುಕತನಕ್ಕೆ ಆತನ ಪುತ್ರಿಯೇ ಪಾದ್ರಿ ವಿರುದ್ಧ ಸುದ್ದಿಗೋಷ್ಟಿ ನಡೆಸಿ, ಅನ್ಯ ಸ್ತ್ರೀಯರ ಜತೆಗೆ ಅಸಭ್ಯವಾಗಿ ವರ್ತಿಸುತ್ತಾರೆಂದು ಆರೋಪಿಸಿದ್ದರು. ಇದಷ್ಟೇ ಅಲ್ಲದೆ ಚರ್ಚ್‌ಗೆ ಬರುವ ಆರೇಳು ಮಂದಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾರೆಂದು ಪಾದ್ರಿ ಮಗಳು ಆರೋಪಿಸಿದ್ದರು.
ಆರು ಮಂದಿ ಮಹಿಳೆಯರಿಗೆ ಹೀಗೆ ಮಾಡಿದ್ದಾರೆಂದು ಸ್ವತಃ ಅವರ ಮಗಳೇ ಗಂಭೀರ ಆರೋಪ ಮಾಡಿದ್ದರು. ಪಾದ್ರಿ ರಾಜಶೇಖರ್ ವರ್ತನೆ ಬಗ್ಗೆ ಮಹಿಳೆಯರು ಅವರ ಮಗಳ ಬಳಿ ಸಂಕಟ ತೋಡಿಕೊಂಡಿದ್ದರು. ಇದೀಗ ಓರ್ವ ಶಿಕ್ಷಕಿಗೂ ಅನ್ಯಾಯ ಮಾಡಿದ್ದಾರೆ. ಆ ಶಿಕ್ಷಕಿಯ ಸರ್ವಿಸ್ ರಿಜಿಸ್ಟರ್‌ನಲ್ಲಿ ನಾಮಿನಿಯಾಗಿ ರಾಜಶೇಖರ್ ಹೆಸರು ಇರುವ ದಾಖಲೆಯೂ ಇದೆ ಎಂಬುದು ಮಗಳ ಆರೋಪವಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಜಾ ಅಮರೇಶ್ವರ ನಾಯಕರಿಂದ ಜಾತಿ ದುರ್ಬಳಕೆ ಆರೋಪ; ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ
ಪಾದ್ರಿ ರಾಜಶೇಖರ್ ವಿರುದ್ದ ದೂರು ಕೊಡುವುದಕ್ಕೆ ದಾವಣಗೆರೆ ಕ್ರಿಶ್ಚಿಯನ್ ಸಂಘಟನೆಗಳು ಮುಂದಾಗಿವೆ. ದಲಿತ ಮಹಿಳೆಗೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಕೊಂಡು ಮದುವೆಯಾಗುತ್ತಿದ್ದಾನೆಂದು ಬಂಜಾರ ಸಮಾಜ ಕೂಡ ಆರೋಪ ಮಾಡಿತ್ತು. ಪಾದ್ರಿ ರಾಜಶೇಖರ್ ಹಿಂದಿನಿಂದ ಇಂಥ ಕೃತ್ಯಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಆದರೆ ಯಾರೂ ದೂರು ದಾಖಲು ಮಾಡಿರಲಿಲ್ಲ. ದೂರು ದಾಖಲಾದ ಬಳಿಕ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ ಆರೋಪಿಯು ಈಗ ಬಂಧನಕ್ಕೊಳಗಾಗಿದ್ದಾರೆ.
