ದಾವಣಗೆರೆ ಜಿಲ್ಲೆ ಹರಿಹರ ನಗರಸಭೆಯಿಂದ ಪರವಾನಗಿ ಪಡೆಯದೆ ಮುಖ್ಯ ವೃತ್ತಗಳಲ್ಲಿ ಅಳವಡಿಸಿದ್ದ ಬೋರ್ಡ್, ಪ್ಲೆಕ್ಸ್ ತೆರವುಗೊಳಿಸಲು ಹರಿಹರ ನಗರಸಭೆ ಆಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ನಗರಸಭಾ ಆರೋಗ್ಯ ನಿರೀಕ್ಷಕರ ತಂಡ ಕಾರ್ಯಾಚರಣೆಗೆ
ಮುಂದಾಯಿತು.
ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಆಯುಕ್ತರು, “ಅನಧಿಕೃತವಾಗಿ ಅಳವಡಿಸಿದ್ದ ಪ್ಲೆಕ್ಸ್ ಹಾಗೂ ಭಿತ್ತಿ ಪತ್ರಗಳಿಂದ ಅಂದಗೆಟ್ಟಿದ್ದ ನಗರದಲ್ಲಿ ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತದೆ. ಯಾವುದೇ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ಇತರೆ ವ್ಯಕ್ತಿಗಳು ನಗರಸಭೆಯಿಂದ ಅನುಮತಿ ಪಡೆಯದೆ ಅಕ್ರಮವಾಗಿ ನಗರದ ನಾನಾ ಕಡೆಗಳಲ್ಲಿ ಪ್ಲೆಕ್ಸ್ ಹಾಗೂ ಜನ್ಮದಿನದ ಶುಭಾಷಯ ಕೋರುವ ಭಿತ್ತಿಪತ್ರಗಳನ್ನು ಸರ್ಕಾರಿ ಕಚೇರಿ ಗೋಡೆ, ಕಾಂಪೌಂಡ್ ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗುತ್ತಿದೆ. ಇದರಿಂದ ನಗರಸಭೆಯ ಸೌಂದರ್ಯ ಹಾಳು ಮಾಡಲಾಗುತ್ತಿದೆ. ನಗರಸಭೆಯಿಂದ ಪರವಾನಿಗೆ ಪಡೆಯದೆ ಅಳವಡಿಸಿದ ಅನಧಿಕೃತ ಪ್ಲೆಕ್ಸ್ ಬೋರ್ಡ್‌ಗಳನ್ನು ಯಾವುದೇ ಮುಲಾಜಿಲ್ಲದೇ ನಗರಸಭೆಯಿಂದ ತೆರವುಗೊಳಿಸಿ ಕಾನೂನು ರೀತಿ ಕ್ರಮಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಿದ್ದ ಮಾದರಿಯ ಸಾಮಾಜಿಕ ಸಂರಕ್ಷಣೆ ಮೀರಿ ಬೆಳೆಯಬೇಕು: ಬರಗೂರು ರಾಮಚಂದ್ರಪ್ಪ
“ಇನ್ನು ಮುಂದೆ ಯಾವುದೇ ಪ್ಲೆಕ್ಸ್ ಬೋರ್ಡ್‌ಗಳನ್ನು ಅಳವಡಿಸಬೇಕಾದರೆ ನಗರಸಭೆಯಿಂದ ಪರವಾನನಗಿ ಪಡೆದು ಅಳವಡಿಸಬೇಕು” ಎಂದು ತಿಳಿಸಿದರು.
ಹಿರಿಯ ಆರೋಗ್ಯ ಅಧಿಕಾರಿ ಸಂತೋಷ್ ನಾಯ್ಕ, ನಗರಸಭೆ ಆರೋಗ್ಯ ಇಲಾಖೆಯ ಟ್ರೈನರ್ ಸೌಜನ್ಯ, ಅಬ್ದುಲ್ ರೆಹಮಾನ್, ನಗರಸಭೆ ಸಿಬ್ಬಂದಿ ಪೌರಕಾರ್ಮಿಕರು ತೆರವು ಕಾರ್ಯಚರಣೆಯಲ್ಲಿ ಇದ್ದರು.